ಮಹಿಳಾ ವಿಶ್ವಕಪ್ ಕ್ರಿಕೆಟ್ 2017: ಭಾರತದ ಸೆಮಿಫೈನಲ್ ಆಸೆಗೆ ಹಿನ್ನಡೆ

Posted By:
Subscribe to Oneindia Kannada

ಬ್ರಿಸ್ಟೋಲ್, ಜುಲೈ 13: ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಸೆಮಿಫೈನಲ್ ಪ್ರವೇಶಿಸುವ ಕನಸಿಗೆ ಹಿನ್ನಡೆಯಾಗಿದೆ.

ಬುಧವಾರ, ಇಲ್ಲಿನ ಕಂಟ್ರಿ ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆದ ಲೀಗ್ ಹಂತದ ಉಪಾಂತ್ಯ ಪಂದ್ಯದಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ ಗಳ ಸೋಲು ಕಂಡಿತು.

ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ದಾಖಲೆ ಬರೆದ ಭಾರತದ ಮಿಥಾಲಿ ರಾಜ್

ಈ ಮೂಲಕ, ಭಾರತದ ಸೆಮಿಫೈನಲ್ ಹಂತ ಪ್ರವೇಶಿಸುವ ಆಸೆಗೆ ಹಿನ್ನಡೆಯಾಗಿದೆ. ಹಾಗಾಗಿ, ಅದು ಜುಲೈ 15ರಂದು ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಿದೆ. ಆ ಪಂದ್ಯದಲ್ಲಿ ಅದು, ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಮಿಥಾಲಿಗೆ ಸಚಿನ್, ಕುಂಬ್ಳೆ ಸೇರಿ ಹಲವಾರು ಕ್ರಿಕೆಟರ ಅಭಿನಂದನೆ

ಮೊದಲು ಬ್ಯಾಟ್ ಮಾಡುವ ಅವಕಾಶ

ಮೊದಲು ಬ್ಯಾಟ್ ಮಾಡುವ ಅವಕಾಶ

ಬುಧವಾರ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 50 ಓವರ್ ಗಳಲ್ಲಿ 226 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 45.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 227 ರನ್ ಗಳಿಸಿ, ಜಯದ ನಗೆ ಬೀರಿತಲ್ಲದೆ, ಸೆಮಿಫೈನಲ್ ಹಂತಕ್ಕೆ ದಾಂಗುಡಿಯಿಟ್ಟಿತು.

ಮಿಥಾಲಿ ಮಿಂಚು

ಮಿಥಾಲಿ ಮಿಂಚು

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದಿದ್ದ ಭಾರತದ ಪರವಾಗಿ ಆರಂಭಿಕ ಆಟಗಾರ್ತಿ ಪೂನಮ್ ರವೂತ್ 106 ರನ್ ಗಳಿಸಿದರೆ, ನಾಯಕಿ ಮಿಥಾಲಿ ರಾಜ್ 69 ರನ್ ಗಳಿಸಿ ಇನಿಂಗ್ಸ್ ಗೆ ನೆರವಾಗಿದ್ದರು.

ಭಾರತದ ಸಾಧಾರಣ ಮೊತ್ತ

ಭಾರತದ ಸಾಧಾರಣ ಮೊತ್ತ

ಮಧ್ಯಮ ಕ್ರಮಾಂಕದ ವೇದಾ ಕೃಷ್ಣಮೂರ್ತಿ ಡಕ್ ಔಟಾದರೆ, ಸುಷ್ಮಾ ವರ್ಮಾ, ಜುಲಾನ್ ಗೋಸ್ವಾಮಿ, ಶಿಖಾ ಪಾಂಡೆ ಹಾಗೂ ದೀಪ್ತಿ ಶರ್ಮಾ ಅವರು ಕೇವಲ ಒಂದಂಕಿ ರನ್ ಪೇರಿಸಿದ್ದರಿಂದ ಭಾರತ, ಕಡಿಮೆ ಮೊತ್ತ ದಾಖಲಿಸಬೇಕಾಯಿತು. ಈ ಮೊತ್ತವನ್ನು ಸುಲಭವಾಗಿ ಮೆಟ್ಟಿದ ಆಸ್ಟ್ರೇಲಿಯಾ ಪರವಾಗಿ ನಾಯಕಿ ಲ್ಯಾನ್ನಿಂಗ್ (ಅಜೇಯ 76), ಎಲ್ಲೀಸ್ ಪೆರಿ (ಅಜೇಯ 60) ಉತ್ತಮ ಆಟ ಪ್ರದರ್ಶಿಸಿದರು.

ಚರಿತ್ರಾರ್ಹ ಸಾಧನೆ

ಚರಿತ್ರಾರ್ಹ ಸಾಧನೆ

ಭಾರತದ ಪರವಾಗಿ 69 ರನ್ ಸಿಡಿಸಿದ ನಾಯಕಿ ಮಿಥಾಲಿ ರಾಜ್ ಅವರು, ಮಹಿಳೆಯರ ಕ್ರಿಕೆಟ್ ನ ಏಕದಿನ ಮಾದರಿಯಲ್ಲಿ 6000 ರನ್ ಗಡಿ ದಾಟಿದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದರು.

ಚುಟುಕು ಸ್ಕೋರ್ ಮಾಹಿತಿ

ಚುಟುಕು ಸ್ಕೋರ್ ಮಾಹಿತಿ

ಭಾರತ ಮಹಿಳಾ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಗೆ 226 (ಪೂನಮ್ ರವೂತ್ 106, ಮಿಥಾಲಿ ರಾಜ್ 69; ಎಲೀಸ್ ಪೆರಿ 37ಕ್ಕೆ 2, ಮೆಗಾನ್ ಶುಟ್ 52ಕ್ಕೆ 2); ಆಸ್ಟ್ರೇಲಿಯಾ ಮಹಿಳಾ ತಂಡ 45.1 ಓವರ್ ಗಳಲ್ಲಿ 2 ವಿಕೆಟ್ ಗೆ 227 (ಮೆಗ್ ಲ್ಯಾನಿಂಗ್ ಅಜೇಯ 76, ಎಲೀಸ್ ಪೆರಿ 60; ಪೂನವ್ ಯಾದವ್ 46ಕ್ಕೆ 1). ಪಂದ್ಯ ಶ್ರೇಷ್ಠ: ಲ್ಯಾನಿಂಗ್ (ಆಸ್ಟ್ರೇಲಿಯಾ).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's semifinal hopes suffered a major jolt after Australia notched up a comfortable eight-wicket win, riding on a superb show by their top-order batters in the ICC Women's World Cup at Bristol on Wednesday.
Please Wait while comments are loading...