ಮಹಿಳಾ ವಿಶ್ವಕಪ್: ನ್ಯೂಜಿಲೆಂಡ್ ಮಣಿಸಿದ ಭಾರತ ಸೆಮಿಫೈನಲ್ ಗೆ

Posted By:
Subscribe to Oneindia Kannada

ಡರ್ಬಿ, ಜುಲೈ 15: ಮಹಿಳಾ ವಿಶ್ವಕಪ್ ನ ತನ್ನ ಮಹತ್ವದ ಲೀಗ್ ಪಂದ್ಯವೊಂದರಲ್ಲಿ ಭಾರತ, ಎದುರಾಳಿ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿ, ಟೂರ್ನಿಯ ಸೆಮಿಫೈನಲ್ ಗೆ ಕಾಲಿಡುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಕಂಟ್ರಿ ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 265 ರನ್ ಮೊತ್ತ ಗಳಿಸಿತ್ತು. ಈ ಮೊತ್ತವನ್ನು ಹಿಂದಿಕ್ಕಲು ಕ್ರೀಸ್ ಗೆ ಇಳಿದ ನ್ಯೂಜಿಲೆಂಡ್ ಭಾರತದ ಬೌಲಿಂಗ್ ತತ್ತರಿಸಿ, ಕೇವಲ 79 ರನ್ ಗಳಿಗೆ (25.3 ಓವರ್) ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಶರಣಾಯಿತು. ಈ ಮೂಲಕ ಭಾರತಕ್ಕೆ 186 ರನ್ ಗಳ ಅಮೋಘ ಜಯ ಪ್ರಾಪ್ತವಾಯಿತು.

Women's World Cup 2017: Indian Woman's team Vs New Zealand Women's team match

ಸೆಮಿಫೈನಲ್ ಗೆ ಹೋಗುವ ನಿಟ್ಟಿನಲ್ಲಿ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಇದೀಗ, ಆ ಗೆಲುವು ಭಾರತಕ್ಕೆ ದಕ್ಕಿದಂತಾಗಿದ್ದು, ಟೂರ್ನಿಯಲ್ಲಿ ಭಾರತದ ಸವಾಲನ್ನು ಜೀವಂತವಾಗಿರಿಸಿದೆ.

ಭಾರತ ನೀಡಿದ್ದ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಹಾಗೆ ಧೂಳಿಪಟವಾಗಲು ಕಾರಣ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್. 7.5 ಓವರ್ ಗಳನ್ನು ಮಾಡಿದ ಅವರು, ಅವುಗಳಲ್ಲಿ 1 ಮೇಡನ್ ಓವರ್ ಮಾಡಿ, 15 ರನ್ ನೀಡುವುದರೊಂದಿಗೆ 5 ವಿಕೆಟ್ ಕಬಳಿಸಿದ ಗಾಯಕ್ವಾಡ್, ಭಾರತದ ಗೆಲುವಿನ ಕನಸನ್ನು ಬೇಗನೇ ನನಸಾಗಿಸಿದರು.

ಇನ್ನುಳಿದಂತೆ, ಜುಲಾನ್ ಗೋಸ್ವಾಮಿ, ಪೂನಮ್ ಯಾದವ್ ಹಾಗೂ ಶಿಖಾ ಪಾಂಡೆ ತಲಾ 1, ದೀಪ್ತಿ ಶರ್ಮಾ 2 ವಿಕೆಟ್ ಗಳಿಸಿ ಭಾರತದ ಜಯಕ್ಕೆ ತಮ್ಮದೇ ಆದ ದೇಣಿಗೆ ನೀಡಿದರು.

ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಂಚಿನ ಪ್ರತಿಮೆ ಅನಾವರಣ

ಪಂದ್ಯಕ್ಕೂ ಮೊದಲು ಟಾಸ್ ಗೆದ್ದಿದ್ದ ನ್ಯೂಜಿಲೆಂಡ್ ತಂಡದ ನಾಯಕಿ ಸುಝಿ ಬೇಟ್ಸ್, ಭಾರತ ತಂಡಕ್ಕೆ ಮೊದಲು ಬ್ಯಾಟ್ ಮಾಡುವ ಅವಕಾಶ ನೀಡಿದರು.

