ಅನುಷ್ಕಾಗಾಗಿ ವಿರಾಟ್ ಕೊಹ್ಲಿ ಸಿನಿಮಾ ಹಾಡು ಹೇಳಿದರೆ?

Subscribe to Oneindia Kannada

ನವದೆಹಲಿ, ಫೆಬ್ರವರಿ, 29: ಪಾಕಿಸ್ತಾನವನ್ನು ಬಗ್ಗು ಬಡಿದ ಸಂಭ್ರಮದಲ್ಲಿರುವ ಭಾರತ ತಂಡದ ಬ್ಯಾಟಿಂಗ್ ಶಕ್ತಿ ವಿರಾಟ್ ಕೊಹ್ಲಿ ಮತ್ತೊಂದು ಸುದ್ದಿ ಮಾಡಿದ್ದಾರೆ. ಈ ಬಾರಿ ಅವರು ಬ್ಯಾಟ್ ಬೀಸಿ ಬೌಲರ್ ಗಳ ಬೆವರಿಸಿಲ್ಲ. ಹಾಡು ಹೇಳಿ ಕಿವಿಗೆ ತಂಪೆರದಿದ್ದಾರೆ.

"ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ" ಹಾಡನ್ನು ಕೊಹ್ಲಿ ಹಾಡಿದ್ದಾರೆ. ಕೊಹ್ಲಿ ಹಾಡು ಹಾಡಿರುವ ವಿಡಿಯೋ ವೈರಲ್ ಆಗಿದೆ. ಕೊಹ್ಲಿ ಯಾರನ್ನು ಉದ್ದೇಶಿಸಿ ಈ ಹಾಡು ಹೇಳಿದ್ದರೋ ಗೊತ್ತಿಲ್ಲ. ಕೊಹ್ಲಿ ಅಭಿಮಾನಿಗಳು ಮಾತ್ರ ಅನುಷ್ಕಾ ಶರ್ಮಾಗೆ ಹೇಳಿದ್ದು ಅಂತ ಹೇಳ್ತಿದ್ದಾರೆ![ಅನುಷ್ಕಾ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೊಹ್ಲಿ ಗರಂ]

Watch video: Virat Kohli sings ‘jo waada kiya wo nibhana padega’

ಸ್ವತಃ ಕೊಹ್ಲಿಯೇ ಇಸ್ಟ್ರಾಗ್ರಾಮ್ ಮೂಲಕ ತಾವು ಹಾಡುತ್ತಿರುವ ವಿಡಿಯೋವನ್ನು ಹರಿಬಿಟ್ಟಿದ್ದರು. ನಂತರ ಇದು ಸಾಮಾಜಿಕ ತಾಣದಲ್ಲಿ ಬಿಸಿ ದೋಸೆಯಂತೆ ಹರಿದಾಡಿದೆ.[ಭಗ್ನ ಪ್ರೇಮಿ ವಿರಾಟ್ ಕೊಹ್ಲಿಗೀಗ 'ವಿರಹ' ವಿರಾಮ]

ಭಾರತೀಯ ಹೈ ಕಮಿಷನ್ ಕಚೇರಿಯ ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ಹಾಡು ಹಾಡಿದ್ದರು. ಇದನ್ನು ಆಲ್ ರೌಂಡರ್ ಯುವರಾಜ್ ಸಿಂಗ್ ಚಿತ್ರೀಕರಣ ಮಾಡಿದ್ದರು. ಕೊಹ್ಲಿ ಯುವರಾಜ್ ಸಿಂಗ್ ಅವರಿಗೆ ಧನ್ಯವಾದ ಹೇಳಲು ಮರೆತಿಲ್ಲ. 1963 ರಲ್ಲಿ ಬಿಡುಗಡೆಯಾಗಿದ್ದ ಹಿಂದಿ ಚಿತ್ರ "ತಾಜ್ ಮಹಲ್" ಗೀತೆಯನ್ನು ಕೊಹ್ಲಿ ಹಾಡಿದ್ದರು. ಹಾಂ..ಈ ಗೀತೆಯ ಮೂಲ ಗಾಯಕರು ಲತಾ ಮಂಗೇಶ್ಕರ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After Team India rode on a strong bowling performance to beat arch-rivals Pakistan by five wickets in their Twenty20 International clash of the Asia Cup, 'fantastic' Kohli was in the news for his performance. But now, Kohli is again in news, not for his performance on field but for singing a song.
Please Wait while comments are loading...