ಟೆಸ್ಟ್ ದಿಗ್ಗಜರ ಸಾಲಿಗೆ ವಿಶ್ವದ ನಂ.1 ಸ್ಪಿನ್ನರ್ ಆರ್ ಅಶ್ವಿನ್

Posted By:
Subscribe to Oneindia Kannada

ವಿಶಾಖಪಟ್ಟಣಂ, ನವೆಂಬರ್ 20: ವಿಶ್ವದ ನಂ.1 ಟೆಸ್ಟ್‌ ಬೌಲರ್‌ ರವಿಚಂದ್ರನ್ ಅಶ್ವಿನ್‌ ಅವರು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದು ದಿಗ್ಗಜರ ಸಾಲಿಗೆ ಸೇರಿದ್ದಾರೆ.

ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ನಲ್ಲಿ ಇಂಗ್ಲೆಂಡಿನ ಮೊದಲ ಇನ್ನಿಂಗ್ಸ್ ನಲ್ಲಿ ಪ್ರಮುಖ ಐದು ವಿಕೆಟ್ ಉದುರಿಸಿರುವ ಅಶ್ವಿನ್ ಅವರು ಪ್ರಸಕ್ತ ವರ್ಷದಲ್ಲಿ 50 ವಿಕೆಟ್ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ಶ್ರೀಲಂಕಾದ ಆಟಗಾರ ರಂಗನ್ ಹೆರಾತ್ ಪ್ರಸಕ್ತ ವರ್ಷದಲ್ಲಿ 54 ವಿಕೆಟ್ ಪಡೆದುಕೊಂಡು ಮೊದಲನೇ ಸ್ಥಾನದಲ್ಲಿದ್ದಾರೆ.ಇದಕ್ಕೂ ಮೊದಲ ಟೀಂ ಇಂಡಿಯಾ ಸ್ಪೀನ್ನರ್ ಹರ್ಭಜನ್ ಸಿಂಗ್ ಟೀಂ ಇಂಡಿಯಾ ಪರ 2001-2002ರಲ್ಲಿ 50 ವಿಕೆಟ್ ಪಡೆದುಕೊಂಡಿದ್ದರು.

ಮೂರನೇ ದಿನದಂದು 30 ವರ್ಷ ವಯಸ್ಸಿನ ಅಶ್ವಿನ್ ಅವರು 5/67 ಪಡೆದುಕೊಂಡರು ಅಶ್ವಿನ್ ಅವರು 9 ಟೆಸ್ಟ್‌ ಪಂದ್ಯಗಳಲ್ಲಿ ಎರಡು ಸಲ 10 ವಿಕೆಟ್ ಪಡೆದುಕೊಂಡಿದ್ದಾರೆ. 41 ಟೆಸ್ಟ್ ಪಂದ್ಯಗಳಿಂದ 228 ವಿಕೆಟ್ ಗಳನ್ನು ಗಳಿಸಿದ್ದಾರೆ.

ಅತಿ ಹೆಚ್ಚು 5 ವಿಕೆಟ್ ಪಡೆದಿರುವ ಬೌಲರ್ ಗಳ ಪೈಕಿ ಶ್ರೀಲಂಕಾದ ಮುತ್ತಯ್ಯ ಮುರಳೀದರನ್ (67ಬಾರಿ) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಅನಿಲ್ ಕುಂಬ್ಳೆ (35) ಭಾರತದ ಪರ ಎಲ್ಲರಿಗಿಂತ ಮುಂದಿದ್ದಾರೆ.

ಅಶ್ವಿನ್ ಅವರು ಇನ್ನೊಂದು ಬಾರಿ 5 ವಿಕೆಟ್ ಕಬಳಿಸಿದರೆ ಕಪಿಲ್ ದೇವ್(ಭಾರತ), ಇಮ್ರಾನ್ ಖಾನ್ (ಪಾಕಿಸ್ತಾನ) ಹಾಗೂ ಡೆನ್ನಿಸ್ ಲಿಲ್ಲಿ (ಆಸ್ಟ್ರೇಲಿಯಾ) ಸಮಕ್ಕೆ ನಿಲ್ಲಲಿದ್ದಾರೆ.

ಅಶ್ವಿನ್ ಅದ್ಭುತ ಸಾಧನೆ

ಅಶ್ವಿನ್ ಅದ್ಭುತ ಸಾಧನೆ

2011ರಲ್ಲಿ ವೆಸ್ಟ್ ಇಂಡೀಸ್ ಪರ ಮೊದಲ ಟೆಸ್ಟ್ ಪಂದ್ಯವಾಡಿದ ಅಶ್ವಿನ್ ಅವರು 41 ಟೆಸ್ಟ್ ಪಂದ್ಯಗಳನ್ನಾಡಿದ್ದು, ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 27 ವಿಕೆಟ್ ಕಿತ್ತು, ಭಾರತಕ್ಕೆ 3-0 ಕ್ಲೀನ್ ಸ್ವೀಪ್ ಮಾಡುವ ಅವಕಾಶ ದೊರಕಿಸಿಕೊಟ್ಟು, ಸರಣಿ ಶ್ರೇಷ್ಠ ಎನಿಸಿಕೊಂಡರು.

