ಟೀಂ ಇಂಡಿಯಾ ಕೋಚ್ ಆಗುವ ಬಗ್ಗೆ ದ್ರಾವಿಡ್ ಹೇಳಿದ್ದೇನು?

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 06: ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಬುಧವಾರ (ಏಪ್ರಿಲ್ 06) ಭಾರತ ಕ್ರಿಕೆಟ್ ತಂಡದ ಕೋಚ್ ಆಗುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಟೀಂ ಇಂಡಿಯಾದ ನಿರ್ದೇಶಕರಾಗಿರುವ ರವಿಶಾಸ್ತ್ರಿ ಅವರ ಅಧಿಕಾರ ಅವಧಿ ಐಸಿಸಿ ವಿಶ್ವ ಟ್ವೆಂಟಿ20 ನಂತರ ಮುಕ್ತಾಯವಾಗಿದೆ. ದ್ರಾವಿಡ್ ಅವರ ಹೆಸರು ಮುಖ್ಯ ಕೋಚ್ ಸ್ಥಾನಕ್ಕಾಗಿ ಕೇಳಿ ಬಂದಿದೆ. [ಟೀಂ ಇಂಡಿಯಾಕ್ಕೆ ಇನ್ನು ಮುಂದೆ 'ಗೋಡೆ' ಕಾವಲು?]

ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ದ್ರಾವಿಡ್ ಅವರು, ಒಮ್ಮೆ ಕಾಲಕ್ಕೆ ಎರಡು ಹುದ್ದೆ ನಿಭಾಯಿಸುವುದು ಕಷ್ಟ. ಟೀಂ ಇಂಡಿಯಾ ಕೋಚ್ ಆಗಲು ಸೂಕ್ತ ಸಮಯ ಹಾಗೂ ಸಾಮರ್ಥ್ಯದ ಅಗತ್ಯವಿದೆ ಎಂದಿದ್ದಾರೆ.[ಡೆಲ್ಲಿ ತಂಡಕ್ಕೆ ಸಲಹೆಗಾರರಾಗಿ ರಾಹುಲ್ ದ್ರಾವಿಡ್ ಆಯ್ಕೆ ]

What did Rahul Dravid say about coaching Team India?

43ವರ್ಷ ವಯಸ್ಸಿನ ದ್ರಾವಿಡ್ ಅವರು ಭಾರತ 'ಎ' ಹಾಗೂ ಅಂಡರ್ 19 ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದು, ಜೊತೆಗೆ ಡೆಲ್ಲಿ ಡೇರ್ ಡೆವಿಲ್ಸ್ ನ ಮಾರ್ಗದರ್ಶಿಯಾಗಿದ್ದಾರೆ.[ಭ್ರ‌ಷ್ಟಾಚಾರ ವಿರೋಧಿ ಮೇಲ್ವಿಚಾರಣೆ ಗುಂಪಿಗೆ ದ್ರಾವಿಡ್ ]

ಪ್ರತಿದಿನ ಕಲಿಕೆ: ಕೋಚಿಂಗ್ ಎಂಬುದು ಪ್ರತಿದಿನದ ಕಲಿಕೆಯ ವಿಷಯವಾಗಿರಬೇಕು. ಅದಕ್ಕಾಗಿ ಹೆಚ್ಚಿನ ಸಮಯ ವ್ಯಯಿಸಬೇಕು. ನಾನು ನನ್ನ ವೃತ್ತಿ ಬದುಕಿನಲ್ಲಿ ಉತ್ತಮ ಬ್ಯಾಟ್ಸ್ ಮನ್ ಆಗಬೇಕು ಎಂದು ನಿರ್ಧರಿಸಿದ ಮೇಲೆ ನನ್ನ ಎಲ್ಲಾ ಸಮಯ ಅದಕ್ಕಾಗಿ ಮೀಸಲಿರಿಸಿದೆ. ಈ ರೀತಿ ನಿರ್ದಿಷ್ಟ ಗುರಿ ಇದ್ದರೆ ಮಾತ್ರ ಯಶಸ್ಸು ಸಾಧ್ಯ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕೋಚ್ ಆಗಲು ಸಮರ್ಥರಿರಬೇಕು: ಅಟಗಾರ, ನಾಯಕನಾಗಿ ಪಂದ್ಯವನ್ನು ನೋಡುವುದೇ ಬೇರೆ. ಕೋಚ್ ಆಗಿ ಕಾರ್ಯನಿರ್ವಹಿಸುವ ರೀತಿಯೇ ಬೇರೆ. ನನಗೆ ಕೋಚ್ ಆಗಿ ಇನ್ನೂ ಹೆಚ್ಚಿನ ಜ್ಞಾನ ಪಡೆಯಬೇಕಿದೆ ಎಂದು ನಮ್ರವಾಗಿ ದ್ರಾವಿಡ್ ಹೇಳಿದ್ದಾರೆ.

ಜ್ಯೂನಿಯರ್ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಅಂಡರ್ 19 ತಂಡ ಸೋತಿದ್ದರ ಬಗ್ಗೆ ಪ್ರಸ್ತಾಪಿಸಿದ ದ್ರಾವಿಡ್, 46 ಓವರ್ ಗಳ ಕಾಲ ಫಾಸ್ಟ್ ಬೌಲರ್ ಗಳನ್ನು ಎದುರಿಸುವ ಸಾಮರ್ಥ್ಯ ಇಲ್ಲದಂಥ ತಂಡವೇನು ನಾವು ಹೊಂದಿರಲಿಲ್ಲ. ಉಪ ಖಂಡದ ಪಿಚ್ ಗಳಲ್ಲಿ ಸ್ಪಿನ್ ಸ್ನೇಹಿ ವಾತಾವರಣ ನಿರೀಕ್ಷೆ ಇಟ್ಟುಕೊಂಡು ಕಣಕ್ಕಿಳಿದಿದ್ದು ಕೈ ಕೊಟ್ಟಿತು. ವೇಗದ ಬೌಲಿಂಗ್ ಮೂಲಕ ಕಟ್ಟಿ ಹಾಕಿಬಿಟರು ಎಂದು ದ್ರಾವಿಡ್ ಹೇಳಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former captain Rahul Dravid today (April 6) made it clear that any decision on taking up coach's role with the senior Indian team will depend on whether he has the time and "bandwidth" for the high-profile job.
Please Wait while comments are loading...