ಪಾಕಿಸ್ತಾನ ಗೆದ್ದು ಬಿಟ್ರೆ ಬಟ್ಟೆ ಬಿಚ್ತಾರಂತೆ ಈ ರೂಪದರ್ಶಿ!

Subscribe to Oneindia Kannada

ಲಾಹೋರ್, ಮಾರ್ಚ್, 16: ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೋಲ್ಟೆಜ್ ಪಂದ್ಯಕ್ಕೆ ಎರಡು ದೇಶದ ಅಭಿಮಾನಿಗಳು ಸಿದ್ಧರಾಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಪಾಕಿಸ್ತಾನದ ವಾತಾವರಣ ಬಿಸಿಯೇರಿದೆ.

ಭಾರತವನ್ನು ಅಫ್ರಿದಿ ಪಡೆ ಸೋಲಿಸಿದರೆ ಬೆತ್ತಲಾಗುವುದಾಗಿ ಪಾಕ್ ರೂಪದರ್ಶಿ ಹಾಗೂ ನಟಿ ಕ್ವಂಡೀಲ್ ಬಲೋಚ್ ಹೇಳಿಕೆ ನೀಡಿದ್ದಾಳೆ. ಮತ್ತೊಬ್ಬಳು ಪೂನಂ ಪಾಂಡೆ ಅಂದುಕೊಳ್ಳಿನಾವೇನು ಮಾಡಕ್ಕಾಗಲ್ಲ. [ಭಾರತ ವಿರುದ್ಧ ಪಾಕ್ : ಮತ್ತೊಮ್ಮೆ 'ಮೌಕಾ ಮೌಕಾ' ಜಾಹೀರಾತು]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

pakistan

ಈಡನ್ ಗಾರ್ಡನ್ ನಲ್ಲಿ ಶನಿವಾರ ನಡೆಯಲಿರುವ ಟಿ20 ವಿಶ್ವಕಪ್ ಪ೦ದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಗೆದ್ದರೆ, ಸ್ಟ್ರಿಪ್ ಡ್ಯಾನ್ಸ್ ಮಾಡುವುದಾಗಿ ಕ್ವಂಡೀಲ್ ಬಲೋಚ್ ತನ್ನ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾಳೆ. [ಪಾಕ್ ಕ್ರಿಕೆಟ್ ಆಟಗಾರ್ತಿಯರಿಗೆ ಇವರಂದ್ರೆ ಪಂಚಪ್ರಾಣ]

ಈ ಸುದ್ದಿ ಸಾಮಾಜಿಕ ತಾಣದಲ್ಲಿ ಬಹುಚರ್ಚಿತ ಸುದ್ದಿಯಾಗಿ ಬದಲಾಗಿದೆ. ಭಾರತ ಹೊಗಳಿದ್ದ ಶಾಹಿದ್ ಅಫ್ರಿದಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಮೆಂಟ್ ಮಾಡಿ ಟೀಕೆಗೆ ಒಳಗಾಗಿದ್ದ ರೂಪದರ್ಶಿ ಬೆತ್ತಲಾಗುವ ಬಯಕೆ ಹೊರಹಾಕಿದ್ದಾಳೆ.

ಬರೆದುಕೊಂಡಿರುವುದೇನು? ಮಾರ್ಚ್ 19 ರಂದು ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು ಮಣಿಸಿದರೆ 'ನಾನು ನಿಮಗೆಲ್ಲರಿಗಾಗಿ ಸ್ಟ್ರಿಪ್ ಡ್ಯಾನ್ಸ್ ಮಾಡಲಿದ್ದೇನೆ ಮತ್ತು ಇದನ್ನು ಅಫ್ರಿದಿಗೆ ಅಪಿ೯ಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A model from Pakistan has promised to do strip dance if nations' cricket team beats India in the ICC World Twenty20. A similar promise was made by Indian model Poonam Pandey in 2011, when she offered to go nude if India won the World Cup.
Please Wait while comments are loading...