ಮೈದಾನದಲ್ಲೇ ಮಂಡಳಿಯನ್ನು ಝಾಡಿಸಿದ ವೆಸ್ಟ್ ಇಂಡೀಸ್ ನಾಯಕ

Posted By:
Subscribe to Oneindia Kannada

2016ರಲ್ಲಿ ನಡೆದ ಚುಟುಕು ಕ್ರಿಕೆಟಿನ ಎರಡು ವಿಶ್ವಕಪ್ ಪ್ರಶಸ್ತಿ (ಪುರುಷ, ಮಹಿಳೆ) ಮತ್ತು ಅಂಡರ್ 19 ಏಕದಿನ ಪ್ರಶಸ್ತಿ ಬಾಚಿಕೊಂಡಿರುವ ವೆಸ್ಟ್ ಇಂಡೀಸ್ ತಂಡದ ಸಾಧನೆ, ಎಪ್ಪತ್ತು ಎಂಬತ್ತರ ದಶಕದ ಕ್ಲೈವ್ ಲಾಯ್ಡ್, ವಿವಿಎನ್ ರಿಚರ್ಡ್ಸ್ ಗತಕಾಲವನ್ನು ನೆನಪಿಸುವಂತಿದೆ.

ಕೊನೆಯ ಓವರ್ ನಲ್ಲಿ ಟ್ರೋಫಿ ಗೆಲ್ಲಲು ಬೇಕಾಗಿದ್ದ 19 ರನ್ ಅನ್ನು ನಾಲ್ಕೇ ಬಾಲಿನಲ್ಲಿ ಆಪೋಸನ ತೆಗೆದುಕೊಂಡ ವೆಸ್ಟ್ ಇಂಡೀಸ್ ತಂಡದ ಮಹತ್ತರ ಸಾಧನೆಯ ಹಿಂದೆ ಅದೆಷ್ಟು ನೋವಿನ ಅಂಶ ಅಡಗಿದೆಯೋ?

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವಣ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ಸಂಭಾವನೆ, ಇತರ ಭತ್ಯೆಗಳ ವಿಚಾರದಲ್ಲಿ ತಿಕ್ಕಾಟ ತಾರಕಕ್ಕೇರಿದ್ದಾಗ, ಪ್ರಮುಖ ಆಟಗಾರರನ್ನೇ ತಂಡದಿಂದ ಕೈಬಿಟ್ಟು ಬೇರೆ ತಂಡವನ್ನು ಆಯ್ಕೆ ಮಾಡಿದ ಉದಾಹರಣೆಗಳಿವೆ.

ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾದ ಹಾಗೇ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸಂಪದ್ಬರಿತ ಬೋರ್ಡ್ ಅಲ್ಲ. ಆದರೆ, ಮಂಡಳಿಯಲ್ಲಿನ ಭ್ರಷ್ಟಾಚಾರ, ಪದಾಧಿಕಾರಿಗಳ ದುಂದುವೆಚ್ಚದಿಂದಾಗಿ, ಆಟಗಾರರಿಗೆ ಸಿಗಬೇಕಾಗಿರುವ ಸಂಭಾವನೆಯಲ್ಲಿ ಕಡಿತವಾಗುತ್ತಿರುವುದು ಆಟಗಾರರ ನೋವಿಗೆ ಕಾರಣ.

ಭಾನುವಾರ (ಏ 3) ಮುಕ್ತಾಯಗೊಂಡ ಟಿ20 ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಭಾಗವಹಿಸುವ ವಿಚಾರದಲ್ಲಿ ಕೊನೇ ಕ್ಷಣದವರೆಗೂ ಅನಿಶ್ಚಿತತೆ ಎದ್ದಿತ್ತು. ಕೊನೆಗೆ, ಪ್ರಮುಖ ಆಟಗಾರರು ತಂಡದ ಹಿತದೃಷ್ಟಿಯಿಂದ ಭಾರತಕ್ಕೆ ಪ್ರಯಾಣಿಸಲು ಒಪ್ಪಿಗೆ ಸೂಚಿಸಿದ್ದರು. (ವಾರ್ನ್ ಗೆ ಸ್ಯಾಮುಯಲ್ಸ್ ತಿರುಗೇಟು)

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ, ಭರ್ತಿಯಾಗಿ ಕೂತಿದ್ದ ಪ್ರೇಕ್ಷಕರ ಮುಂದೆಯೇ, ವೆಸ್ಟ್ ಇಂಡೀಸ್ ತಂಡದ ನಾಯಕ ಡರೆನ್ ಸಮಿ, ತಂಡದ ಆಟಗಾರರ ನೋವು ಮತ್ತು ಮಂಡಳಿಯ ವಿರುದ್ದ ಹರಿಹಾಯ್ದರು. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ನೋವು, ಅವಮಾನ

ನೋವು, ಅವಮಾನ

ಭಾರತ ಪ್ರವಾಸಕ್ಕೆ ತೆರಳುವ ಮುನ್ನ ಮತ್ತು ಟೂರ್ನಿ ಆರಂಭವಾದ ಮೇಲೂ ನಾವು ಸಾಕಷ್ಟು ನೋವು, ಅವಮಾನವನ್ನು ಎದುರಿಸಿದೆವು. ಟ್ರೋಫಿ ಗೆಲ್ಲುವ ಮೂಲಕ ನಮ್ಮನ್ನು ಹೀಯಾಳಿಸಿದವರಿಗೆ ಅತ್ಯುತ್ತಮವಾಗಿ ಪ್ರತಿಕ್ರಿಯಿಸಿದ್ದೇವೆ ಎಂದು ಕಪ್ ಗೆದ್ದ ಸಂಭ್ರಮದ ನಡುವೆಯೂ ಸಮಿ, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಬುದ್ದಿಹೀನ ಕ್ರಿಕೆಟಿಗರು

