ಟಿ-20 ಏಷ್ಯಾಕಪ್ : ಫೈನಲ್ ಪ್ರವೇಶಿಸಿದ ಭಾರತದ ವನಿತೆಯರು

Written By: Ramesh
Subscribe to Oneindia Kannada

ಬ್ಯಾಂಕಾಕ್‌, ಡಿಸೆಂಬರ್. 02 : ಮಹಿಳಾ ಟಿ-20 ಏಷ್ಯಾಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು 52 ರನ್‌ಗಳಿಂದ ಸೋಲಿಸಿ ಭಾರತಮಹಿಳಾ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.

ಗುರುವಾರ ನಡೆದ ಶ್ರೀಲಂಕಾ ಮಹಿಳಾ ತಂಡ ಹಾಗೂ ಭಾರತ ಮಹಿಳಾ ತಂಡದ ನಡುವಿನ ಸೆಮೀಸ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಪಡೆ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 121ರನ್ ಪೇರಿಸಿತು.

ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 69ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಭಾರತ ವನಿತೆಯರು 52 ರನ್ ಗಳ ಭರ್ಜರಿ ಗೆಲವು ಪಡೆದು ಫೈನಲ್ ಪ್ರವೇಶಿಸಿದರು.

Women's Asia Cup T20: Unbeaten India enter final

ಭಾರತ ಪರ ಮಿಥಾಲಿ ರಾಜ್‌ ಮತ್ತು ಸ್ಮೃತಿ ಮಂದಾನ ಜೋಡಿ ಮೊದಲ ವಿಕೆಟ್‌ಗೆ 57 ಎಸೆತಗಳಲ್ಲಿ 46ರನ್ ಪೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ಹಂತದಲ್ಲಿ ಮಂದಾನ, ಚಾಮರಿ ಜಯಾಂಗನಿ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ಆ ಬಳಿಕ ಬಂದ ಕರ್ನಾಟಕದ ವೇದಾ ಕೃಷ್ಣಮೂರ್ತಿ 23 ಎಸೆತಗಳಲ್ಲಿ 21 ರನ್ ಗಳಿಸಿದರು. ನಾಯಕಿ ಹರ್ಮನ್‌ಪ್ರೀತ್ 10 ಎಸೆತಗಳನ್ನು ಎದುರಿದಸಿ 10 ರನ್ ತಂಡಕ್ಕೆ ನೀಡಿ ದೊಡ್ಡ ಮೊತ್ತ ಗಳಿಸಲು ಮತ್ತೊಮ್ಮೆ ವಿಫಲರಾದರು.

ಅಂತಿಮವಾಗಿ ಮಿಥಾಲಿ ರಾಜ್‌ 59ಎಸೆತಗಳನ್ನು ಎದುರಿಸಿ ಔರ್ಜರಿ 6 ಬೌಂಡರಿ 1 ಸಿಕ್ಸರ್ ನೆರವಿನಿಂದ 62 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಅಂತಿಮವಾಗಿ ಭಾರತ 122 ರನ್ ಗಳ ಗುರಿ ನೀಡಿತು.

ಗುರಿಯನ್ನು ಬೆನ್ನಟ್ಟಿದ ಸಿಂಹಳೀಯರು ಭಾರತದ ಅಕ್ರಮಣಕಾರಿ ಬೌಲಿಂಗ್ ಗೆ ತತ್ತರಿಸಿದರು. ಭಾರತ ಪರ ಏಕ್ತಾ ಬಿಸ್ಟ್ 8ಕ್ಕೆ3 ಹಾಗೂ ಪ್ರೀತಿ ಬೋಸ್‌ 14ಕ್ಕೆ3 ಅವರ ಪರಿಣಾಮ ಕಾರಿ ಬೌಲಿಂಗ್‌ ಬಲದಿಂದ ಶ್ರೀಲಂಕಾ ಕೇವಲ 69ರನ್ ಗಳಿಸಿ 52 ರನ್ ಗಳಿಂದ ಭಾರತಕ್ಕೆ ಶರಣಾಯಿತು.

ಸಂಕ್ಷಿಪ್ತ ಸ್ಕೋರ್‌: ಭಾರತ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 121

ಮಿಥಾಲಿ ರಾಜ್‌ 62, ಸ್ಮೃತಿ ಮಂದಾನ 21, ವೇದಾ ಕೃಷ್ಣಮೂರ್ತಿ 21, ಹರ್ಮನ್‌ಪ್ರೀತ್ ಕೌರ್ 10; ಉದೇಶಿಕಾ ಪ್ರಬೋಧನಿ 20ಕ್ಕೆ1, ಶ್ರೀಪಾಲಿ ವೀರಕ್ಕೋಡಿ 18ಕ್ಕೆ1.

ಶ್ರೀಲಂಕಾ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 69

ಪ್ರಸಾದನಿ ವೀರಕ್ಕೋಡಿ 14, ದಿಲಾನಿ ಸುರಂಗಿಕಾ 20; ಏಕ್ತಾ ಬಿಸ್ಟ್‌ 8ಕ್ಕೆ3, ಪ್ರೀತಿ ಬೋಸ್‌ 14ಕ್ಕೆ3, ಜೂಲನ್‌ ಗೋಸ್ವಾಮಿ 9ಕ್ಕೆ1, ಪೂನಮ್ ಯಾದವ್‌ 14ಕ್ಕೆ1.
ಪಂದ್ಯಶ್ರೇಷ್ಠ: ಮಿಥಾಲಿ ರಾಜ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mithali Raj hit a half-century while Ekta Bisht (3/8) and Preeti Bose (3/14) shared six wickets between them to steer India to a comfortable 52-run win over Sri Lanka in the Women's Asia Cup T20 tournament here today (December 1).
Please Wait while comments are loading...