ಫೈನಲ್ ಸೋತರೂ ಮಿಥಾಲಿ ಪಡೆಯ ಸಾಧನೆ ಅಲ್ಲಗಳೆಯುವಂತಿಲ್ಲ!

Posted By:
Subscribe to Oneindia Kannada

ಲಂಡನ್, ಜುಲೈ 24: ಈ ಬಾರಿಯ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ಸೋತಿದ್ದರೂ, ಭಾರತೀಯ ಆಟಗಾರ್ತಿಯ ಪರವಾಗಿ ನಾನಾ ಮಾಧ್ಯಮಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಫೈನಲ್ ಪಂದ್ಯದಲ್ಲಿ ಕೋಟ್ಯಂತರ ಭಾರತೀಯರ ನಿರೀಕ್ಷೆ ಹುಸಿಯಾಯಿತಾದರೂ, ಮಿಥಾಲಿ ಪಡೆಗೆ ಟ್ವಿಟರ್ ನಲ್ಲಿ, ಫೇಸ್ ಬುಕ್ ನಲ್ಲಿ, ಸುದ್ದಿ ವಾಹಿನಿ, ಪತ್ರಿಕೆಗಳಲ್ಲಿ... ಹೀಗೆ, ದಶದಿಕ್ಕುಗಳಿಂದಲೂ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ.

ವಿಶ್ವಕಪ್ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ವೀರೋಚಿತ ಸೋಲು

ಇಡೀ ಟೂರ್ನಿಯಲ್ಲಿ, ಭಾರತ ತಂಡ ನೀಡಿದ ಪ್ರದರ್ಶನದ ಬಗ್ಗೆ ಕ್ರೀಡಾಭಿಮಾನಿಗಳು, ಸಿನಿ ತಾರೆಯರು, ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಹಾಡಿ ಹೊಗಳಿದ್ದಾರೆ.

ಕನ್ನಡದ ಕ್ರಿಕೆಟ್ ಪ್ರತಿಭೆ ರಾಜೇಶ್ವರಿ ತಂದೆಗೆ ಸಚಿನ್ ಮೆಚ್ಚುಗೆ

ಇತ್ತ, ದೇಶ ವಿದೇಶಗಳ ಕ್ರಿಕೆಟ್ ವಿಶ್ಲೇಷಕರೂ ಕೂಡ, ಭಾರತೀಯ ವನಿತೆಯರ ಯೋಗದಾನವನ್ನು ಅತ್ಯಂತ ವಿಶೇಷವಾಗಿ ಸ್ಮರಿಸಿದ್ದಾರೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಈ ತಂಡದ ಆಟಗಾರ್ತಿಯರು ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವುದು ಇಡೀ ಭಾರತವೇ ಹೆಮ್ಮೆ ಪಡುವಂತಾಗಿದೆ.

ವಿಶ್ವಕಪ್ ಸ್ಟಾರ್ ಹರ್ಮನ್ ಪ್ರೀತ್ ಗೆ ಉದ್ಯೋಗದಲ್ಲಿ ಬಡ್ತಿ!

ಟೂರ್ನಿಯ ಆರಂಭಕ್ಕೂ ಮೊದಲು ಭಾರತ ತಂಡ, ಇಂಥದ್ದೊಂದು ಮಾದರಿಯ ಪ್ರದರ್ಶನ ನೀಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯೂ ಮೀರಿದ ಸಾಂಘಿಕ ಪ್ರದರ್ಶನ ನಮ್ಮ ಆಟಗಾರ್ತಿಯರದ್ದಾಗಿತ್ತು.

