ಮಿಥಾಲಿ ರಾಜ್ ಗೆ 1 ಫ್ಲಾಟ್, 1 ಕೋಟಿ ನಗದು ಬಹುಮಾನ ಘೋಷಿಸಿದ ತೆಲಂಗಾಣ

Posted By:
Subscribe to Oneindia Kannada

ಹೈದರಾಬಾದ್, ಜುಲೈ 30 : ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಫೈನಲ್ ವರೆಗೆ ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕಿ ಮಿಥಾಲಿ ರಾಜ್‌ಗೆ ಬಹುಮಾನಗಳ ಮಹಾಪೂರವೇ ಹರಿದು ಬರುತ್ತಿವೆ.

ಮಿಥಾಲಿ ರಾಜ್ ಗೆ ಐಷಾರಾಮಿ ಕಾರು ಉಡುಗೊರೆ

ಇಂಗ್ಲೆಂಡ್ ನಲ್ಲಿ ಮುಕ್ತಾಯವಾದ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ಬಳಿಕ ತವರಿಗೆ ಆಗಮಿಸಿದ ನಾಯಕಿ ಮಿಥಾಲಿ ರಾಜ್ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಸನ್ಮಾನಿಸಿ ಸ್ವಾಗತ ಕೋರಿದರು. ಇದೇ ವೇಳೆ ಸರ್ಕಾರದಿಂದ ಒಂದು ನಿವೇಶನ ಹಾಗೂ 1 ಕೋಟಿ. ರು.ನಗದು ಬಹುಮಾನ ನೀಡುವುದಾಗಿ ಅವರು ಘೋಷಿಸಿದರು.

Women's World Cup: Mithali Raj awarded Rs 1 crore cash prize, house plot by Telangana Govt
Mithali Raj To Be Rewarded a New BMW Car | Oneindia Kannada

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮಿಥಾಲಿ ಸಾಧನೆಯನ್ನು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಶ್ಲಾಘಿಸಿದರು. ಮಿಥಾಲಿ ರಾಜ್ ಕೋಚ್ ಆರ್ ಎಸ್ ಆರ್ ಮೂರ್ತಿ ಅವರಿಗೂ ಕೂಡ ರಾಜ್ಯ ಸರ್ಕಾರ ಸನ್ಮಾನಿಸಿ 25 ಲಕ್ಷ ರು.ನಗದು ಬಹುಮಾನ ನೀಡುವುದಾಗಿ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Telangana Chief Minister K Chandrasekhar Rao on Friday (July 28) honoured Mithali Raj for her contribution towards Indian cricket.
Please Wait while comments are loading...