ವೇಗಿ ಪಾರ್ನೆಲ್ ಅಲಿಯಾಸ್ ವಲೀದ್ ಗೆ ಶಾದಿ ಮುಬಾರಕ್!

Posted By:
Subscribe to Oneindia Kannada

ಕೇಪ್ ಟೌನ್, ಮೇ 23: ದಕ್ಷಿಣ ಆಫ್ರಿಕಾದ ವೇಗಿ ವೇಯ್ನ್ ಪಾರ್ನೆಲ್ ಅವರು ಕೇಪ್ ಟೌನ್ ನ ಮಸೀದಿಯೊಂದರಲ್ಲಿ ಗೆಳತಿ ಆಯೀಷಾ ಅವರನ್ನು ಮದುವೆಯಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಪುಣೆ ವಾರಿಯರ್ಸ್ ಪರ ಆಡಿದ್ದರು.

2010 ಹಾಗೂ 2014ರ ಸೀಸನ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಪಾರ್ನೆಲ್ ಬೌಲ್ ಮಾಡಿದ್ದರು. 2016ರ ಹರಾಜಿನಲ್ಲಿ ಪಾರ್ನೆಲ್ ಸೇಲ್ ಆಗಿರಲಿಲ್ಲ. ಆದರೆ, ಟಿ20 ಪಂದ್ಯದಲ್ಲಿ ಆಡುವ ಕಲೆಯನ್ನು ಐಪಿಎಲ್ ಹೇಳಿಕೊಟ್ಟಿದೆ ಎಂಬುದನ್ನು ಪಾರ್ನೆಲ್ ಅನೇಕ ಬಾರಿ ಹೇಳಿದ್ದಾರೆ.

ಫ್ಯಾಷನ್ ಬ್ಲಾಗರ್ ಆಗಿರುವ ಆಯೀಷಾ ಬಕೆರ್ ಅವರ ಜೊತೆ ಪಾರ್ನೆಲ್ ಅವರು ಇಸ್ಲಾಂ ಧರ್ಮಕ್ಕೆ ಅನುಗುಣವಾದ ಧಾರ್ಮಿಕ ಪದ್ಧತಿಯಂತೆ ವರಿಸಿದ್ದಾರೆ. ಪಾರ್ನೆಲ್ ಮದುವೆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿ ಸೇರಿದಂತೆ ಅನೇಕ ಮಂದಿ ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ್ದಾರೆ. ಪಾರ್ನೆಲ್ ಹಾಗೂ ಆಯೀಷಾ (Aisha Baker) ಮದುವೆ ಕುರಿತಂತೆ ಬಂದಿರುವ ಟ್ವೀಟ್ಸ್ ಇಲ್ಲಿದೆ ನೋಡಿ...

ವೇಗಿ ಪಾರ್ನೆಲ್ ಅಲಿಯಾಸ್ ವಲೀದ್ ಗೆ ಶಾದಿ ಮುಬಾರಕ್!

ವೇಗಿ ಪಾರ್ನೆಲ್ ಅಲಿಯಾಸ್ ವಲೀದ್ ಗೆ ಶಾದಿ ಮುಬಾರಕ್!

26 ವರ್ಷ ವಯಸ್ಸಿನ ಪಾರ್ನೆಲ್ ಅವರು 2011ರಲ್ಲೇ ಇಸ್ಲಾಮಿಗೆ ಮತಾಂತರಗೊಂಡಿದ್ದರು. ಮತಾಂತರಗೊಂಡ ಬಳಿಕ ಅವರ ಹೆಸರನ್ನು ವಲೀದ್ ಎಂದು ಬದಲಾಯಿಸಲಾಗಿತ್ತು.

ಝೀನತುಲ್ ಇಸ್ಲಾಂ ಮಸೀದಿಯಲ್ಲಿ

ಕೇಪ್ ಟೌನ್ನಿನ ಝೀನತುಲ್ ಇಸ್ಲಾಂ ಮಸೀದಿಯಲ್ಲಿ ಸುಮಾರು 400ಕ್ಕೂ ಅಧಿಕ ಅತಿಥಿಗಳ ಸಮ್ಮುಖದಲ್ಲಿ ಶಾದಿ ಮಹೋತ್ಸವ ನೆರವೇರಿದೆ.

ಇಸ್ಲಾಂ ಧರ್ಮದಲ್ಲಿ ಶಾಂತಿ ಅರಸಿದ್ದರು

2009ರಲ್ಲಿ 20ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾ ತಂಡ ಸೇರಿದ ಪಾರ್ನೆಲ್ ಅವರು ವೃತ್ತಿ ಬದುಕಿನಲ್ಲಿ ಏರಿಳಿತ ಕಂಡಿದ್ದಾರೆ. ಪೋರ್ಟ್ ಏಲಿಜಬೆತ್ ನ ನೈಟ್ ಕ್ಲಬ್ ರಾದ್ಧಾಂತದ ನಂತರ ಮನನೊಂದಿದ್ದ ಪಾರ್ನೆಲ್ ಅವರು ಇಸ್ಲಾಂ ಧರ್ಮದಲ್ಲಿ ಶಾಂತಿ ಅರಸಿದ್ದರು.

ಮತ್ತೆ ಮದ್ಯ ಸೇವನೆ ಮಾಡಿಲ್ಲವಂತೆ

2011ರಲ್ಲಿ ಐಪಿಎಲ್ ಸಂದರ್ಭದಲ್ಲಿ ಆಲ್ಕೋಹಾಲ್ ಸೇವಿಸಿದ್ದ ಪಾರ್ನೆಲ್ ಮತ್ತೆ ಮದ್ಯ ಸೇವನೆ ಮಾಡಿಲ್ಲವಂತೆ.

ಮದುವೆಯಾದ ಮೂರು ದಿನಕ್ಕೆ ತಂಡಕ್ಕೆ ಸೇರ್ಪಡೆ

ಈಗ ಮದುವೆಯಾದರೂ ಮುರ್ನಾಲ್ಕು ದಿನಗಳ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಸೇರಿಕೊಳ್ಳಲಿದ್ದಾರೆ.

ತಂಡದ ಪ್ರಮುಖ ವೇಗಿಯಾಗಿದ್ದಾರೆ

ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ತಂಡದ ಪ್ರಮುಖ ವೇಗಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South African cricketer Wayne Parnell married Fashion blogger Aisha Baker at a mosque in Cape Town, South Africa.Here are the pictures from the day have been doing the rounds on the social media.
Please Wait while comments are loading...