ಝಂಪಾ ಏನಿದು ರಂಪಾ? ಕೊಹ್ಲಿ ಯಾರು ಎಂದು ಕೇಳೋದೇ?

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 26: ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಂ ಝಂಪಾ ಯಾರು ಗೊತ್ತೆ? ಭಾರತದ ಕ್ರಿಕೆಟ್ ಫ್ಯಾನ್ಸ್ ಈ ಹೆಸರು ಕೇಳಿದ್ದು ವಿಶ್ವ ಟ್ವೆಂಟಿ20 ಸಮಯದಲ್ಲೇ ಎನ್ನಬಹುದು. ಈಗ ಸಚಿನ್ ಯಾರು ಎಂದು ಮರಿಯಾ ಶರಪೋವಾ ಕೇಳಿದ ರೀತಿಯಲ್ಲೇ ಟ್ವೀಟ್ ಮಾಡಿ ಜನರ ಬಾಯಿಗೆ ಸಿಲುಕಿ ನಗೆ ಪಾಟಲಿಗೀಡಾಗಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಆಸ್ಟ್ರೇಲಿಯಾ ಕ್ರಿಕೆಟ್ ನ ಉದಯೋನ್ಮುಖ ಸ್ಪಿನ್ನರ್ ಎನಿಸಿಕೊಂಡಿರುವ ಆಡಂ ಝಂಪಾ ತಮಾಷೆಗೂ, ಟೈಮ್ ಸರಿಯಿಲ್ಲದೆಯೋ ಕೇಳಿದ ಪ್ರಶ್ನೆ ಈಗ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಚರ್ಚೆಗೀಡಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಅಲ್ಲದೆ ಸಹ ಆಟಗಾರ ಎಬಿ ಡಿವಿಲಿಯರ್ಸ್ ಬಗ್ಗೆ ಕೂಡಾ ಪ್ರಶ್ನಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಆಸ್ಟ್ರೇಲಿಯಾದ ಬೌಲರ್ ಕೇನ್ ರಿಚರ್ಡ್ಸನ್ ಅವರು ಟ್ವಿಟ್ಟರ್ ಮೂಲಕವೇ ಉತ್ತರಿಸಿದ್ದಾರೆ. ಕೊಹ್ಲಿ ಹಾಗೂ ಎಬಿಡಿ ಅದ್ಭುತ ಜೊತೆಯಾಟದ ಬಗ್ಗೆ ಕೇನ್ ರಿಚರ್ಡ್ಸನ್ ಹೊಗಳಿ ಟ್ವೀಟ್ ಮಾಡಿದ್ದರು. ಯಾರು ಇವರಿಬ್ಬರು ಎಂದು ಆಡಂ ಝಂಪಾ ಪ್ರಶ್ನಿಸಿದರು.

ಎಂಎಸ್ ಧೋನಿ ನೇತೃತ್ವದ ಪುಣೆ ತಂಡದ ಪರ ಆಡಲು ಆಯ್ಕೆಯಾಗಿರುವ ಆಡಂ ಝಂಪಾ ಅವರನ್ನು ಅಭಿಮಾನಿಗಳು ಸರಿಯಾಗಿ ತರಾಟೆ ತೆಗೆದುಕೊಂಡ ಮೇಲೆ ಝಂಪಾ ಅವರು ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಆದರೆ, ಅದಕ್ಕೂ ಮುನ್ನ ಝಂಪಾಗೆ ಸರಿಯಾಗಿ ಉತ್ತರ ನೀಡಿದ ರಿಚರ್ಡ್ಸನ್ ಅವರು ಹೋಗಿ ಇಶಾಂತ್ (ಶರ್ಮ) ನನ್ನು ಕೇಳು ಎಂದಿದ್ದಾರೆ.

ಇಶಾಂತ್ (ಶರ್ಮ) ನನ್ನು ಕೇಳು ಎಂದಿದ್ದೇಕೆ?

ಇಶಾಂತ್ (ಶರ್ಮ) ನನ್ನು ಕೇಳು ಎಂದಿದ್ದೇಕೆ?

4 ಓವರ್ ಗಳಲ್ಲಿ 47ರನ್ ಚೆಚ್ಚಿಸಿಕೊಂಡ ಇಶಾಂತ್ ಶರ್ಮ ಸದ್ಯ ಗಾಯಾಳುವಾಗಿದ್ದಾರೆ. ದುಬಾರಿ ಬೌಲರ್ ಗಳ ಪಟ್ಟಿಯಲ್ಲಿ ಇಶಾಂತ್ ಸದಾ ಕಾಣಿಸಿಕೊಳ್ಳುತ್ತಾರೆ.

ಕೇನ್ ರಿಚರ್ಡ್ಸನ್ ಮಾಡಿದ ಟ್ವೀಟ್

ಕೇನ್ ರಿಚರ್ಡ್ಸನ್ ಮಾಡಿದ ಟ್ವೀಟ್, ಎಬಿಡಿ, ಕೊಹ್ಲಿ ಆಟ ನೋಡುವುದೇ ಚೆಂದ ಎಂದಿದ್ದರು.

rn

ಕೇನ್ ರಿಚರ್ಡ್ಸನ್ ಗೆ ಪ್ರಶ್ನೆ ಹಾಕಿದ ಝಂಪಾ

ಕೇನ್ ರಿಚರ್ಡ್ಸನ್ ಗೆ ಪ್ರಶ್ನೆ ಹಾಕಿದ ಝಂಪಾ, ಯಾರು ಇವರಿಬ್ಬರು ಎಂದಿದ್ದರು.

rn

ಇಶಾಂತ್ ಯಾಕೆ ಬ್ರೆಂಡನ್ ಕೇಳಲಿ

ಇಶಾಂತ್ ಯಾಕೆ ಬ್ರೆಂಡನ್ ಕೇಳಲಿ, ಕೇನ್ ನಿಮ್ಮ ಉತ್ತರ ಸೂಪರ್

ಬದಲಿಗೆ ಫಾಲ್ಕ್ನರ್ ಕೇಳಲಿ ಗೊತ್ತಾಗುತ್ತೆ

ಬದಲಿಗೆ ಫಾಲ್ಕ್ನರ್ (ಆಸ್ಟ್ರೇಲಿಯಾದ ವೇಗಿ) ಕೇಳಲಿ ಗೊತ್ತಾಗುತ್ತೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Australia leg-spinner Adam Zampa came under sharp criticism on social media and had a Maria Sharapova-like moment after he asked 'Who is Virat Kohli'.
Please Wait while comments are loading...