ಶಾರ್ಜಾದಲ್ಲಿ ಸಚಿನ್, ಮೊಹಾಲಿಯಲ್ಲಿ ಕೊಹ್ಲಿ ಯಾರು ಬೆಸ್ಟ್?

Posted By:
Subscribe to Oneindia Kannada

ಮೊಹಾಲಿ, ಮಾರ್ಚ್ 28: ವಿರಾಟ್ ಕೊಹ್ಲಿ ಮೊಹಾಲಿಯಲ್ಲಿ ರನ್ ಮಳೆ ಹರಿಸಿ ಕ್ರಿಕೆಟ್ ಪ್ರೇಮಿಗಳಿಗೆ ರಂಜನೆ ನೀಡಿದ್ದನ್ನು ಕಂಡು ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸಚಿನ್ ಜೊತೆ ಕೊಹ್ಲಿ ಅವರನ್ನು ಹೋಲಿಸಿದ್ದಾರೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ |ಟೂರ್ನಿಗೆ ಫುಲ್ ಗೈಡ್

ಮಾರ್ಚ್ 27ರ ಭಾನುವಾರ ಭಾರತದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ ಕೊಹ್ಲಿಯನ್ನು ವಿಶ್ವದ ಕ್ರಿಕೆಟ್ ದಿಗ್ಗಜರು ಹಾಡಿ ಹೊಗಳಿದ್ದಾರೆ. ಖುದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಕೊಹ್ಲಿ ಆಟಕ್ಕೆ ಮನಸೋತಿರುವುದಾಗಿ ಹೇಳಿದ್ದಾರೆ.[ಅನುಷ್ಕಾ ಮೇಲೆ ಗೂಬೆ ಕೂರಿಸ್ಬೇಡಿ ಪ್ಲೀಸ್: ವಿರಾಟ್ ತರಾಟೆ]

 Virat Kohli's 'hailstorm in Mohali' on par with Sachin Tendulkar's 'sandstorm in Sharjah': R Ashwin

51 ಎಸೆತಗಳಲ್ಲಿ ಅಜೇಯ 82ರನ್ ಚೆಚ್ಚಿದ ಕೊಹ್ಲಿ ಅವರು ಇನ್ನೂ 5 ಎಸೆತ ಬಾಕಿ ಇರುವಂತೆ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗಳ ಜಯ ದಾಖಲಿಸಲು ನೆರವಾದರು. ಈಗ ಮಾರ್ಚ್ 31ರಂದು ವೆಸ್ಟ್ ಇಂಡೀಸ್ ವಿರುದ್ಧ ಸೆಮಿಫೈನಲ್ ನಲ್ಲಿ ಭಾರತ ಸೆಣಸಲಿದೆ.[ಸೆಹ್ವಾಗ್ ನುಡಿದ ಟಿ20 ಭವಿಷ್ಯ: ಬಹುತೇಕ ನಿಜವಾಯ್ತು!]

ಸಚಿನ್ ಜೊತೆ ಹೋಲಿಕೆ ಏಕೆ? : 1998ರ ಏಪ್ರಿಲ್ ನಲ್ಲಿ ಶಾರ್ಜಾದಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಲ ಮರಿ ಸಚಿನ್ ಅವರು ಇದೇ ರೀತಿ ವೀರಾವೇಶದ ಬ್ಯಾಟಿಂಗ್ ಪ್ರದರ್ಶಿಸಿದ್ದರು. 131 ಎಸೆತಗಳಲ್ಲಿ 143 (9x4,5x6) ಬಾರಿಸಿ ಕೋಕಾ ಕೋಲಾ ಕಪ್ ಫೈನಲ್ ತಲುಪಲು ನೆರವಾಗಿದ್ದರು. ಕೊನೆಯಲ್ಲಿ ಭಾರತ 26 ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡಿತ್ತು. [ಪಂದ್ಯದ ಸ್ಕೋರ್ ಕಾರ್ಡ್]

-
-
-
-
-
-
-
-
-
-
-
-
-
-
-
ಶಾರ್ಜಾದಲ್ಲಿ ಸಚಿನ್, ಮೊಹಾಲಿಯಲ್ಲಿ ಕೊಹ್ಲಿ ಯಾರು ಬೆಸ್ಟ್?

ಶಾರ್ಜಾದಲ್ಲಿ ಸಚಿನ್, ಮೊಹಾಲಿಯಲ್ಲಿ ಕೊಹ್ಲಿ ಯಾರು ಬೆಸ್ಟ್?

-

ಆದರೆ, ಭಾರತಕ್ಕೆ ನ್ಯೂಜಿಲೆಂಡ್ ಗಿಂತ ಉತ್ತಮ ರನ್ ರೇಟ್ ಸಿಗುವಂತೆ ಮಾಡುವಲ್ಲಿ ಸಚಿನ್ ಯಶಸ್ವಿಯಾಗಿದ್ದರು. ಬಿರುಗಾಳಿಗೆ ಸಿಲುಕಿ ಸ್ಥಗಿತಗೊಂಡ ಪಂದ್ಯದಲ್ಲಿ ಭಾರತ 46 ಓವರ್ ಗಳಲ್ಲಿ 250/5 ಸ್ಕೋರ್ ಮಾಡಿತ್ತು. (276 ಟಾರ್ಗೆಟ್).


ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 131 ಎಸೆತಗಳಲ್ಲಿ 134ರನ್ (12x4, 3x6) [ಈ ಪಂದ್ಯದ ಸ್ಕೋರ್ ಕಾರ್ಡ್]

ಈ ಪಂದ್ಯಗಳಲ್ಲಿ ಸಚಿನ್ ಇನ್ನಿಂಗ್ಸ್ ನೆನಪಿಸುವಂತೆ ಚೇಸಿಂಗ್ ಮಾಸ್ಟರ್ ಕೊಹ್ಲಿ ಬ್ಯಾಟಿಂಗ್ ಇತ್ತು ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಕೊಹ್ಲಿ ಆಟವನ್ನು ಸ್ಪೆಷಲ್ ಎಂದು ಸಚಿನ್ ತೆಂಡೂಲ್ಕರ್ ಅವರು ಟ್ವೀಟ್ ಮಾಡಿದ್ದರೆ, ಅಶ್ವಿನ್ ಅವರು ಚೇಸಿಂಗ್ ಮಾಸ್ಟರ್ ಎಂದು ಕೊಹ್ಲಿಯನ್ನು ಅಶ್ವಿನ್ ಅವರು ಹೊಗಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Describing Virat Kohli's knock against Australia last night (March 27) as "hailstorm in Mohali", India's leading spinner Ravichandran Ashwin has put the innings on par with Sachin Tendulkar's "sandstorm in Sharjah".
Please Wait while comments are loading...