ಕೈಯಲ್ಲಿ ಕಾಸಿಲ್ಲದ ಸಮಯದಲ್ಲಿ, ಸಚಿನ್ ಕ್ಯಾಬ್ ರೈಡ್!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 27: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಹಿಂದೊಮ್ಮೆ ಬಾಲ್ಯದ ದಿನಗಳಲ್ಲಿ ಸಾವಿನ ಮನೆ ಹೊಕ್ಕು ಬಂದ ಅನುಭವವನ್ನು ಹಂಚಿಕೊಂಡಿದ್ದರು. ಈಗ ಕೈಯಲ್ಲಿ ಕಾಸಿಲ್ಲದೆ ಮನೆಗೆ ನಡೆದುಕೊಂಡು ಹೋದ ಘಟನೆಯನ್ನು ಹೊರ ಹಾಕಿದ್ದಾರೆ.

ದೇಶದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಸಚಿನ್ ಅವರು ಒಂದು ಕಾಲದಲ್ಲಿ ಪುಣೆಯ ರೈಲ್ವೇ ಸ್ಟೇಷನ್​ನಿಂದ ಮನೆಗೆ ತೆರಳುವ ಸಲುವಾಗಿ ಕ್ಯಾಬ್​ಗೆ ನೀಡಲು ಹಣವಿಲ್ಲದೆ, ನಡೆದುಕೊಂಡೇ ಹೋಗಿದ್ದರಂತೆ. [ಸಾವಿನ ಮನೆ ಕದ ತಟ್ಟಿದ ಅನುಭವ ಹಂಚಿಕೊಂಡ ಸಚಿನ್]

ಡಿಬಿಎಸ್ ಬ್ಯಾಂಕ್​ನ 'ಡಿಜಿಬ್ಯಾಂಕ್' ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ತೆಂಡುಲ್ಕರ್, 'ಕೇವಲ 12 ವರ್ಷದವನಾಗಿದ್ದಾಗ ಮುಂಬೈ 15 ವಯೋಮಿತಿ ತಂಡಕ್ಕೆ ಆಡಲು ಆಯ್ಕೆಯಾಗಿದ್ದೆ. ಉತ್ಸಾಹದಲ್ಲಿದ್ದ ನಾನು, ಮನೆಯಿಂದ ಸ್ವಲ್ಪ ಹಣ ಪಡೆದುಕೊಂಡು ಪುಣೆಯಲ್ಲಿ ಮೂರು ಪಂದ್ಯವಾಡಲು ತೆರಳಿದ್ದೆ. ಆದರೆ, ಪುಣೆಗೆ ತೆರಳುವ ಹೊತ್ತಿನಲ್ಲೇ ಮಳೆ ಆರಂಭವಾಗಿತ್ತು.

When Sachin Tendulkar had no money in pocket for a cab ride home

ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರೂ ಕೇವಲ 4 ರನ್ ಬಾರಿಸಿ ರನೌಟ್ ಆಗಿದ್ದೆ. ಚಿಕ್ಕ ವಯಸ್ಸು ಆಗಿದ್ದರಿಂದ ವಿಕೆಟ್ ನಡುವೆ ವೇಗವಾಗಿ ಓಡಲು ಸಾಧ್ಯವಾಗುತ್ತಿರಲಿಲ್ಲ. ಡ್ರೆಸಿಂಗ್ ರೂಮಿಗೆ ಅಳುತ್ತಲೇ ಬಂದ ನನಗೆ ಮತ್ತೊಮ್ಮೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಕ್ಕಿರಲಿಲ್ಲ' ಎಂದು ಹಳೆ ನೆನಪುಗಳನ್ನು ಸಚಿನ್ ಹಂಚಿಕೊಂಡಿದ್ದಾರೆ.[ಲಿಮ್ಕಾ ರೆಕಾರ್ಡಿಗೆ ಸಚಿನ್ ತೆಂಡೂಲ್ಕರ್ ಆತ್ಮಚರಿತ್ರೆ ಸೇರ್ಪಡೆ]

