ಭರತ್ ಅರುಣ್ ಪರ ರವಿಶಾಸ್ತ್ರಿ ಬ್ಯಾಟಿಂಗ್ ಏಕೆ?

Posted By:
Subscribe to Oneindia Kannada

ನವದೆಹಲಿ, ಜುಲೈ 13 :ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಅವರು ಆಯ್ಕೆಯಾದ ತಕ್ಷಣವೇ ತಮ್ಮ ಬೇಡಿಕೆ ಹೊರಹಾಕಿದ್ದಾರೆ.

ಜಹೀರ್ ಖಾನ್ ಅವರು ಪೂರ್ಣಾವಧಿ ಕೋಚ್ ಆಗಿರುವ ಮನಸ್ಸಿಲ್ಲ, ಪೂರ್ಣಾವಧಿ ಕೋಚ್ ಆಗಿ ಭರತ್ ಅರುಣ್ ನೇಮಕ ಮಾಡುವಂತೆ ರವಿಶಾಸ್ತ್ರಿ ಮನವಿ ಮಾಡಿಕೊಂಡಿದ್ದಾರೆ. ಸಿಎಸಿ ಸಭೆಯಲ್ಲಿ ಕೂಡಾ ಈ ಬಗ್ಗೆ ರವಿಶಾಸ್ತ್ರಿ ಅವರು ಇದೇ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಜಹೀರ್ ಖಾನ್ ಆಯ್ಕೆ ಬಗ್ಗೆ ರವಿಶಾಸ್ತ್ರಿ ಅಪಸ್ವರ?

ತಮಿಳುನಾಡು ಮೂಲದ ಮಾಜಿ ವೇಗಿ ಭರತ್ ಅರುಣ್ ಅವರು ಬೌಲಿಂಗ್ ಕೋಚ್ ಆಗಿ ಅನುಭವ ಹೊಂದಿದ್ದಾರೆ. ಟೀಮ್ ಇಂಡಿಯಾ ಜತೆ ಕೂಡಾ ಪಳಗಿದ್ದರು. ಹೀಗಾಗಿ ಮುಂದಿನ ವಿಶ್ವಕಪ್ ದೃಷ್ಟಿಯಿಂದ ಭರತ್ ಆರುಣ್ ಅವರನ್ನು ಪುನರ್ ನೇಮಕ ಮಾಡುವುದು ಒಳ್ಳೆಯದು ಎಂದು ರವಿಶಾಸ್ತ್ರಿ ಕೇಳಿಕೊಂಡಿದ್ದಾರೆ. ಈ ಬಗ್ಗೆ ಸಿಎಸಿಯಾಗಲಿ, ಬಿಸಿಸಿಐಯಾಗಲಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

2014ರಲ್ಲಿ ಅಸ್ಟ್ರೇಲಿಯಾದ ಜೋ ಡಾಸ್ ಅವರು ಟೀಂ ಇಂಡಿಯಾದ ಬೌಲಿಂಗ್ ಕೋಚ್ ಸ್ಥಾನ ತೊರೆದ ಬಳಿಕ ಭರತ್ ಅರುಣ್ ಅವರು ಆ ಸ್ಥಾನವನ್ನು ತುಂಬಿದ್ದರು. 2016ರಲ್ಲಿ ಅನಿಲ್ ಕುಂಬ್ಳೆ ಅವರು ಕೋಚ್ ಆಗಿ ನೇಮಕವಾದ ಬಳಿಕ ಕೋಚಿಂಗ್ ತಂಡ ಬದಲಾಯಿತು.ಈಗ ಮತ್ತೊಮ್ಮೆ ಭರತ್ ಅರುಣ್ ನೇಮಕಕ್ಕೆ ರವಿಶಾಸ್ತ್ರಿ ಆಗ್ರಹಿಸಿದ್ದಾರೆ.

ಜಹೀರ್ ಗೆ ಅವಕಾಶ

ಜಹೀರ್ ಗೆ ಅವಕಾಶ

ಪಪ್ಪುವಾ ನ್ಯೂ ಗಿನಿಯಾದ ಮಧ್ಯಂತರ ಮುಖ್ಯ ಕೋಚ್ ಆಗಿರುವ ಆಸ್ಟ್ರೇಲಿಯಾದ ಮಾಜಿ ವೇಗಿ ಜಾಸನ್ ಗಿಲೆಪ್ಸಿ, ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಹೆಸರುಗಳು ಬೌಲಿಂಗ್ ಕೋಚ್ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೆ, ಜಹೀರ್ ಖಾನ್ ಅವರಿಗೆ ಬೌಲಿಂಗ್ ಸಲಹೆಗಾರರಾಗುವ ಅವಕಾಶ ಲಭಿಸಿತು.

