ಕ್ರಿಕೆಟರ್ 'ಡಿಜೆ' ಬ್ರಾವೊ ಈಗ ಬಾಲಿವುಡ್ಡಿನ ಹೊಸ ಸಿಂಗರ್!

Posted By:
Subscribe to Oneindia Kannada

ಮುಂಬೈ, ಆಗಸ್ಟ್ 26: ವೆಸ್ಟ್ ಇಂಡೀಸ್ ಕ್ರಿಕೆಟಿಗ ಡಿಜೆ ಡ್ವಾಯ್ನ್ ಬ್ರಾವೊ ಅವರು ಬಾಲಿವುಡ್ಡಿನ ಹೊಸ ಗಾಯಕರಾಗಿ ಎಂಟ್ರಿ ಕೊಡುತ್ತಿದ್ದಾರೆ. 'ತುಮ್ ಬಿನ್-2' ಚಿತ್ರಕ್ಕಾಗಿ ಕಂಠದಾನ ಮಾಡುತ್ತಿದ್ದಾರೆ. ಈಗಾಗಲೇ ಡಿಜೆ ಬ್ರಾವೊ 'ಚಾಂಪಿಯನ್ ಡ್ಯಾನ್ಸ್' ಭಾರತದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದೆ.

ಅನುಭವ್ ಸಿನ್ಹಾ ನಿರ್ದೇಶನದ ಈ ಚಿತ್ರದಲ್ಲಿ ಗಾಯಕರಾಗಲು ಡ್ವಾಯ್ನ್ ಬ್ರಾವೊ ಸಿದ್ಧರಾಗುತ್ತಿದ್ದಾರೆ. ಈ ಮೊದಲು ಶಾರುಖ್ ಅಭಿನಯದ 2011ರಲ್ಲಿ ತೆರೆ ಕಂಡ 'ರಾ-ಒನ್' ಚಿತ್ರದ ಚಮಕ್ ಚಲ್ಲೋ ಹಾಡಿಗಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಪಾಪ್ ಸಿಂಗರ್ ಅಕೊನ್​ ರನ್ನು ಕರೆತಂದಿದ್ದ ಅನುಭವ್ ಸಿನ್ಹಾ ಈಗ ಕ್ರಿಕೆಟರ್ ಬ್ರಾವೊರನ್ನು ಕರೆಸುತ್ತಿದ್ದಾರೆ.

West Indies cricketer Dwayne Bravo turns Bollywood singer for Tum Bin 2

'ಜಗೆರ್ ಬಾಂಬ್' ಎಂಬ ಹಾಡನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ರೊಮಾನಿಯದ ನೈಟ್ ಕ್ಲಬ್​ನಲ್ಲಿ ತಂಡವು ಚಿತ್ರೀಕರಿಸಲಿದೆ.

ಬ್ರಾವೊ ಜತೆ ಅಂಕಿತ್ ತಿವಾರಿ ಕೂಡ ಹಾಡಲಿದ್ದು ಸಿನ್ಹಾ ನಿರ್ದೇಶಿಸಲಿದ್ದಾರೆ. ಫಾಸ್ಟ್ ಪೆಪ್ಪಿ ಟ್ರ್ಯಾಕ್ ಹಾಡನ್ನು ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಹಾಡಲಿದ್ದಾರೆ.

2001 ರ ತುಮ್ ಬಿನ್ ಎಂಬ ಹಿಟ್ ಚಿತ್ರದ ಮುಂದುವರೆದ ಅವತರಣಿಕೆಯಾಗಿರುವ ಚಿತ್ರದಲ್ಲಿ ನೇಹಾ ಶರ್ಮಾ, ಆಶಿಮ್ ಗುಲಾಟಿ ಮತ್ತು ಆದಿತ್ಯ ಸೀಲ್ ನಟಿಸಲಿದ್ದಾರೆ. ಚಿತ್ರ ನವಂಬರ್ ತಿಂಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಬ್ರಾವೊ ಕೂಡಾ ಚಿತ್ರದ ಪ್ರಚಾರ ಗೀತೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
West Indies cricketer and singer Dwayne Bravo will lend his voice to a song - Jager Bomb - in director Anubhav Sinha’s upcoming film Tum Bin 2.
Please Wait while comments are loading...