ಅಂತೆಯೇ, ಮೊದಲು ಕ್ರೀಸ್ ಗೆ ಇಳಿದ ಭಾರತ, ಕೇವಲ 21 ರನ್ ಮೊತ್ತಕ್ಕೆ ಆರಂಭಿಕರಾದ ಸ್ಮೃತಿ ಮಂದಾನಾ (13) ಹಾಗೂ ಪೂನಮ್ ರವೂತ್ (4) ಇಬ್ಬರನ್ನೂ ಕಳೆದುಕೊಂಡಿತು.

ಆದರೆ, ಆನಂತರ ಬಂದ ನಾಯಕಿ ಮಿಥಾಲಿ ರಾಜ್ ಅಮೋಘ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು.

ಅವರಿಗೆ ಕ್ರೀಸ್ ನಲ್ಲಿ ಉತ್ತಮ ಸಾಥ್ ನೀಡಿದ ಹರ್ಮನ್ ಪ್ರೀತ್ ಕೌರ್ ಅವರು, ಮಿಥಾಲಿ ಜತೆ 3ನೇ ವಿಕೆಟ್ ಗೆ 132 ರನ್ ಜತೆಯಾಟ ನೀಡುವ ಮೂಲಕ ತಂಡದ ಉತ್ತಮ ಮೊತ್ತಕ್ಕೆ ನಾಂದಿ ಹಾಡಿದರು.

ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಸಂಭ್ರಮ ಆರಂಭ

ಇಷ್ಟಾದರೂ, ಭಾರತದ ಬ್ಯಾಟಿಂಗ್ ಕುಸಿತ ತಪ್ಪಲಿಲ್ಲ. 36ನೇ ಓವರ್ ನಲ್ಲಿ ಕೌರ್ ಔಟಾದ ನಂತರ ಬಂದ ದೀಪ್ತಿ ಶರ್ಮಾ (0) ಏನೂ ಆಡಲಿಲ್ಲ.

ಆಗ ಬಂದ ವೇದಾ ಕೃಷ್ಣಮೂರ್ತಿ (70) ಅರ್ಧಶತಕ ಗಳಿಸಿ ತಂಡಕ್ಕೆ ನೆರವಾದರು. ಆದರೆ, ಅಷ್ಟರೊಳಗೆ ಮಿಥಾಲಿ, ತಮ್ಮ ಭರ್ಜರಿ ಶತಕದಾಟವನ್ನು 50ನೇ ಓವರ್ ನಲ್ಲಿ ಮುಕ್ತಾಯಗೊಳಿಸಿದರು.

ಇನ್ನು, ಕೊನೆಯ ಬ್ಯಾಟ್ಸ್ ವುಮನ್ ಗಳು ಹೆಚ್ಚು ಆಡಲಿಲ್ಲ. ಸುಷ್ಮಾ ವರ್ಮಾ (0), ಶಿಖಾ ಪಾಂಡೆ (0) ನಿರಾಸೆ ತಂದರು. ಅಂತಿಮವಾಗಿ, ಭಾರತ 50 ಓವರ್ ಗಳಲ್ಲಿ 265 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರ್: ಭಾರತ 50 ಓವರ್ ಗಳಲ್ಲಿ 7 ವಿಕೆಟ್ ಗೆ 265 ರನ್ (ಮಿಥಾಲಿ ರಾಜ್ 109, ವೇದಾ ಕೃಷ್ಣಮೂರ್ತಿ 70; ಕ್ಯಾಸ್ಪೆರೇಕ್ 45ಕ್ಕೆ 3, ರೋವ್ 30ಕ್ಕೆ 2). ನ್ಯೂಜಿಲೆಂಡ್ 25.3 ಓವರ್ ಗಳಲ್ಲಿ 79 (ಆಮಿ ಸ್ಯಾಟರ್ತ್ ವೇಟ್ 26, ಅಮೆಲಿಯಾ ಕೆರ್ ಅಜೇಯ 12; ರಾಜೇಶ್ವರಿ ಗಾಯಕ್ವಾಡ್ 15ಕ್ಕೆ 5, ದೀಪ್ತಿ ಶರ್ಮಾ 26ಕ್ಕೆ 2). ಪಂದ್ಯಶ್ರೇಷ್ಠ: ಮಿಥಾಲಿ ರಾಜ್ (ಭಾರತ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In its last league match of Women's World cup, Indian Woman's team achieved a spectacular win against New Zealand by 186 runs and booked a place in semi final level.
Please Wait while comments are loading...