ಎಂಎಸ್ ಧೋನಿ ನಿವೃತ್ತಿ ಬಗ್ಗೆ ಹೇಳಿದ್ದಾದರೂ ಏನು?

Posted By:
Subscribe to Oneindia Kannada

ಮುಂಬೈ, ಜ.05: ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ಧವಾಗುತ್ತಿರುವ ನಾಯಕ ಎಂಎಸ್ ಧೋನಿ ಅವರು ಮೈಕ್ ಹಿಡಿದು ಸುದ್ದಿಗೋಷ್ಠಿಯಲ್ಲಿ ಕುಳಿತರೆ ಸಾಕು ಯಾರಾದರೂ ಒಬ್ಬರು ನಿವೃತ್ತಿ ಬಗ್ಗೆ ಪ್ರಶ್ನಿಸುತ್ತಾರೆ. ಪ್ರಶ್ನೆ ಎದುರಿಸುವ ಮುನ್ನವೇ ಈ ಬಗ್ಗೆ ಮಾತಾಡಿದ ಧೋನಿ ಅವರು 'ಸರಿಯಾದ ಸಮಯ' ತಕ್ಕ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

34 ವರ್ಷ ವಯಸ್ಸಿನ ಭಾರತದ ಅತ್ಯಂತ ಯಶಸ್ವಿ ನಾಯಕ ಧೋನಿ ಅವರು ನಿವೃತ್ತಿ ಬಗೆಗಿನ ಪ್ರಶ್ನೆಯನ್ನು ಕಳೆದ ವರ್ಷದಿಂದ ಎದುರಿಸುತ್ತಲೇ ಇದ್ದಾರೆ. ಐಸಿಸಿ ವಿಶ್ವಕಪ್ ಆದ ಮೇಲಂತೂ ಈ ಬಗ್ಗೆ ಕುತೂಹಲ ಹೆಚ್ಚಾಗಿದೆ.

What did MS Dhoni say about his retirement?

ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲಿ ವಿರಾಟ್ ಕೊಹ್ಲಿ ಅವರೇ ನಾಯಕರಾಗಿರಲಿ ಎಂಬ ಕೂಗು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಧೋನಿ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಧೋನಿ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲಾ ಸಂಗತಿಗಳನ್ನು ಗಮನಿಸಿದರೆ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟಿ20 ಟೂರ್ನಿನ ನಂತರ ಧೋನಿ ಅವರು ನಿವೃತ್ತರಾಗುವ ಸಾಧ್ಯತೆಗಳಿವೆ ಎಂಬ ಸುದ್ದಿ ಬಂದಿದೆ.

'ನಾನು ಈ ಕ್ಷಣದ ಬಗ್ಗೆ ಮಾತ್ರ ಯೋಚಿಸುತ್ತೇನೆ. ಸದ್ಯದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು, ಆದಷ್ಟು ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದು ನನ್ನ ಗುರಿ. ವಿಶ್ವ ಟಿ20 ಚಾಂಪಿಯನ್ ಶಿಪ್ ಗುರಿಯಾಗಿಸಿಕೊಂಡು ತಯಾರಿ ನಡೆಸಬೇಕಿದೆ. ನಾನು ಸರಿಯಾದ ಸಮಯಕ್ಕೆ ನಿವೃತ್ತಿ ಹೊಂದುತ್ತೇನೆ' ಎಂದು ಧೋನಿ ಹೇಳಿದ್ದಾರೆ (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's limited overs captain Mahendra Singh Dhoni today said he will think about quitting the game at the "right time".
Please Wait while comments are loading...