ಐಸಿಯುನಲ್ಲಿ ಪುತ್ರಿ ಇದ್ದರೂ ಪಂದ್ಯವಾಡಿದ ಶಮಿಗೆ ಶಹಬ್ಬಾಸ್!

Posted By:
Subscribe to Oneindia Kannada

ಕೋಲ್ಕತ್ತಾ, ಅಕ್ಟೋಬರ್ 06: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಎರಡನೇ ಟೆಸ್ಟ್ ಪಂದ್ಯವಂತೂ ಭಾರತ ವೇಗಿ ಮೊಹಮ್ಮದ್ ಶಮಿ ಅವರ ಪಾಲಿಗೆ ಮರೆಯಲಾಗದ ಪಂದ್ಯ. ಶಮಿ ಅವರ ಪುತ್ರಿ ಆಯಿರಾ ಅವರು ಐಸಿಯುನಲ್ಲಿದ್ದಾಗಲೂ ಪಂದ್ಯವಾಡಿದ ಶಮಿಗೆ ಶಹಬ್ಬಾಸ್ ಗಿರಿ ಇನ್ನೂ ನಿಂತಿಲ್ಲ. ಅಭಿಮಾನಿಗಳ ಹಾರೈಕೆಗೆ ಶಮಿ ಧನ್ಯವಾದ ಹೇಳಿದ್ದಾರೆ.

ಕೋಲ್ಕತ್ತಾ ಟೆಸ್ಟ್​ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಗೆ ಸಾಥ್ ನೀಡಿ ಭಾರತ ತಂಡ 178 ರನ್ ಅಂತರದಲ್ಲಿ ಗೆಲ್ಲಲು ಸಹಕಾರಿಯಾದ ಶಮಿ ಅವರು ನೋವಿನ ನಡುವೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮೊಹಮದ್ ಶಮಿ ಅವರ 14 ತಿಂಗಳ ಪುತ್ರಿ ಆಯಿರಾ, ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಪಂದ್ಯದ ವೇಳೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

With his little daughter in ICU, Mohammed Shami played Kolkata Test

ಎರಡೂ ಇನಿಂಗ್ಸ್​ಗಳಲ್ಲಿ ತಲಾ ಮೂರು ವಿಕೆಟ್ ಉರುಳಿಸಿದ್ದ ಶಮಿ, ಭಾರತ ತಂಡದ ಟೆಸ್ಟ್ ಸರಣಿ ಗೆಲುವಿನೊಂದಿಗೆ ಐಸಿಸಿ ಶ್ರೇಯಾಂಕದಲ್ಲಿ ನಂ. 1 ಸ್ಥಾನಕ್ಕೇರುವಲ್ಲಿ ನೆರವಾದರು. ಕೋಲ್ಕತ ಟೆಸ್ಟ್​ನ 2ನೇ ದಿನದ ವೇಳೆ, ಅಯಿರಾಗೆ ತೀವ್ರ ಜ್ವರ, ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿದ್ದರಿಂದ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು. ಈ ವಿಚಾರವನ್ನು 2ನೇ ದಿನದಾಟದ ಮುಕ್ತಾಯದ ಬಳಿಕ ಶಮಿಗೆ ತಿಳಿಸಲಾಗಿತ್ತು.

ಆದರೆ, ಮುಂದಿನ 2 ದಿನಗಳ ಕಾಲ ಬೌಲಿಂಗ್ ಮಾಡುವುದಾಗಿ ಶಮಿ ಅವರು ತಂಡದ ನಾಯಕ ವಿರಾಟ್ ಕೊಹ್ಲಿಗೆ ತಿಳಿಸಿದರು. 2 ಹಾಗೂ 3ನೇ ದಿನದಾಟದ ಮುಕ್ತಾಯದ ಬಳಿಕ ಆಸ್ಪತ್ರೆಗೆ ತೆರಳಿ ಮಗಳನ್ನು ನೋಡಿಕೊಂಡು ಬರುತ್ತಿದ್ದರು. ರಾತ್ರಿ ಟೀಮ್ ಹೋಟೆಲ್​ಗೆ ವಾಪಸಾಗುತ್ತಿದ್ದರು. ಕೋಲ್ಕತದಲ್ಲಿ ಪಂದ್ಯ ಗೆಲ್ಲುವ ಹೊತ್ತಿಗೆ ಚೇತರಿಸಿಕೊಂಡಿದ್ದ ಅಯಿರಾ ಡಿಸ್ಚಾರ್ಜ್ ಆದರು. ಇತ್ತ ಭಾರತ ಗೆಲುವಿನ ನಗೆ ಬೀರಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
He set an example of commitment towards the game as well as towards his team management. He is Mohammed Shami, India's fast bowler.
Please Wait while comments are loading...