ರವೀಂದ್ರ ಜಡೇಜ ಮದುವೆಗೆ ಧೋನಿ, ರೈನಾಗೆ ಆಹ್ವಾನವಿಲ್ಲ!

Subscribe to Oneindia Kannada

ನವದೆಹಲಿ, ಏಪ್ರಿಲ್, 07: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜ ಅವರು ಏಪ್ರಿಲ್ 17 ರಂದು ರಿವಾಬ ಸೋಲಂಕಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ಜಡೇಜ ತಮ್ಮ ಮದುವೆಗೆ ಮಹೇಂದ್ರ ಸಿಂಗ್ ಧೊನಿ ಮತ್ತು ಸುರೇಶ್ ರೈನಾ ಅವರಿಗೆ ಆಹ್ವಾನ ನೀಡಿಲ್ಲ.

ಆಶ್ಚರ್ಯ ಆಗ್ತಾ ಇದೆಯೇ, ಬೆಂಗಾಲಿ ಚಾನಲ್ ವೊಂದಕ್ಕೆ ಸಂದರ್ಶನ ನೀಡಿರುವ ಜಡೇಜ ಈ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ, ರೈನಾ ಮತ್ತು ಧೋನಿಗೆ ಆಹ್ವಾನ ನೀಡುವ ಪ್ರಮೆಯವೇ ಬರುವುದಿಲ್ಲ. ಅವರು ನನ್ನ ಆಪ್ತ ಸ್ನೇಹಿತರಾಗಿದ್ದು ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲೇಬೇಕು. ವಿಶೇಷವಾದ ಆಮಂತ್ರಣವೊಂದನ್ನು ಕಳಿಸಿ ಕೊಡಲಿದ್ದೇವೆ ಎಂದು ಜಡೇಜ ತಿಳಿಸಿದ್ದಾರೆ.[ರವೀಂದ್ರ ಜಡೇಜ ಮದ್ವೆ ಡೇಟ್ ನಿಗದಿ, ಆಡಿ ಕಾರು ಗಿಫ್ಟ್]

marriage

ಮದುವೆಗೆ ಮುನ್ನವೇ ಏಪ್ರಿಲ್ 04 ಸೋಮವಾರದಂದು ಭಾವಿ ಪತ್ನಿಯ ತಂದೆಯಿಂದ ಐಷಾರಾಮಿ ಆಡಿ ಕಾರೊಂದನ್ನು ಉಡುಗೊರೆಯಾಗಿ ಜಡೇಜಾ ಪಡೆದುಕೊಂಡಿದ್ದರು. ಇದರ ಬೆಲೆ ಬರೋಬ್ಬರಿ 97 ಲಕ್ಷ ರು.[ಜಡೇಜ ನಿಶ್ಚಿತಾರ್ಥದ ಚಿತ್ರಗಳು]

ಫೆಬ್ರವರಿ 5 ರಂದೇ ಜಡೇಜ ಹಾಗೂ ರಿವಾಬ ನಡುವೆ ವಿವಾಹ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತ್ತು. ಟೀಂ ಇಂಡಿಯಾದ ಆಲ್ ರೌಂಡರ್ ಹೊಸ ಇನಿಂಗ್ಸ್ ಆರಂಭ ಮಾಡುತ್ತಿದ್ದು ಶುಭವಾಗಲಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian all-rounder Ravindra Jadeja is all set to marry his fiancee Reeva Solanki and invitations for the same have been sent to the people concerned. But surprisingly, Jadeja has not invited his team-mates Mahendra Singh Dhoni and Suresh Raina for his wedding. According to a Zeenews report, "Speaking to a Bengali news channel Newstime, Jadeja said that there was no need to invite the two cricketers as they were his close friends and would come to the wedding for sure. Jadeja, however, added that a special invitation will be sent to such people who are close to him, if needed be."
Please Wait while comments are loading...