ಈ ಟೂರ್ನಿಯಲ್ಲಿ ಮಿಂಚಿನ ಭಾರತೀಯ ವನಿತಾ ತಂಡದ ಆಟಗಾರ್ತಿಯರು ಯಾರು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಉತ್ತಮ ಬ್ಯಾಟಿಂಗ್

ಉತ್ತಮ ಬ್ಯಾಟಿಂಗ್

ತಂಡದ ಆಟಗಾರ್ತಿಯರಾದ ಸ್ಮೃತಿ ಮಂದಾನಾ, ಪೂನಮ್ ರವೂತ್, ಮಿಥಾಲಿ ರಾಜ್ ಅವರು ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ನಿಂದ ಗಮನ ಸಳೆದರು. ಹರ್ಮನ್ ಪ್ರೀತ್ ಕೌರ್, ಜುಲಾನ್ ಗೋಸ್ವಾಮಿಯವರ ಪ್ರದರ್ಶನವನ್ನೂ ಮರೆಯುವಂತಿಲ್ಲ.

ಮುದ ನೀಡಿದ ಆ ಅಮೋಘ ಬ್ಯಾಟಿಂಗ್

ಮುದ ನೀಡಿದ ಆ ಅಮೋಘ ಬ್ಯಾಟಿಂಗ್

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಪರವಾಗಿ, ಅಜೇಯ 171 ರನ್ ಗಳಿಸಿದ ಹರ್ಮನ್ ಪ್ರೀತ್ ಕೌರ್ ಅವರ ಇನಿಂಗ್ಸ್ ಅನ್ನು ಮರೆಯುವುದುಂಟೇ?

ಮಿಥಾಲಿ ರಾಜ್ ಸಾಧನೆ, ಭಾರತದ ಹೆಮ್ಮೆ

ಮಿಥಾಲಿ ರಾಜ್ ಸಾಧನೆ, ಭಾರತದ ಹೆಮ್ಮೆ

ಇದೇ ಟೂರ್ನಿಯಲ್ಲಿ ಆಡುವಾಗಲೇ ಏಕದಿನ ಪ್ರಕಾರದ ಕ್ರಿಕೆಟ್ ನಲ್ಲಿ 6000 ರನ್ ಗಡಿ ದಾಟಿದ ವಿಶ್ವದ ಮೊಟ್ಟಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಮಿಥಾಲಿ ರಾಜ್. ಈ ಸಾಧನೆಯನ್ನು ಮುುಂದೊಂದು ದಿನ ಯಾರೋ ಒಬ್ಬರು ಮುರಿಯಬಹುದು. ಆದರೆ, ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದು ಮಿಥಾಲಿ ಹೆಗ್ಗಳಿಕೆ.

India VS West Indies : MS Dhoni and Yuvraj Singh become Mentor of Team India | Oneindia Kannada
ಹೊಸ ಸಾಧನೆ ಮಾಡಿದ ಕನ್ನಡದ ಕುವರಿ

ಹೊಸ ಸಾಧನೆ ಮಾಡಿದ ಕನ್ನಡದ ಕುವರಿ

ಇದೇ ಟೂರ್ನಿಯಲ್ಲಿ ಆಡುವಾಗಲೇ, ಭಾರತ ತಂಡದ ಕರ್ನಾಟಕದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರು ಹೊಸ ಸಾಧನೆ ಮಾಡಿದರು. ಒಟ್ಟು 29 ಪಂದ್ಯಗಳಲ್ಲಿ 53 ವಿಕೆಟ್ ಸಂಪಾದಿಸಿದರು. ಅಲ್ಲದೆ, ಈ ಓವರ್ ಗಳಲ್ಲಿ ಸರಾಸರಿ 3.3 ರನ್ ನೀಡಿ ಇಷ್ಟು ವಿಕೆಟ್ ಗಳಿಸಿರುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಿ. ಇದಕ್ಕೆ ಮಾಜಿ ಕ್ರಿಕೆಟಿಗ ಸಚಿನ್ ಸೇರಿದಂತೆ ಹಲವಾರು ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ. ಇದೂ, ಸಹ ಭಾರತೀಯ ಮಹಿಳಾ ಕ್ರಿಕೆಟ್ ರಂಗದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ದಾಖಲೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Despite the disappointment in the finals of Women's World Cup 2017, it has to be admitted that Team India's performance has unparalleled, deep-rooted significance for the women's cricket in India.
Please Wait while comments are loading...