ಅಂತಾರಾಷ್ಟ್ರೀಯ ಕ್ರಿಕೆಟಿಗೆ ಸರವಣ್ ಗುಡ್ ಬೈ

Posted By:
Subscribe to Oneindia Kannada

ಗಯಾನ, ಸೆ. 16: ವೆಸ್ಟ್ ಇಂಡೀಸ್ ನ ಮಧ್ಯಮ ಕ್ರಮಾಂಕ ಬ್ಯಾಟ್ಸ್ ಮನ್ ರಾಮ್ ನರೇಶ್ ಸರವಣ್ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಹೇಳಿದ್ದಾರೆ.

2013ರಿಂದ ಮೈದಾನದಿಂದ ದೂರವುಳಿದಿದ್ದ 36 ವರ್ಷ ವಯಸ್ಸಿನ ಸರವಣ್ ಅವರು 13 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

West Indies Batsman Ramnaresh Sarwan announce retirement

2000ರಲ್ಲಿ ಪಾಕಿಸ್ತಾನ ವಿರುದ್ಧದಲ್ಲಿ ಬಾರ್ಬಡೋಸ್ ನಲ್ಲಿ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಸರವಣ್ ಅವರಿಗೆ ವೆಸ್ಟ್ ಇಂಡೀಸ್ ನ ದಿಗ್ಗಜ ಬ್ರಿಯನ್ ಲಾರಾ ಅವರ ನಿವೃತ್ತಿಯ ನಂತರ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಒಟ್ಟಾರೆ 87 ಟೆಸ್ಟ್ ಪಂದ್ಯಗಳು, 181 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ, 18 ಟ್ವೆಂಟಿ20ಗಳನ್ನು ಆಡಿ ಒಟ್ಟಾ 11,994 ಅಂತಾರಾಷ್ಟ್ರೀಯ ರನ್ ಕಲೆ ಹಾಕಿದ್ದಾರೆ.

2009ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಾಮ್‌ನರೇಶ್ 291 ರನ್‌ಗಳಿಸಿದ್ದು ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ನಾಯಕರಾಗಿ ರಾಮ್‌ನರೇಶ್ 5 ಏಕದಿನ, 4 ಟೆಸ್ಟ್ ಮತ್ತು 2 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಐಪಿಎಲ್ ನಲ್ಲಿ ಕೇವಲ 4 ಪಂದ್ಯಗಳನ್ನಾಡಿದ್ದರು. ಪಾರ್ಟ್ ಟೈಮ್ ಲೆಗ್ ಸ್ಪಿನ್ ಬೌಲರ್ ಆಗಿದ್ದ ಸರವಣ್ ಏಕದಿನದಲ್ಲಿ 16, ಟೆಸ್ಟ್ ನಲ್ಲಿ 23 ಹಾಗೂ ಟಿ20ಯಲ್ಲಿ 2 ವಿಕೆಟ್ ಪಡೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ramnaresh Sarwan, the former West Indies middle-order batsman, announces his retirement from all forms of the game on Thursday (September 15). The 36-year old batsman played his last match for West Indies in June 2013
Please Wait while comments are loading...