ಪರ್ತ್ ನಲ್ಲಿ ಪವರ್ ಫುಲ್ ಆಟವಾಡಿದ ರೋಹಿತ್ ದಾಖಲೆಗಳು!

Posted By:
Subscribe to Oneindia Kannada

ಪರ್ತ್, ಜ. 12: ಆಸೀಸ್ ವೇಗಿಗಳು ಪತರಗುಟ್ಟುವಂತೆ ಮಾಡಿದ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ಟೂರ್ನಿ ಆರಂಭಕ್ಕೂ ಮುನ್ನ ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಬೆಂಕಿಗೆ ಬೆಂಕಿ, ವಿನೂತನ ಮಾದರಿ ಆಟ ಕಾಣಲಿದ್ದೀರಿ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದ ರೋಹಿತ್ ಅವರು ಪರ್ತ್ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಹಲವು ದಾಖಲೆ ಮುರಿದಿದ್ದಾರೆ.

ಪರ್ತ್ ಒಡಿಐ ಸ್ಕೋರ್ ಕಾರ್ಡ್ | ಪಂದ್ಯದ ವರದಿ

28 ವರ್ಷ ವಯಸ್ಸಿನ ರೋಹಿತ್ ಶರ್ಮ ಅವರು ಮಂಗಳವಾರ (ಜನವರಿ 12) ವಾಕಾ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲೇ ತಮ್ಮ ಪ್ರತಿಭೆಯ ಝಲಕ್ ತೋರಿಸಿದ್ದಾರೆ. ಆಸೀಸ್ ವೇಗಿಗಳ ಎಸೆತಗಳನ್ನು ಮನಬಂದಂತೆ ಚೆಚ್ಚಿದ ರೋಹಿತ್ ಅವರು ತಮ್ಮ ವೃತ್ತಿ ಬದುಕಿನ 9ನೇ ಶತಕ ಹಾಗೂ ಆಸೀಸ್ ವಿರುದ್ಧ 4ನೇ ಶತಕ ಸಾಧಿಸಿದರು.

What all records did centurion Rohit Sharma break in Perth ODI?

ಮುಂಬೈನ ಬಲಗೈ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಅವರು 171ರನ್ ಬಾರಿಸಿ ಅಜೇಯರಾಗಿ ಉಳಿದರು. 163 ಎಸೆತಗಳಲ್ಲಿ 13 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿದರು. ಕೊಹ್ಲಿ ಅವರು 91ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಭಾರತ 50 ಓವರ್ ಗಳಲ್ಲಿ 309/3 ಸ್ಕೋರ್ ಮಾಡಿದೆ. [ರೈತನ ಮಗ ಬರಿಂದರ್, ಬಾಕ್ಸಿಂಗ್ ನಿಂದ ಕ್ರಿಕೆಟ್ ಗೆ ಎಂಟ್ರಿ]

ರೋಹಿತ್ ಅವರ ಸಾಧನೆ

* ಪರ್ತ್ ನ ವಾಕಾ ಮೈದಾನದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ ಮನ್.

* ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ ದಾಖಲಿಸಿದ ಭಾರತೀಯ ಬ್ಯಾಟ್ಸ್ ಮನ್ ರೋಹಿತ್ (171 ಅಜೇಯ), ಈ ಹಿಂದೆ 2004ರಲ್ಲಿ ಯುವರಾಜ್ ಸಿಂಗ್ (139)

* ರೋಹಿತ್ ಅವರು ತಮ್ಮ ಇನ್ನಿಂಗ್ಸ್ ನಡುವೆ ಆಸ್ಟ್ರೇಲಿಯಾದಲ್ಲಿ 19 ಇನ್ನಿಂಗ್ಸ್ ಗಳಿಂದ 1,000 ರನ್ ಕಲೆ ಹಾಕಿದ ಸಾಧನೆ ಮಾಡಿದರು.

* ಆಸ್ಟ್ರೇಲಿಯಾದಲ್ಲಿ ವಿವಿಎಸ್ ಲಕ್ಷ್ಮಣ್ ಹೊರತು ಪಡಿಸಿದರೆ ರೋಹಿತ್ ಅವರು ಮಾತ್ರ 3ಕ್ಕೂ ಅಧಿಕ ಶತಕ ದಾಖಲಿಸಿದ್ದಾರೆ.

