ಮಹಿಳಾ ವಿಶ್ವಕಪ್: ವಿಜೇತರ ಬಹುಮಾನ ಮೊತ್ತ 10 ಪಟ್ಟು ಹೆಚ್ಚು!

Posted By:
Subscribe to Oneindia Kannada

ಲಂಡನ್, ಜೂನ್ 20: ಶೀಘ್ರದಲ್ಲೇ ಆರಂಭವಾಗಲಿರುವ ಮಹಿಳಾ ವಿಶ್ವಕಪ್ 2017 ಟೂರ್ನಿಯ ಚಾಂಪಿಯನ್ ತಂಡಕ್ಕೆ 4 ಕೋಟಿ, 25 ಲಕ್ಷ ರು. ಬಹುಮಾನ ನೀಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಘೋಷಿಸಿದೆ. ರನ್ನರ್ ಅಪ್ ತಂಡಕ್ಕೆ 2 ಕೋಟಿ 12 ಲಕ್ಷ ರು. ನೀಡಲಾಗುವುದೆಂದು ಐಸಿಸಿ ಹೇಳಿದೆ.

ಇತ್ತೀಚೆಗಷ್ಟೇ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಯುಕೆ ನೆಲವೀಗ ಮತ್ತೊಂದು ಅಂತಾರಾಷ್ಟ್ರೀಯ ಪಂದ್ಯಾವಳಿಗಾಗಿ ಸಜ್ಜಾಗಿ ನಿಂತಿದೆ.

ಇದೇ ತಿಂಗಳ 24ರಿಂದ ಈ ಮಹಿಳಾ ವಿಶ್ವಕಪ್ ಪಂದ್ಯಾವಳಿಯು ಆರಂಭವಾಗಲಿದ್ದು, ಈ ಪಂದ್ಯಾವಳಿಗೆ ಯುಕೆ ಆತಿಥ್ಯ ವಹಿಸಿಕೊಂಡಿದೆ. ಜಗತ್ತಿನ ಅಗ್ರ ಎಂಟು ಕ್ರಿಕೆಟ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಮುಂದಿನ ತಿಂಗಳ 23ರವರೆಗೆ ಟೂರ್ನಿ ನಡೆಯಲಿದೆ.

ಐಸಿಸಿ ಕಾಳಜಿ

ಐಸಿಸಿ ಕಾಳಜಿ

ಅಂದಹಾಗೆ, ಈ ಮೊದಲು ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆ ಅಷ್ಟಾಗಿ ಮಾನ್ಯತೆ ಇರಲಿಲ್ಲ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಮಹಿಳಾ ಕ್ರಿಕೆಟಿಗರೂ ಹೆಚ್ಚೆಚ್ಚು ಸಾಮರ್ಥ್ಯ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಟೂರ್ನಿಯ ವಿಜೇತ ತಂಡದ ಮೊತ್ತವನ್ನು ಹೆಚ್ಚಿಸುವುದಾಗಿ ಐಸಿಸಿ ಈ ಹಿಂದೆಯೇ ಹೇಳಿತ್ತು.

10 ಪಟ್ಟು ಹೆಚ್ಚು

10 ಪಟ್ಟು ಹೆಚ್ಚು

ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಐಸಿಸಿ ಸಭೆಯಲ್ಲಿ ಮಹಿಳಾ ವಿಶ್ವಕಪ್ ತಂಡದ ಚಾಂಪಿಯನ್ನರ ಬಹುಮಾನ ಮೊತ್ತವನ್ನು $ 660,000 ಡಾಲರ್ ಗೆ (ಸುಮಾರು 4 ಕೋಟಿ, 25 ಲಕ್ಷ ರು.) ನಿಗದಿಗೊಳಸಲಾಯಿತು. ಇದು, ಈ ಹಿಂದಿನ ಮಹಿಳಾ ವಿಶ್ವಕಪ್ ನ ವಿಜೇತ ತಂಡಕ್ಕೆ ನೀಡಲಾಗುತ್ತಿದ್ದ ಮೊತ್ತಕ್ಕೆ ಹೋಲಿಸಿದರೆ 10 ಪಟ್ಟು ಹೆಚ್ಚು.

ಸೆಮೀಸ್ ನಲ್ಲಿ ಸೋಲುವ ತಂಡಗಳಿಗೂ ನಗದು

ಸೆಮೀಸ್ ನಲ್ಲಿ ಸೋಲುವ ತಂಡಗಳಿಗೂ ನಗದು

ರನ್ನರ್ ಅಪ್ ತಂಡಕ್ಕೆ 2 ಕೋಟಿ 12 ಲಕ್ಷ ರು. ಹೇಳಿರುವ ಐಸಿಸಿ, ಸೆಮಿಫೈನಲ್ ಗಳಲ್ಲಿ ಸೋಲುವ ತಂಡಗಳಿಗೆ ತಲಾ 1 ಕೋಟಿ 6 ಲಕ್ಷ ರು. ಹಣ ನೀಡುವುದಾಗಿ ಹೇಳಿದೆ.

ಈ ತಂಡಗಳಿಗೆ ತಲಾ 12 ಲಕ್ಷ ರು.

ಈ ತಂಡಗಳಿಗೆ ತಲಾ 12 ಲಕ್ಷ ರು.

ಇನ್ನು, ಗ್ರೂಪ್ ಹಂತಗಳಲ್ಲಿ ಸೋತು ಮನೆಗೆ ತೆರಳುವ ತಂಡಗಳಿಗೂ ನಗದು ಪುರಸ್ಕಾರವಿದೆ. ಈ ತಂಡಗಳಿಗೆ ತಲಾ 12 ಲಕ್ಷ ರು. ಸಿಗಲಿದೆ.

ಜೂನ್ 24ರಿಂದ ಭಾರತದ ಅಭಿಯಾನ ಆರಂಭ

ಜೂನ್ 24ರಿಂದ ಭಾರತದ ಅಭಿಯಾನ ಆರಂಭ

ಟೂರ್ನಿಯ ಅಭ್ಯಾಸ ಪಂದ್ಯಗಳು ಜೂನ್ 19ರಿಂದ ಆರಂಭಗೊಂಡಿವೆ. ಜೂನ್ 24ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಸೆಣಸಲಿವೆ. ಮಿಥಾಲಿ ರಾಜ್ ಅವರ ನಾಯಕತ್ವದಲ್ಲಿ ಟೂರ್ನಿಗೆ ಕಾಲಿಟ್ಟಿರುವ ಭಾರತ ತಂಡ, ಜೂನ್ 24ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The eight top teams of the world will be vying for a winner's prize of $ 660,000 in the ICC Women's World Cup 2017, which will be held in the United Kingdom from 24 June to 23 July. This time's prize money is 10 times greater than its previous edition in 2013.
Please Wait while comments are loading...