ಭಾರತ ವಿರುದ್ಧ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ

Posted By:
Subscribe to Oneindia Kannada

ಸೈಂಟ್ ಜಾನ್ಸ್ (ಆಂಟಿಗುವಾ), ಜುಲೈ 12: ಪ್ರವಾಸಿ ಭಾರತ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ವೆಸ್ಟ್ ಇಂಡೀಸ್ ತಂಡದ 12 ಜನ ಸದಸ್ಯರ ಪ್ರಕಟಿಸಲಾಗಿದ್ದು, ಹಿರಿಯ ವಿಕೆಟ್ ಕೀಪರ್ ದಿನೇಶ್ ರಾಮ್ದಿನ್ ರನ್ನು ಕೈಬಿಡಲಾಗಿದ್ದು, ರೋಸ್ಟೊನ್ ಚೇಸ್ ತಂಡ ಸೇರಿದ್ದಾರೆ.

ಜುಲೈ 21ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಂಗಳವಾರ ಪ್ರಕಟಿಸಿದ ತಂಡಕ್ಕೆ ಆಲ್ ರೌಂಡರ್ ಜಾಸನ್ ಹೋಲ್ಡರ್ ನಾಯಕರಾಗಿದ್ದರೆ, ಕ್ರೆಗ್ ಬ್ರಥ್ ವೈಟ್ ಅವರು ಉಪ ನಾಯಕರಾಗಿದ್ದಾರೆ. 24 ವರ್ಷ ವಯಸ್ಸಿನ ಶಾನ್ ಡ್ರೊವಿಚ್ ಅವರು ದಿನೇಶ್ ಅವರ ಸ್ಥಾನ ತುಂಬಲಿದ್ದಾರೆ.

ಆದರೆ, 22ರ ಹರೆಯದ ಯುವ ಆಟಗಾರ ರೋಸ್ಟೊನ್ ಚೇಸ್ ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದ್ದು, ಇದು ಅವರ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್​ನ ಅನುಭವವಾಗಲಿದೆ. ರೋಸ್ಟೊನ್ ಅವರು ದೇಶಿ ಪಂದ್ಯದಲ್ಲಿ 59.16ರ ಸರಾಸರಿಯಲ್ಲಿ 716 ರನ್ ಗಳಿಸುವ ಮೂಲಕ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಬೌಲಿಂಗ್​ನಲ್ಲೂ ಮಿಂಚಿ 23 ವಿಕೆಟ್ ಗಳಿಸಿದ್ದಾರೆ.

WI squad for India Tests announced Roston in Ramdin out

30 ವರ್ಷ ವಯಸ್ಸಿನ ದೇವೇಂದ್ರ ಬಿಶೂ ಅವರು ತಂಡದಲ್ಲಿರುವ ಏಕೈಕ ಲೆಗ್ ಸ್ಪಿನ್ನರ್ ಆಗಿದ್ದಾರೆ. 15 ಟೆಸ್ಟ್ ಪಂದ್ಯಗಳಿಂದ 55 ವಿಕೆಟ್ ಪಡೆದಿರುವ ಬಿಶೂಗೆ ಶಾನನ್ ಗ್ಯಾಬ್ರಿಯಲ್ ಅವರ ನೇತೃತ್ವ ವೇಗದ ಪಡೆ ಸಾಥ್ ನೀಡಲಿದೆ.

ವೆಸ್ಟ್ ಇಂಡೀಸ್ ತಂಡ: ಜಾಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಥ್​ ವೈಟ್, ದೇವೇಂದ್ರ ಬಿಶು, ಜಮೈನ್ ಬ್ಲ್ಯಾಕ್ ವುಡ್, ಕಾರ್ಲೊಸ್ಸ್ ಬ್ರಾಥ್ ವೈಟ್, ಡರೇನ್ ಬ್ರಾವೊ, ರಾಜೇಂದ್ರ ಚಂದ್ರಿಕ, ರೋಸ್ಟೊನ್ ಚೇಸ್, ಶೇನ್ ಡೊವ್ರಿಚ್(ವಿಕೆಟ್ ಕೀಪರ್), ಶಾನ್ ಗ್ಯಾಬ್ರಿಯನ್, ಲಿಯಾನ್ ಜಾನ್​ಸನ್ ಹಾಗೂ ಮರ್ಲಾನ್ ಸ್ಯಾಮುಯಲ್ಸ್.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ಅಮಿತ್ ಮಿಶ್ರಾ, ರವೀಂದ್ರ ಜಡೇಜ, ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಸ್ಟುವರ್ಟ್ ಬಿನ್ನಿ.

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
West Indies have announced a 12-man squad to face India in the four-Test series starting in Antigua on July 21. Veteran wicketkeeper Denesh Ramdin has beeen dropped while uncapped batsman Roston Chase is picked.
Please Wait while comments are loading...