ವಿಂಡೀಸ್ ವಿರುದ್ಧ ಸರಣಿ ಗೆದ್ದರೂ ಭಾರತಕ್ಕೆ ನಂ.1 ಪಟ್ಟ ಸಿಕ್ಕಲ್ಲ

By: ಕ್ರೀಡಾ ಡೆಸ್ಕ್
Subscribe to Oneindia Kannada

ನವದೆಹಲಿ ಆಗಸ್ಟ್.25 : ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ತಾನ ಕೈತಪ್ಪಿದರೇನಂತೆ, ಐಸಿಸಿ ಟ್ವೆಂಟಿ-20 ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಅವಕಾಶ ಟೀಂ ಇಂಡಿಯಾಕ್ಕೆ ಕೂಡಿ ಬಂದಿದೆ. ಆದರೆ, ಒಂದು ವೇಳೆ ಸಮ ಅಂಕ ಗಳಿಸಿದರೂ ನ್ಯೂಜಿಲೆಂಡ್ ತಂಡ ಅಗ್ರಸ್ಥಾನದಲ್ಲೇ ಮುಂದುವರೆಯಲಿದೆ.

ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ಮಣಿಸಿ ಸರಣಿ ಗೆದ್ದರೆ, ಐಸಿಸಿ ಟ್ವೆಂಟಿ 20 ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಇದೇ ಮೊದಲ ಬಾರಿಗೆ ಅಮೇರಿಕಾದ ಪ್ಲೋರಿಡಾದಲ್ಲಿ ಆಗಸ್ಟ್ 27 ಹಾಗೂ 28 ರಂದು ನಡೆಯಲಿರುವ ಎರಡು ಟಿ20 ಪಂದ್ಯಗಳು ಭಾರತದ ಪಾಲಿಗೆ ಮಹತ್ವರವೆನಿಸಿಕೊಂಡಿವೆ. [ಚಿತ್ರಗಳು: ಫ್ಲೋರಿಡಾದಲ್ಲಿ ಟಿ20 ಆಡಲು ಬಂದ ಧೋನಿ ಪಡೆ]

Whitewash of West Indies won't be enough for India to get top T20I rank

ಟೀಂ ಇಂಡಿಯಾ ಪ್ರಸ್ತುತ 128 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ. ನ್ಯೂಜಿಲೆಂಡ್ ತಂಡ 132 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು 122 ಅಂಕ ಹೊಂದಿರುವ ವೆಸ್ಟ್'ಇಂಡೀಸ್ ತಂಡ ಮೂರನೇ ಸ್ಥಾನದಲ್ಲಿದೆ.[ಚಿತ್ರಗಳಲ್ಲಿ : ಟೀಂ ಇಂಡಿಯಾಕ್ಕೆ ಮಿಯಾಮಿ ಹೀಟ್ಸ್ ಚಾಲೆಂಜ್]

ಒಂದು ವೇಳೆ ಭಾರತವನ್ನು ವೆಸ್ಟ್ ಇಂಡೀಸ್ 2-0 ಅಂತರದಲ್ಲಿ ಭಾರತವನ್ನು ಮಣಿಸಿದರೆ 127 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಲಗ್ಗೆಯಿಡಲಿದೆ. ಇದರಿಂದ ಭಾರತ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಅದೇ ಭಾರತ ಇದೇ ಅಂತರದಲ್ಲಿ ಗೆದ್ದರೆ 132 ಅಂಕ ಗಳಿಸಿದರೆ ನಂ.1ಕ್ಕೇರಬಹುದಾದರೂ ಕಡಿಮೆ ಸ್ಥಾನದಲ್ಲಿರುವ ತಂಡದ ಮೇಲೆ ಗೆಲುವು ಸಾಧಿಸಿದ್ದರಿಂದ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಗುತ್ತದೆ.

ಒಂದು ವೇಳೆ ವಿಂಡಿಸ್ ಸರಣಿ ಸೋತರೆ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ. ಇನ್ನು 1-1 ಅಂತರದಲ್ಲಿ ಸರಣಿ ಸಮ ಮಾಡಿಕೊಂಡರೆ ಭಾರತ ಸ್ಥಾನದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ಆದರೆ, ವಿಂಡೀಸ್ ಒಂದು ಅಂಕ ಹೆಚ್ಚಿಸಿಕೊಂಡು 123 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿಯೇ ಭದ್ರವಾಗಿರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A whitewash of the West Indies in the forthcoming two-match Twenty20 International series in Florida on August 27-28 will still not help second-placed India climb to the top of the International Cricket Council (ICC) T20 rankings.
Please Wait while comments are loading...