ಭಾರತ, ಆಸೀಸ್ ಪಂದ್ಯ ಒಂದ್ವೇಳೆ ವಾಷೌಟ್ ಆದರೆ!

Posted By:
Subscribe to Oneindia Kannada

ಮೋಹಾಲಿ, ಮಾರ್ಚ್ 26 : ಬೇಸಿಗೆಯಿಂದ ಬೇಸತ್ತಿರುವ ಕರ್ನಾಟಕದ ಜನತೆ ಒಂದೇ ಸವನೆ ಮಳೆ ಸುರಿಯಲಪ್ಪ ಅಂತ ವರುಣ ದೇವರನ್ನು ಪ್ರಾರ್ಥಿಸುತ್ತಿದ್ದರೆ, ಭಾನುವಾರ, ಮಾ.27ರ ಸಂಜೆ ಒಂದೇ ಒಂದು ಹನಿಯೂ ಮೋಹಾಲಿಯಲ್ಲಿ ಸುರಿಯದಿರಲಿ ಎಂದು ಕಟ್ಟಾ ಕ್ರಿಕೆಟ್ ಪ್ರೇಮಿಗಳು ಪ್ರಾರ್ಥಿಸುತ್ತಿದ್ದಾರೆ. [ಎರಡೇ ಎರಡು ಬಕೆಟ್ ನೀರುಳಿಸಲು ಸಾಧ್ಯವೆ? ಪ್ರಯತ್ನಿಸಿ]

ಐಸಿಸಿ ವರ್ಲ್ಡ್ ಟ್ವೆಂಟಿ20ಯ ಕ್ವಾರ್ಟರ್ ಫೈನಲ್ ಎಂದೇ ಪರಿಗಣಿಸಲಾಗಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ಅಷ್ಟು ಮಹತ್ವ ಪಡೆದುಕೊಂಡಿದೆ. ಮಳೆಯಾಗಿ ಪಂದ್ಯ ರದ್ದಾಗದಿರುವುದು ಮಾತ್ರವಲ್ಲ, ಭಾರತ ಗೆಲ್ಲಲೇಬೇಕು. ಗೆಲ್ಲದಿದ್ದರೆ ವಿಶ್ವಕಪ್ ಗೆಲ್ಲುವ ಕೋಟ್ಯಂತರ ಜನರ ಕನಸು ಭಗ್ನವಾಗಲಿದೆ.

ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಗೆದ್ದವರು ಸೆಮಿಫೈನಲ್ಲಿಗೆ ಮುನ್ನಡೆಯಲಿದ್ದಾರೆ. ಅಜೇಯವಾಗುಳಿದಿರುವ ನ್ಯೂಜಿಲೆಂಡ್ ಈಗಾಗಲೆ ಸೆಮಿಫೈನಲ್ ತಲುಪಿರುವ ಮೊದಲ ತಂಡವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಮಳೆ ಏಕೆ ಬರಬಾರದು ಎಂಬುದಕ್ಕೆ ಲೆಕ್ಕಾಚಾರಗಳು ಕೆಳಗಿವೆ. [ಭಾರತ ಗೆದ್ದಿದ್ದಕ್ಕೆ ಪೂನಂಪಾಂಡೆ 'ಎದೆಗಾರಿಕೆ']

What happens if India-Australia World T20 'quarter-final' is washed out?

ಆಡಿರುವ ಮೂರು ಪಂದ್ಯಗಳಲ್ಲಿ ಎರಡೆರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಗಳನ್ನು ಭಾರತ ಮತ್ತು ಆಸ್ಟ್ರೇಲಿಯಾ ಪಡೆದಿವೆ. ಆದರೆ, ನೆಟ್ ರನ್ ರೇಟ್ ಆಧಾರದ ಮೇಲೆ ಆಸ್ಟ್ರೇಲಿಯಾ(+0.440)ದ ಕೈ ಭಾರತ(0.546)ಕ್ಕೆ ಮೇಲಿದೆ. ಒಂದು ವೇಳೆ ಮಳೆ ಸುರಿದು ಪಂದ್ಯ ರದ್ದಾದರೆ ಆಸ್ಟ್ರೇಲಿಯಾ ನೇರವಾಗಿ ನಾಕೌಟ್ ಹಂತಕ್ಕೆ ತಲುಪಲಿದೆ.

ಬಾಂಗ್ಲಾದೇಶದ ವಿರುದ್ಧ ರೋಚಕ ಜಯಗಳಿಸಿದ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕೆಂಬ ಉಮೇದಿಯಿಂದ ಅಭ್ಯಾಸ ನಡೆಸಿದ್ದಾರೆ. [ಟೀಂ ಇಂಡಿಯಾ ಸೆಮಿಫೈನಲ್ ಹೇಗೆ ತಲುಪಬಹುದು?]

ಭಾರತದ ಸ್ಟೇಡಿಯಂಗಳಲ್ಲಿ ಸಾಕಷ್ಟು ಆಡಿರುವ ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ಮೋಹಾಲಿಯ ಪಿಚ್ ಭಾರತದ ಆಟಗಾರರಿಗಿಂತ ಆಸೀಸ್‌ನ ಆಟಗಾರರಿಗೆ ಹೆಚ್ಚು ಸಹಾಯಕವಾಗಿರಲಿದೆ ಎಂದು ಬೌನ್ಸರ್ ಎಸದಿದ್ದಾರೆ. ಇದು ಆಸ್ಟ್ರೇಲಿಯನ್ನರ ತಂತ್ರಗಾರಿಕೆ ಕೂಡ.

ಆದರೆ, ಕೆಲ ಬ್ಯಾಟಿಂಗ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆ ಸಮಸ್ಯೆಗಳನ್ನು ಮೀರಿ, ಒಗ್ಗಟ್ಟಿನಿಂದ ಆಡಬೇಕಿದೆ. ಆರಂಭಿಕ ಬ್ಯಾಟ್ಸ್‌ಮನ್ ಗಳು ಯಶಸ್ವಿಯಾಗುಬೇಕಾಗಿರುವುದು ಅತ್ಯಗತ್ಯವಾಗಿದೆ. ಆಸ್ಟ್ರೇಲಿಯನ್ನರಿಗೂ ಇದರ ಅರಿವಿದೆ. [ವಿಶ್ವ ಟಿ20: ಕೊನೆ ಓವರ್ ಥ್ರಿಲ್ಲರ್, ಧೋನಿ, ಪಾಂಡ್ಯ ಸೂಪರ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
What happens if India-Australia World T20 'quarter-final' is washed out in ICC World Twenty20? Australia will naturally move to semi-final, as it has better run rate than India. Cricket fans are hoping it does not rain on Sunday, March 27.
Please Wait while comments are loading...