* ಇದು ರೋಹಿತ್ ಅವರ ನಾಲ್ಕನೇ 150 ಪ್ಲಸ್ ಸ್ಕೋರ್ ಆಗಿದೆ (264, 209, 150, 171) ಕ್ರಿಸ್ ಗೇಲ್ ಹಾಗೂ ಸನತ್ ಜಯಸೂರ್ಯ ಕೂಡಾ ನಾಲ್ಕು ಬಾರಿ 150 ಪ್ಲಸ್ ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು 5 ಬಾರಿ ಈ ಸಾಧನೆ ಮಾಡಿದ್ದಾರೆ.

* ಪರ್ತ್ ನಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ ದಾಖಲೆ ಕೂಡಾ ರೋಹಿತ್ ಶರ್ಮ ಅವರ ಪಾಲಾಗಿದೆ. ಈ ಹಿಂದೆ ಜಿಂಬಾಬ್ವೆಯ ಸ್ಟುವರ್ಟ್ ಕಾರ್ಲಿಸ್ಲೆ 119ರನ್ ಹೊಡೆದಿದ್ದರು.

* ಆಸ್ಟ್ರೇಲಿಯಾ ನೆಲದಲ್ಲಿ ಅತ್ಯಧಿಕ ವೈಯಕ್ತಿಅಕ ಮೊತ್ತ ಗಳಿಕೆಯಲ್ಲಿ ರೋಹಿತ್ ಅವರ 171ರನ್ ಗಳ ಇನ್ನಿಂಗ್ಸ್ ಐದನೇ ಸ್ಥಾನದಲ್ಲಿದೆ. ಕ್ರಿಸ್ ಗೇಲ್ (215), ವಾರ್ನರ್ (178), ಮಾರ್ಕ್ ವಾ (173) ಹಾಗೂ ಆಡಂ ಗಿಲ್ ಕ್ರಿಸ್ಟ್ (172) ಇತರೆ ಶ್ರೇಷ್ಠ ಪ್ರದರ್ಶನವಾಗಿದೆ.

* ರೋಹಿತ್ ಹಾಗೂ ಲಕ್ಷ್ಮಣ್ ಅವರು ಆಸ್ಟ್ರೇಲಿಯಾ ವಿರುದ್ಧ ತಲಾ 4 ಶತಕ ಗಳಿಸಿದ್ದಾರೆ. ಭಾರತದ ಬ್ಯಾಟ್ಸ್ ಮನ್ ಗಳ ಪೈಕಿ ಸಚಿನ್ ಅವರು ಆಸೀಸ್ ವಿರುದ್ಧ 9 ಬಾರಿ 100ರನ್ ಗಡಿ ದಾಟಿದ್ದಾರೆ.

* ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರು 2ನೇ ವಿಕೆಟ್ ಗೆ 207ರನ್ ಜೊತೆ ಯಾಟ ಕಂಡಿದ್ದಾರೆ. ಇದು ಆಸ್ಟ್ರೇಲಿಯಾ ವಿರುದ್ಧ ಇದ್ದ ಈ ಹಿಂದಿನ ದಾಖಲೆಯನ್ನು ಮುರಿದಿದೆ. ಈ ಹಿಂದೆ 2001ರಲ್ಲಿ ಇಂದೋರ್ ನಲ್ಲಿ ಲಕ್ಷ್ಮಣ್ ಹಾಗೂ ಸಚಿನ್ 199ರನ್ ಜೊತೆಯಾಟ ಸಾಧಿಸಿದ್ದರು.

* ಭಾರತ ಹಾಗೂ ಆಸ್ಟೇಲಿಯಾ ವಿರುದ್ಧದ ಏಕದಿನ ಇತಿಹಾಸದಲ್ಲಿ ರೋಹಿತ್ ಹಾಗೂ ಕೊಹ್ಲಿ ಅವರ ದ್ವಿಶತಕದ ಜೊತೆಯಾಟಕ್ಕೂ ಮುನ್ನ ಒಮ್ಮೆ ಮಾತ್ರ 200 ಪ್ಲಸ್ ಜೊತೆಯಾಟ ಸಾಧಿಸಲಾಗಿತ್ತು. 2004ರ ಜನವರಿಯಲ್ಲಿ ಸಿಡ್ನಿಯಲ್ಲಿ ಯುವರಾಜ್ ಸಿಂಗ್ ಹಾಗೂ ಲಕ್ಷ್ಮಣ್ ಅವರು ನಾಲ್ಕನೇ ವಿಕೆಟ್ ಗೆ 213ರನ್ ಜೊತೆಯಾಟ ಕಂಡಿದ್ದರು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Before the start of the ODI series against Australia, India's opening batsman Rohit Sharma had said he will be "innovative" and will be "fighting fire with fire". And he did the same in the series opener today(Jan 12) and set records. Here are the records set by Rohit Sharma today in Perth
Please Wait while comments are loading...