ಕೊಹ್ಲಿ ಗರ್ಲ್ ಫ್ರೆಂಡ್ ಯಾರು? ಹೀಗೆಂದು 9ನೇ ಕ್ಲಾಸ್ ಪರೀಕ್ಷೆಯಲ್ಲಿ ಪ್ರಶ್ನೆ

Written By: Ramesh
Subscribe to Oneindia Kannada

ಮುಂಬೈ, ಅಕ್ಟೋಬರ್. 17 : ಕೊಹ್ಲಿ ಗರ್ಲ್ ಫ್ರೆಂಡ್ ಯಾರು ಬಿಟ್ಟಸ್ಥಳ ತುಂಬಿರಿ. ಹೀಗೆಂದು ನಾವು ನಿಮಗೆ ಈ ಪ್ರಶ್ನೆ ಕೇಳುತ್ತಿಲ್ಲ. ಇಂತಹ ಅಪರೂಪದ ಪ್ರಶ್ನೆಯೊಂದನ್ನು ಮಹಾರಾಷ್ಟ್ರದ ಚಾಚಾ ನೆಹರೂ ಹಿಂದಿ ಪ್ರೌಢ ಶಾಲೆ ಪರೀಕ್ಷೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ.

ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿಯ ಗರ್ಲ್ ಫ್ರೆಂಡ್ ಹೆಸರು....ಬಿಟ್ಟ ಸ್ಥಳ ತುಂಬಿರಿ ಎಂದು ಪತ್ರಿಕೆಯಲ್ಲಿ ಪ್ರಶ್ನೆಯನ್ನು ಮಹರಾಷ್ಟ್ರದ ಬಿವಾಂಡಿಯಲ್ಲಿರುವ ಚಾಚಾ ನೆಹರೂ ಹಿಂದಿ ಹೈಸ್ಕೂಲ್ ನಲ್ಲಿ 9ನೇ ತರಗತಿಯ ದೈಹಿಕ ಶಿಕ್ಷಣ(ಪಿಟಿ) ಪರೀಕ್ಷೆಯಲ್ಲಿ ಕೇಳಲಾಗಿದೆ. ಈ ಪ್ರಶ್ನೆಗೆ ಪ್ರಿಯಂಕಾ ಚೋಪ್ರಾ, ಅನುಷ್ಕಾ ಶರ್ಮಾ ಹಾಗೂ ದೀಪಿಕಾ ಪಡುಕೋಣೆ ಎಂದು ಮೂರು ಆಯ್ಕೆಗಳನ್ನೂ ನೀಡಲಾಗಿದೆ.

Kohli

ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ. ಈ ಜೋಡಿ ತಮೆಮರಿಸಿಕೊಂಡು ಪಾರ್ಟಿ, ಡಿನ್ನರ್ ಅಂತ ತಿರುಗುತ್ತಿವೆ ಹೊರೆತು.

ನಾವಿಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದೇವೆ ಎಂದು ಈ ಇಬ್ಬರೂ ಎಲ್ಲೂ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿಲ್ಲ. ಆದರೆ ಈ ಶಾಲೆ ಪರೀಕ್ಷೆಯಲ್ಲಿ ಈ ರೀತಿ ಪ್ರಶ್ನೆ ಕೇಳಿರುವುದು ಎಷ್ಟು ಸರಿ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Physical Training or PT exam, class nine students of Chacha Nehru Hindi High School in Bhiwandi had to name the Test captain's girlfriend, reports Local News Network. The multiple choice question offered students these options to pick from - Priyanka (Chopra), Anushka (Sharma) and Deepika (Padukone).
Please Wait while comments are loading...