ವಿರಾಟ್ ಕೊಹ್ಲಿ ಹೊಸ ಅವತಾರ ಬಲ್ಲಿರೇನಯ್ಯಾ?

Written By:
Subscribe to Oneindia Kannada

ನವದೆಹಲಿ, ಜೂನ್ 25: ಬ್ಯಾಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಕೊಹ್ಲಿ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಭಾರತದ ಬ್ಯಾಟಿಂಗ್ ಶಕ್ತಿ ವಿರಾಟ್ ಕೊಹ್ಲಿ ಇದೀಗ ಗಾಯಕ ಮತ್ತು ನೃತ್ಯಗಾರ. ಭಾರತ ತಂಡಕ್ಕೆ ಅನಿಲ್ ಕುಂಬ್ಳೆ ಕೋಚ್ ಆಗಿ ನೇಮಕವಾಗಿದ್ದನ್ನು ಸ್ವಾಗತ ಮಾಡಿರುವ ಕೊಹ್ಲಿ ಜಿಕ್ಯೂ ಮ್ಯಾಗಜಿನ್ ಗೆ ಕವರ್ ಪೇಜ್ ಆಗಿದ್ದರು. ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದರು.[ಐಪಿಎಲ್ 2016ರಲ್ಲಿ ವಿರಾಟ್ ಕೊಹ್ಲಿ ಸಾಧನೆ, ದಾಖಲೆಗಳು]

virat

ಇದೆಲ್ಲವನ್ನು ಮೀರಿ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಕೊಹ್ಲಿ ಇದೀಗ ಕೈಯಲ್ಲಿ ಮೈಕ್ ಹಿಡಿದು ಗಾಯಕರಾಗಿ ಕಾಣಿಸಿಕೊಂಡಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಎ ಆರ್ ರೆಹಮಾನ್ ಸ್ಟುಡಿಯೋದಲ್ಲಿ ಹಾಡುತ್ತಿರುವ ಫೋಟೋವನ್ನು ಕೊಹ್ಲಿ ಶೇರ್ ಮಾಡಿದ್ದಾರೆ.['ಅನುಷ್ಕಾ' ಎಂದ ಪತ್ರಕರ್ತರ ಮೇಲೆ ಬ್ಯಾಟ್ ಬೀಸಿದ ಕೊಹ್ಲಿ]

ಪ್ರೀಮಿಯರ್ ಫುಟ್ಸಲ್ ಲೀಗ್ ಗಾಗಿ ಹಾಡೊಂದನ್ನು ರೆಹಮಾನ್ ಸಿದ್ಧಮಾಡಿದ್ದು ಕೊಹ್ಲಿ ಅವರಿಂದಲೂ ಗಾಯನ ಮಾಡಿಸಲಾಗಿದೆ. ಕೊಹ್ಲಿ ಗಾಯನದೊಂದಿಗೆ ತೆರೆ ಮೇಲೂ ಕಾಣಿಸಿಕೊಳ್ಳಲಿದ್ದಾರೆ. ಪ್ರೀಮಿಯರ್ ಫುಟ್ಸಲ್ ಲೀಗ್ ಫುಟ್ ಬಾಲ್ ಪಂದ್ಯಾವಳಿ ಆರಂಭಕ್ಕೂ ಮುನ್ನ ವಿಡಿಯೋವನ್ನು ಬಿಡುಗಡೆ ಮಾಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's most diserable bachelor and Team India's Test skipper, Virat Kohli, has decided to surprise his fans with yet another another talent.After getting featured for magazine GQ India's cover page, acting in ad films and enchanting all with his dancing skills, the versatile Delhi boy has now turned a rapper.
Please Wait while comments are loading...