ಭರತ್ ಬೇಕು ಎಂದು ಕೇಳಿದ್ದೇಕೆ?

ಭರತ್ ಬೇಕು ಎಂದು ಕೇಳಿದ್ದೇಕೆ?

ಭರತ್ ಅರುಣ್ ಅವರು ಕೋಚ್ ಆಗಿ ಉತ್ತಮ ಸಾಧನೆ ಮಾಡಿದ್ದಾರೆ.ಭರತ್ ಅರುಣ್ ಅವರ ತರಬೇತಿ ಪಡೆದ ಅಂಡರ್ 19 ಭಾರತ ತಂಡ 2012ರಲ್ಲಿ ವಿಶ್ವಕಪ್ ಗೆದ್ದಿದ್ದನ್ನು ಇಲ್ಲಿ ಮರೆಯುವಂತಿಲ್ಲ. 54 ವರ್ಷ ವಯಸ್ಸಿನ ಭರತ್ ಅವರುಆರ್ ಸಿಬಿಯ ಮುಖ್ಯ ಬೌಲಿಂಗ್ ಕೋಚ್ ಆಗಿದ್ದವರು. ದಕ್ಷಿಣ ಆಫ್ರಿಕಾದ ಬೌಲಿಂಗ್ ದಿಗ್ಗಜ ಅಲಾನ್ ಡೋನಾಲ್ಡ್ ಜೊತೆ ಕೂಡಿ ಆರ್ ಸಿಬಿ ಬೌಲರ್ ಗಳಿಗೆ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ.

ಭರತ್ ಅರುಣ್ ಸಾಧನೆ

ಭರತ್ ಅರುಣ್ ಸಾಧನೆ

ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ವಿಶ್ವಕಪ್ 2015ರಲ್ಲಿ ಕಾರ್ಯ ನಿರ್ವಹಿಸಿದ ಭರತ್ ಅರುಣ್ ಅವರು ಆಟಗಾರರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು.ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಬೌಲರ್ ಗಳು 7 ಪಂದ್ಯಗಳಲ್ಲಿ 70 ವಿಕೆಟ್ ಗಳನ್ನು ಉದುರಿಸಿದ್ದು ಸಾಮಾನ್ಯ ಸಾಧನೆಯೇನಲ್ಲ. ಭಾರತದ ಬೌಲರ್ ಗಳು ಅನನುಭವಿಗಳಾಗಿದ್ದರು ಅವರಲ್ಲಿ ಹುರುಪು ತುಂಬಿ ಉತ್ತಮ ಪ್ರದರ್ಶನ ಪಡೆಯುವಲ್ಲಿ ಸಫಲರಾದರು

ಶಾಸ್ತ್ರಿ ಕ್ಯಾಪ್ಟನ್

ಶಾಸ್ತ್ರಿ ಕ್ಯಾಪ್ಟನ್

1979ರಲ್ಲಿ ಶ್ರೀಲಂಕಾ ಕೈಗೊಂಡ ಅಂಡರ್ 19 ಟೀಂ ಇಂಡಿಯಾದಲ್ಲಿದ ಭರತ್ ಅರುಣ್ ಅವರಿಗೆ ರವಿಶಾಸ್ತ್ರಿ ಕ್ಯಾಪ್ಟನ್ ಆಗಿದ್ದರು. ಟೀಂ ಇಂಡಿಯಾ ನಿರ್ದೇಶಕರಾಗಿದ್ದ ಕಾಲದಲ್ಲೂ ಭರತ್ ಜತೆ ಶಾಸ್ತ್ರಿ ಉತ್ತಮ ಹೊಂದಾಣಿಕೆ ಹೊಂದಿದ್ದರು. ಈಗ ವಿಶ್ವಕಪ್ ಗೆ ತಂಡವನ್ನು ಕಟ್ಟುವಾಗ ಯುವ ಬೌಲರ್ ಗಳಿಗೆ ತರಬೇತಿ ನೀಡಲು ಪೂರ್ಣಾವಧಿ ಕೋಚ್ ಅಗತ್ಯವಿದೆ ಎಂದು ಶಾಸ್ತ್ರಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The newly-appointed head coach Ravi Shastri may pitch in for the return of bowling coach Bharat Arun since Zaheer Khan is not keen on the job full time, limiting it to a consultant role.
Please Wait while comments are loading...