ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ : ಐರ್ಲೆಂಡ್ ವಿರುದ್ಧ ಭಾರತಕ್ಕ್ಕೆ ದಾಖಲೆ ಜಯ

By Mahesh

ಹ್ಯಾಮಿಲ್ಟನ್, ಮಾ.10 : ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 8 ವಿಕೆಟ್ ಗಳ ಜಯವನ್ನು ಧೋನಿ ಪಡೆ ದಾಖಲಿಸಿದೆ. ಈ ಪಂದ್ಯ ಗೆಲ್ಲುವ ಮೂಲಕ ಸತತ ಐದು ಪಂದ್ಯ ಗೆದ್ದ ದಾಖಲೆ ಧೋನಿ ಪಾಲಾಗಿದೆ. ಜೊತೆಗೆ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದ್ದಾರೆ.

260 ರನ್ ಚೇಸ್ ಮಾಡಿರುವ ಟೀಂ ಇಂಡಿಯಾ ರೋಹಿತ್ ಶರ್ಮ ಅರ್ಧಶತಕ ಹಾಗೂ ಶಿಖರ್ ಧವನ್ ಶತಕದ ನೆರವಿನಿಂದ ಗುರಿಯನ್ನು 36.5 ಓವರ್ ಗಳಲ್ಲಿ ತಲುಪಿದೆ. [ಸಚಿನ್- ಜಡೇಜ ದಾಖಲೆ ಮುರಿದ ರೋಹಿತ್-ಶಿಖರ್]

ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಅವರ ದಾಖಲೆ ಜೊತೆಯಾಟದ ಮೂಲಕ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತು. ರೋಹಿತ್ ಶರ್ಮ ಆಕರ್ಷಕ ಅರ್ಧ ಶತಕ 64ರನ್ (66ಎ, 3x4,3x6) ಗಳಿಸಿ ಥಾಮ್ಸನ್ ಬೌಲಿಂಗ್ ನಲ್ಲಿ ಬೋಲ್ಡ್ ಆದರು.

ಶಿಖರ್ ಧವನ್ 85 ಎಸೆತಗಳಲ್ಲಿ 100ರನ್ (11x4, 5x6)ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು. ವಿಶ್ವಕಪ್ ನಲ್ಲಿ ಇದು ಧವನ್ ಅವರ ಎರಡನೇ ಶತಕವಾಗಿದ್ದು, ಒಟ್ಟಾರೆ ವೈಯಕ್ತಿಕ 8ನೇ ಶತಕವಾಗಿದೆ.

Shikhar Dhawan


ಧವನ್ ಹಾಗೂ ರೋಹಿತ್ ಹಾಕಿಕೊಟ್ಟ ಅಡಿಪಾಯದ ಮೇಲೆ ಕೊಹ್ಲಿ 44 ರನ್(42 ಎ, 4x4,1x6) ಹಾಗೂ ಅಜಿಂಕ್ಯ ರಹಾನೆ 33 ರನ್(28ಎ, 6x4) ಗಳಿಸಿ ಟೀಂ ಇಂಡಿಯಾವನ್ನು ಗೆಲುವಿನ ದಡ ಮುಟ್ಟಿಸಿದರು. [ಕಪಿಲ್ ರೆಕಾರ್ಡ್ ಮುರಿದ ಕ್ಯಾಪ್ಟನ್ ಎಂಎಸ್ ಧೋನಿ]

ಹಾಲಿ ವಿಶ್ವ ಚಾಂಪಿಯನ್ ಟೀಂ ಇಂಡಿಯಾ ವಿರುದ್ಧ ಅಳುಕಿಲ್ಲದೆ ಐರ್ಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡರೂ ಲಾಭ ಪಡೆಯಲಾಗಲಿಲ್ಲ. 49 ಓವರ್ಸ್ ಗಳಲ್ಲಿ 259 ರನ್ ಸ್ಕೋರ್ ಮಾಡಿ ಆಲೌಟ್ ಆಗಿದೆ.


