ವಿಡಿಯೋ: ಭಾರತೀಯ ಸೇನೆಗೆ ವಿರಾಟ್ ಕೊಹ್ಲಿ ದೀಪಾವಳಿ ಶುಭಾಶಯ!

Written By: Ramesh
Subscribe to Oneindia Kannada

ನವದೆಹಲಿ, ಅಕ್ಟೋಬರ್. 28 : ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತ ವೀರ ಯೋಧರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ವಿಡಿಯೋ ಮೂಲಕ ಭಾರತ ಸೈನಿಕರಿಗೆ ದೀಪಾವಳಿ ಶುಭಾಶಯ ಹೇಳಿರುವ ಕೊಹ್ಲಿ, ಸೈನಿಕರ ಕೆಲಸ ಶ್ಲಾಘನೀಯ ಸೈನಿಕರು ಎಲ್ಲೆ ಕಂಡರು ಅವರಿಗೆ ಸೆಲ್ಯೂಟ್​ ಮಾಡುವ ಮೂಲಕ ಗೌರವಿಸಬೇಕು. ಜೈಹಿಂದ್ #Sandesh2Soldiers ಎಂದು ಟ್ವೀಟ್ ಮಾಡಿದ್ದಾರೆ. [ರನ್ ಚೇಸ್ : ಸಚಿನ್ ದಾಖಲೆ ಸಮಕ್ಕೆ ನಿಂತ ಕೊಹ್ಲಿ]

Watch: Virat Kohli's heart melting message for soldiers on Diwali

ನನ್ನ ಸಹೋದರರೇ, ನಿಮ್ಮ ಮೇಲೆ ನನಗೆ ಭರವಸೆ ಇದೆ. ಅಲ್ಲದೆ ಇಡೀ ದೇಶವೇ ನಿಮ್ಮ ಜೊತೆ ಇದೆ. ಅದರಂತೆ ಯೋಧರು ಎಲ್ಲೆ ಕಂಡರೂ ಅವರಿಗೆ ಸೆಲ್ಯೂಟ್‌ ಮಾಡಿ.

ನಾವು ಮಾಡುವ ಹಬ್ಬಗಳ ಆಚರಣೆ ಶಾಂತಿಯುತವಾಗಿ ನೆರವೇರಿಸಲು, ಶಾಂತಿಯುತವಾಗಿ ಜೀವಿಸಲು ಯೋಧರೇ ಕಾರಣ ಎಂದಿರುವ ಕೊಹ್ಲಿ ಜೈ ಹಿಂದ್‌ ಅಂತಾ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Test skipper and star batsman Virat Kohli on Thursday (Oct 27) sent a heart melting message for the Indian armed forces on the auspicious occasion of Diwali.
Please Wait while comments are loading...