ವಿಡಿಯೋ: ಜಿಮ್ ನಲ್ಲಿ ಕೊಹ್ಲಿ ಕಸರತ್ತು, ವಾರೆವ್ಹಾ!

Posted By:
Subscribe to Oneindia Kannada

ನವದೆಹಲಿ, ಫೆ. 4: ಆಸ್ಟ್ರೇಲಿಯಾ ಸರಣಿಯಲ್ಲಿ ಅತಿಥೇಯ ತಂಡದ ಬೌಲರ್ ಗಳ ಬೆವರಿಳಿಸಿದ್ದ ವಿರಾಟ್ ಕೊಹ್ಲಿ ಈಗ ತಾವು ಬೆವರು ಇಳಿಸುತ್ತಿದ್ದಾರೆ. 8 ಪ್ಯಾಕ್ ಅಬ್ಸ್ ತೋರಿಸಿದ್ದ ಕೊಹ್ಲಿ ಈಗ ವೇಟ್ ಲಿಫ್ಟಿಂಗ್ ನಲ್ಲಿ ಫುಲ್ ಬ್ಯುಸಿ.

ಆಸ್ಟ್ರೇಲಿಯಾ ಪ್ರವಾಸದಿಂದ ಭಾರತಕ್ಕೆ ಬಂದ ಮೇಲೆ ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ತಮ್ಮ 8 ಪ್ಯಾಕ್ ಅಬ್ಸ್ ತೋರಿಸಿದ್ದರು. ಫೋಟೋ, ವಿಡಿಯೋ ಹಂಚಲು ಇರುವ ಸಾಮಾಜಿಕ ಜಾಲ ತಾಣ ಇನ್ಸ್ಟಾ ಗ್ರಾಮ್ ಮೂಲಕ ಕಾಣಿಸಿಕೊಂಡ ಈ ಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಈಗ ಜಿಮ್ ನಲ್ಲಿ ಭಾರ ಎತ್ತುವ ಕೊಹ್ಲಿ ವಿಡಿಯೋ ಹೊರ ಬಂದಿದೆ.[ಕೊಹ್ಲಿ ಪರಿಶ್ರಮಕ್ಕೆ ತಕ್ಕ ಫಲ, ಟಿ20ಯಲ್ಲಿ ನಂ.1]

ಯಾತಕ್ಕಾಗಿ ತಯಾರಿ?: ಮ್ಯಾಚ್ ಇಲ್ಲ ಎಂದರೆ ಸಾಕು ಕ್ರಿಕೆಟರ್ಸ್ ಸುತ್ತಾಟ, ಶಾಪಿಂಗ್ ಮಾಡಿ ಮಜಾ ಮಾಡುತ್ತಾರೆ ಎಂಬ ಕಲ್ಪನೆ ಸಾಮಾನ್ಯವಾಗಿ ಇದೆ. ಆದರೆ, ಇತ್ತೀಚೆಗೆ ಟ್ರೆಂಡ್ ಬದಲಾಗುತ್ತಿದೆ. ಸದ್ಯಕ್ಕೆ ಕೊಹ್ಲಿಗೆ ಗರ್ಲ್ ಫ್ರೆಂಡ್ ಕಾಟವೂ ಇಲ್ಲ. ಅದೇನೋ ಬೆಂಗಳೂರು ಬೆಡಗಿ ಅನುಷ್ಕಾ ಶರ್ಮ ಜೊತೆ ನಮ್ಮ ಉಗ್ರ ಪ್ರತಾಪಿ ವಿರಾಟ್ ಮುನಿಸಿಕೊಂಡಿದ್ದಾನಂತೆ. ಏನಾದರೂ ಮಾಡ್ಕೊಳ್ಳಲಿ ಅವರ ಪರ್ಸನಲ್ ಮ್ಯಾಟರ್.

Kohli working out tirelessly at gym

27 ವರ್ಷ ವಯಸ್ಸಿನ ಟೀಂ ಇಂಡಿಯಾ ಟೆಸ್ಟ್ ನಾಯಕ ಕೊಹ್ಲಿ ಆವರಿಗೆ ಸದ್ಯಕ್ಕೆ ವಿಶ್ರಾಂತಿ ಸಿಕ್ಕಿದೆ. ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ಕೊಹ್ಲಿ ಆಡುತ್ತಿಲ್ಲ. ಮುಂದೆ ಏಷ್ಯಾ ಕಪ್, ವಿಶ್ವಟಿ20 ಕಾದಿದೆ. ಹೀಗಾಗಿ ದೇಹ ದಂಡನೆ ಕಾರ್ಯದಲ್ಲಿ ಕೊಹ್ಲಿ ಮಗ್ನರಾಗಿದ್ದಾರೆ.[ಲಂಕಾ ಸರಣಿ: ಕೊಹ್ಲಿಗೆ ರೆಸ್ಟ್, ಮನೀಶ್ ಇನ್, ನೇಗಿಗೆ ಚಾನ್ಸ್]

ಡಯಟ್, ಫಿಟ್ನೆಸ್ ವಿಷಯದಲ್ಲಿ ರಾಜಿಯಾಗಲು ಸಾಧ್ಯವಿಲ್ಲ. ಸಚಿನ್ ತೆಂಡೂಲ್ಕರ್ ಅವರ ಯಶಸ್ಸಿನ ವೃತ್ತಿ ಬದುಕಿಗೆ ಅವರ ಫಿಟ್ನೆಸ್ ಕಾರಣ ಎಂಬುದನ್ನು ನಾನು ಮರೆತ್ತಿಲ್ಲ ಎಂದು ಕೊಹ್ಲಿ ಅನೇಕ ಬಾರಿ ಹೇಳಿದ್ದುಂಟು.

ಸಿಕ್ಸ್, 8 ಪ್ಯಾಕ್ ಮಾಡುವ ಬಾಲಿವುಡ್, ಹಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ನಟರುಗಳಿಗೆ ಸರಿ ಸಮಾನವಾಗಿ ಕಾಣಿಸಿಕೊಳ್ಳುವ ಮೂಲಕ ಕೊಹ್ಲಿ ಫಿಟ್ನೆಸ್ ಹುಚ್ಚು ಇರುವ ಯುವಕರಲ್ಲಿ ಕಿಚ್ಚು ಹಚ್ಚಿದ್ದಾರಂತೆ ಎಂದರಲ್ಲಿ ತಪ್ಪಾಗಲಾರದು. ಕೊಹ್ಲಿ ಫಿಟ್ನೆಸ್ ತರಬೇತಿ ಪೂರ್ತಿ ವಿಡಿಯೋ ಸಿಕ್ಕಿಲ್ಲವಾದರೂ ವೇಟ್ ಲಿಫ್ಟಿಂಗ್ ವಿಡಿಯೋ ಇದೆ ನೋಡಿ

(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Days after Virat Kohli's photograph showing his eight-pack abs went viral over social media, Team India's handsome hunk has now shared his video in which he's seen working out heavily in gym.
Please Wait while comments are loading...