ಸತತ ಐದನೇ ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡುವ ಮೂಲಕ ಟೀಂ ಬೌಲರ್ ಗಳು ಹೊಸ ದಾಖಲೆ ಬರೆದಿದ್ದಾರೆ.
Rohith Sharma

ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ವಿಕೆಟ್ ಗೆ 89 ರನ್ ಕಲೆ ಹಾಕಿದ ಐರ್ಲೆಂಡ್ ನಂತರ ತಾಳ್ಮೆಯುತ ಆಟವಾಡಿ 32 ಓವರ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡಿತು. [ವಿಶ್ವಕಪ್ : ಕ್ವಾರ್ಟರ್ ಫೈನಲ್ ಯಾವ ಯಾವ ತಂಡ?]

ನಾಯಕ ಪೋರ್ಟರ್ಫೀಲ್ಡ್ ಅವರ ಅರ್ಧಶತಕ ಔಟಾಗಿದ್ದು ತಂಡಕ್ಕೆ ಮುಳುವಾಗಿದೆ. ಸ್ಟರ್ಲಿಂಗ್ 42 ರನ್ ಗಳಿಸಿ ಐರ್ಲೆಂಡ್ ಗೆ ಉತ್ತಮ ಆರಂಭ ಒದಗಿಸಿದರು. 4 ಬೌಂಡರಿ 2 ಸಿಕ್ಸ್ ಸ್ಟರ್ಲಿಂಗ್ ಅವರು ಅಶ್ವಿನ್ ಎಸೆತದಲ್ಲಿ ರಹಾನೆಗೆ ಕ್ಯಾಚಿತ್ತು ಔಟ್ ಆದರು. ಜಾಯ್ಸ್ 2 ರನ್ ಗಳಿಸಿ ರೈನಾಗೆ ಬೋಲ್ಡ್ ಆದರು.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

India vs Ireland, Hamilton


ಮಧ್ಯಮ ಕ್ರಮಾಂಕದಲ್ಲಿ ಓಬ್ರಿಯಾನ್ 75 ಎಸೆತಗಳಲ್ಲಿ 75 ರನ್ (7X4, 3X6) ಉತ್ತಮ ಆಟ ಪ್ರದರ್ಶಿಸಿದರು. ಅವರಿಗೆ 24 ರನ್ ಗಳಿಸಿದ ಬಲ್ಬಿರ್ನಿ ಸಾಥ್ ನೀಡಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ಟ್ವೀಟ್ ತಲೆ ಬರಹ:
ಭಾರತದ ಎದುರು ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಗಿಂತ ಐರ್ಲೆಂಡ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ.

ಮಹಮ್ಮದ್ ಶಮಿ 9-0-41-3 ಅಂತಿಮ ಹಂತದಲ್ಲಿ ಉತ್ತಮ ಬೌಲಿಂಗ್ ಮಾಡಿ ರನ್ ವೇಗ ನಿಯಂತ್ರಿಸಿದರು. ಉಳಿದಂತೆ ಅಶ್ವಿನ್ 38ಕ್ಕೆ2 ಎಂದಿನಂತೆ ಬ್ಯಾಟ್ಸ್ ಮನ್ ಗಳನ್ನು ಕಾಡಿದರು. ರೈನಾ, ಯಾದವ್, ಮೋಹಿತ್ ಶರ್ಮ, ಜಡೇಜ ತಲಾ 1 ವಿಕೆಟ್ ಪಡೆದರು.
Team India


ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸ್ಟುವರ್ಟ್ ಬಿನ್ನಿ ಆಡಿಸುವ ಸಾಧ್ಯತೆಯನ್ನು ಧೋನಿ ತಳ್ಳಿ ಹಾಕಿದ್ದು, ಗೆಲುವಿನ ತಂಡವನ್ನೇ ಉಳಿಸಿಕೊಳ್ಳುವ ಇರಾದೆ ಇದೆ ಎಂದು ಹೇಳಿದ್ದಾರೆ. ಐರ್ಲೆಂಡ್ ತಂಡದಲ್ಲಿ ಥಾಮನ್ಸ್ ಮೊದಲ ಪಂದ್ಯವಾಡುತ್ತಿದ್ದಾರೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X