ಆಡಿದ ಎಲ್ಲಾ ತಂಡಗಳ ವಿರುದ್ಧ 5 ವಿಕೆಟ್

ಆಡಿದ ಎಲ್ಲಾ ತಂಡಗಳ ವಿರುದ್ಧ 5 ವಿಕೆಟ್

ಆಡಿದ ಎಲ್ಲಾ ತಂಡಗಳ ವಿರುದ್ಧ 5 ವಿಕೆಟ್
ನ್ಯೂಜಿಲೆಂಡ್ ವಿರುದ್ಧ 6 ಸಲ
ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ವಿರುದ್ಧ 5 ಸಲ
ಶ್ರೀಲಂಕಾ ವಿರುದ್ಧ 2 ಬಾರಿ
ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ವಿರುದ್ಧ ತಲಾ 1 ಬಾರಿ ಅಶ್ವಿನ್ 5 ವಿಕೆಟ್ ಪಡೆದುಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧ ಮಾತ್ರ ಪಂದ್ಯವಾಡಿಲ್ಲ.

ಹೆಚ್ಚು 5 ವಿಕೆಟ್ ಪಡೆದ ಟಾಪ್ 6 ಬೌಲರ್ ಗಳು

ಹೆಚ್ಚು 5 ವಿಕೆಟ್ ಪಡೆದ ಟಾಪ್ 6 ಬೌಲರ್ ಗಳು

67 -ಮುತ್ತಯ್ಯ ಮುರಳೀದರನ್(ಶ್ರೀಲಂಕಾ)
37 - ಶೇನ್ ವಾರ್ನ್ (ಆಸ್ಟ್ರೇಲಿಯಾ)
36 - ರಿಚರ್ಡ್ ಹ್ಯಾಡ್ಲಿ (ನ್ಯೂಜಿಲೆಂಡ್)
35-ಅನಿಲ್ ಕುಂಬ್ಳೆ (ಭಾರತ)
29-ಗ್ಲೆನ್ ಮೆಗ್ರಾ(ಆಸ್ಟ್ರೇಲಿಯಾ)
28-ರಂಗಣ ಹೆರಾತ್ (ಶ್ರೀಲಂಕಾ)

ಹೆಚ್ಚು 5 ವಿಕೆಟ್ ಪಡೆದ ಟಾಪ್ ಬೌಲರ್ಸ್

ಹೆಚ್ಚು 5 ವಿಕೆಟ್ ಪಡೆದ ಟಾಪ್ ಬೌಲರ್ಸ್

27- ಇಯಾನ್ ಬೋಥಮ್ (ಇಂಗ್ಲೆಂಡ್)
26- ಡೇಲ್ ಸ್ಟೇನ್(ದಕ್ಷಿಣ ಆಫ್ರಿಕಾ)
25- ವಾಸೀಂ ಅಕ್ರಮ್ (ಪಾಕಿಸ್ತಾನ), ಹರ್ಭಜನ್ ಸಿಂಗ್ (ಭಾರತ)
24- ಸಿಡ್ನಿ ಬಾರ್ನೆಸ್ (ಇಂಗ್ಲೆಂಡ್)
23-ಡೆನ್ನಿಸ್ ಲಿಲ್ಲಿ (ಆಸ್ಟ್ರೇಲಿಯಾ), ಇಮ್ರಾನ್ ಖಾನ್ (ಪಾಕಿಸ್ತಾನ), ಕಪಿಲ್ ದೇವ್ (ಭಾರತ)
22-ರವಿಚಂದ್ರನ್ ಅಶ್ವಿನ್ (ಭಾರತ), ವಖಾರ್ ಯೂನಿಸ್ (ಪಾಕಿಸ್ತಾನ), ಮಾಲ್ಕಂ ಮಾರ್ಷಲ್ (ವೆಸ್ಟ್ ಇಂಡೀಸ್), ಕರ್ಟ್ಲಿ ಆಂಬ್ರೋಸ್, ಕೊರ್ಟ್ನಿ ವಾಲ್ಶ್ (ವೆಸ್ಟ್ ಇಂಡೀಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It was yet again Ravichandran Ashwin's bowing show in a Test match in India. This time, in the country's newest Test venue - Visakhapatnam. The 30-year-old offspinner bagged 5 wickets to draw level with some of the greats of the game
Please Wait while comments are loading...