ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ, ರಿಷಬ್ ಹೊಸಮುಖ

Posted By:
Subscribe to Oneindia Kannada

ಮುಂಬೈ, ಜೂನ್ : ಜೂನ್ 18 ರಂದು ಇಂಗ್ಲೆಂಡಿನಲ್ಲಿ ಚಾಂಪಿಯನ್ಸ್ ಟ್ರೋಫಿ ಮುಗಿಸಿದ ಬಳಿಕ ಟೀಂ ಇಂಡಿಯಾ, ಕೆರಿಬಿಯನ್ ಪ್ರವಾಸಕ್ಕೆ ಸಿದ್ಧವಾಗಲಿದೆ. ವಿಂಡೀಸ್ ಪ್ರವಾಸಕ್ಕೆ 15 ಮಂದಿ ಸದಸ್ಯರ ಟೀಂ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದ್ದು,ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ತ್ ಹೊಸ ಮುಖವಾಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಹೋಲಿಸಿದರೆ ರೋಹಿತ್ ಶರ್ಮ ಹಾಗೂ ಜಸ್ ಪ್ರೀತ್ ಬೂಮ್ರಾ ಅವರು ವಿಂಡೀಸ್ ಪ್ರವಾಸಕ್ಕೆ ಆಯ್ಕೆಯಾಗಿಲ್ಲ.

 India cricket team announced for West Indies tour

ವೆಸ್ಟ್ ಇಂಡೀಸ್ ನಲ್ಲಿ ಕೊಹ್ಲಿ ಪಡೆ ಏಕದಿನ ಹಾಗೂ ಟಿ20 ಸರಣಿ ಆಡಲಿದೆ. ಜೂನ್ 23ರಿಂದ ಜುಲೈ 9ರ ತನಕ ಟೀಂ ಇಂಡಿಯಾವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ(ಮೇ 16) ಪ್ರಕಟಿಸಿದೆ.

ಐದು ಏಕದಿನ ಪಂದ್ಯಗಳ ಸರಣಿ ಹಾಗೂ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಉಭಯ ತಂಡಗಳು ಆಡಲಿವೆ. ಮೊದಲ ಏಕದಿನ ಪಂದ್ಯ ಜೂನ್ 23ರಂದು ನಡೆಯಲಿದೆ.ಟೆನ್ ಸ್ಫೋರ್ಟ್ಸ್, ಟೆನ್ 1ನಲ್ಲಿ ಪಂದ್ಯಗಳ ನೇರ ಪ್ರಸಾರ ನೋಡಬಹುದು.

ತಂಡ ಇಂತಿದೆ:ವಿರಾಟ್ ಕೊಹ್ಲಿ, ಶಿಖರ್ ಧವನ್, ರಿಷಬ್ ಪಂತ್, ಅಜಿಂಕ್ಯ ರಹಾನೆ, ಎಂಎಸ್ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್ ಹಾಗೂ ದಿನೇಶ್ ಕಾರ್ತಿಕ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Board of Control for Cricket in India (BCCI) today (June 15) announced a 15-man squad for the limited overs tour to the West Indies.
Please Wait while comments are loading...