ಬುದ್ದಿಹೀನ ಕ್ರಿಕೆಟಿಗರು

ಇಂಗ್ಲೆಂಡಿನ ಹಿರಿಯ ವೀಕ್ಷಕ ವಿವರಣೆಗಾರ ಮಾರ್ಕ್ ನಿಕೋಲಸ್ ನಮ್ಮನ್ನು ಬುದ್ದಿಹೀನ ಕ್ರಿಕೆಟಿಗರು ಎಂದು ಹೀಯಾಳಿಸಿದ್ದರು. ಅವರು ಹಿರಿಯರು, ಅವರ ಬಗ್ಗೆ ನಮಗೆ ಸಾಕಷ್ಟು ಗೌರವವಿದೆ. ಬುದ್ದಿಹೀನ ಕ್ರಿಕೆಟಿಗರು ಇಂದು ವಿಶ್ವ ಚಾಂಪಿಯನ್ನರಾಗಿ ಹೊರಹೊಮ್ಮಿದ್ದೇವೆ ಎಂದು ಡರೆನ್ ಸಮಿ ಪ್ರತ್ಯುತ್ತರ ನೀಡಿದ್ದಾರೆ.

ಜರ್ಸಿ ಇರಲಿಲ್ಲ

ಜರ್ಸಿ ಇರಲಿಲ್ಲ

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಿಂದ ನಮಗೆ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ನಮ್ಮ ದೇಶದ ಪ್ರಧಾನಿ ಆಲ್ ದಿ ಬೆಸ್ಟ್ ಈಮೇಲ್ ಸಂದೇಶ ಕಳುಹಿಸಿದ್ದರು, ಮಂಡಳಿಯಿಂದ ತಂಡಕ್ಕೆ ಸ್ಪೂರ್ತಿ ನೀಡುವ ಯಾವುದೇ ಸಂದೇಶ ಬಂದಿರಲಿಲ್ಲ. ನಾವು ಭಾರತ ಪ್ರವಾಸಕ್ಕೆ ತೆರಳಿದಾಗ ನಮಗೆ ಜರ್ಸಿಯೂ ಇರಲಿಲ್ಲ - ಡರೆನ್ ಸಮಿ.

ಮತ್ತೆ ಯಾವಾಗ ಜರ್ಸಿ ಧರಿಸುತ್ತೇನೋ

ಮತ್ತೆ ಯಾವಾಗ ಜರ್ಸಿ ಧರಿಸುತ್ತೇನೋ

ವಿಶ್ವಕಪ್ ಮುಗಿದಿದೆ, ಈ ವರ್ಷದಲ್ಲಿ ಇದುವರೆಗೆ ಯಾವುದೇ ಟಿ20 ವೇಳಾಪಟ್ಟಿ ಅಂತಿಮವಾಗಿಲ್ಲ. ನಮ್ಮ ಮತ್ತು ಮಂಡಳಿಯ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಗೆದ್ದ ಈ ತಂಡದೊಂದಿಗೆ ಯಾವಾಗ ಮತ್ತೆ ಕಣಕ್ಕಿಳಿಯುತ್ತೇನೆ ಅನ್ನುವುದು ಗೊತ್ತಿಲ್ಲ. ಯಾವಾಗ ಮತ್ತೆ ಟಿ20 ಆಡುತ್ತೇವೆಯೋ ಅದೂ ತಿಳಿದಿಲ್ಲ - ವೆಸ್ಟ್ ಇಂಡೀಸ್ ತಂಡದ ನಾಯಕ ಸಮಿ.

ಎಲ್ಲರೂ ಮ್ಯಾಚ್ ವಿನ್ನರ್ಸ್

ಎಲ್ಲರೂ ಮ್ಯಾಚ್ ವಿನ್ನರ್ಸ್

ನಮ್ಮ ತಂಡದಲ್ಲಿ ಇರುವವರೆಲ್ಲಾ ಮ್ಯಾಚ್ ವಿನ್ನರ್ಸ್ ಗಳು. ಈ ಎಲ್ಲಾ ಆಟಗಾರರನ್ನು ಮತ್ತೆ ಯಾವಾಗ ನಾನು ಡ್ರೆಸ್ಸಿಂಗ್ ರೂಂನಲ್ಲಿ ನೋಡುತ್ತೇನೋ ಗೊತ್ತಿಲ್ಲ. ಮುಂದಿನ ಸರಣಿಗೆ ನಾನು ಆಯ್ಕೆಯಾಗುತ್ತೇನೋ ಅನ್ನುವುದು ಖಾತ್ರಿಯಿಲ್ಲ - ಡರೆನ್ ಸಮಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
West Indies skipper Darren Sammy said, his players have responded in the best way possible to the "disrespect" shown to them by the critics and West Indies Cricket Board (WICB)
Please Wait while comments are loading...