'ಮಳೆ ಇದ್ದ ಕಾರಣ ಹೊರಗಡೆ ತಿನ್ನಲು ಅಥವಾ ಚಲನಚಿತ್ರ ವೀಕ್ಷಿಸಿಲು ಹೋಗಿದ್ದೆವು. ಎಷ್ಟು ಹಣ ಖರ್ಚು ಮಾಡಬೇಕು, ಎಷ್ಟು ಹಣ ಉಳಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಯೋಚನೆ ಇರಲಿಲ್ಲ. ಕೈಲಿದ್ದ ಹಣವನ್ನೆಲ್ಲಾ ಖರ್ಚು ಮಾಡಿ ರೈಲಿನಲ್ಲಿ ಮುಂಬೈಗೆ ಬಂದಿದ್ದೆ. ಆದರೆ, ನನ್ನ ಜೇಬಲ್ಲಿ ಒಂದು ಪೈಸೆಯೂ ಇರಲಿಲ್ಲ. ಭಾರವಿದ್ದ ಎರಡು ಬ್ಯಾಗ್​ಗಳನ್ನು ಹೊತ್ತಿದ್ದ ನಾನು ದಾದರ್ ಸ್ಟೇಷನ್​ನಲ್ಲಿ ಇಳಿದುಕೊಂಡಿದ್ದೆ. ರೈಲ್ವೇ ಸ್ಟೇಷನ್​ನಿಂದ ಮನೆಗೆ ತೆರಳುವ ಸಲುವಾಗಿ ಕ್ಯಾಬ್​ಗೆ ನೀಡಲು ಹಣವಿಲ್ಲದೆ, ಶಿವಾಜಿ ಪಾರ್ಕ್​ನಲ್ಲಿ ನಡೆದುಕೊಂಡೇ ಮನೆಗೆ ತಲುಪಿದ್ದೆ'[ಕ್ರಿಕೆಟ್ ದಿಗ್ಗಜ ಸಚಿನ್ ಆತ್ಮಕಥೆ ಚಿತ್ರದ ಟೀಸರ್ ]

ಊಹೆ ಮಾಡಿಕೊಳ್ಳಿ, ಆಗ ನನ್ನಲ್ಲಿ ಫೋನ್ ಇದ್ದಿದ್ದರೆ, ಅಪ್ಪನಿಗೆ ಅಥವಾ ಅಮ್ಮನಿಗೆ ಒಂದೇ ಒಂದು ಎಸ್​ಎಂಎಸ್ ಮಾಡಿಸಿ ನನ್ನ ಅಕೌಂಟ್​ಗೆ ಹಣ ತರಿಸಿಕೊಂಡು ಕ್ಯಾಬ್ ನಲ್ಲೇ ಮನೆಗೆ ತೆರಳಬಹುದಾಗಿದ್ದು ಎಂದು ಸಚಿನ್ ಹೇಳಿದರು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕ್ರಿಕೆಟ್ ನಲ್ಲಿ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾ, ಥರ್ಡ್ ಅಂಪೈರ್ ನಿರ್ಣಯಕ್ಕೆ ಔಟಾದ ಮೊದಲ ಕ್ರಿಕೆಟರ್ ನಾನು, 1992ರಲ್ಲಿ ಡರ್ಬನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನಾನು ರನೌಟ್ ಆಗಿದ್ದೆ ಎಂದು ಮೂರನೇ ಅಂಪೈರ್ ನಿರ್ಣಯ ನೀಡಿದರು. ತಂತ್ರಜ್ಞಾನ ಕೆಲವೊಮ್ಮೆ ನಿಮ್ಮ ಸಹಾಯಕ್ಕೆ ಬರುವುದಿಲ್ಲ ಎಂದು ನಗೆ ಚೆಲ್ಲಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricket icon Sachin Tendulkar, among the richest sportsmen in the country, today recalled a time in his life when he did not have money to hire a cab for a ride home from the railway station on his return from Pune after an under-15 cricket game.
Please Wait while comments are loading...