ವಿಡಿಯೋ: ಗೇಲ್‌ರೊಂದಿಗೆ ಇಂಜಿ ಹುಡುಗರ ಡ್ಯಾನ್ಸ್..ಡ್ಯಾನ್ಸ್

Subscribe to Oneindia Kannada

ನವದೆಹಲಿ, ಮಾರ್ಚ್, 30: ಟಿ-20 ವಿಶ್ವಕಪ್ ನಲ್ಲಿ ವಿರೋಚಿತ ಆಟ ಪ್ರದರ್ಶನ ಮಾಡಿಕೊಂಡು ಬಂದ ಅಪಘಾನಿಸ್ತಾನ ಅಂತಿಮವಾಗಿ ವೆಸ್ಟ್ ಇಂಡೀಸ್ ಗೆ ಸೋಲು ಉಣಿಸಿದೆ.

ಅಪಘಾನಿಸ್ತಾನ ತಂಡ ಹೊಸದಾಗಿ ಕಾಲಿಟ್ಟಿದ್ದರೂ ಅವರ ಪ್ರದರ್ಶನ ಎಲ್ಲರಿಗೂ ಮೆಚ್ಚುಗೆ ಆಯಿತು. ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಮುಗಿಸಿದ ಇಂಜಿ ಹುಡುಗರು ಪಂದ್ಯದ ಬಳಿಕ ಮಾಡಿದ ಡ್ಯಾನ್ಸ್ ನೋಡಲೇಬೇಕು.[ಮಾತು ಉಳಿಸಿಕೊಂಡ ಬಿಗ್ ಬಿ, ಆಫರ್ ರಿಜೆಕ್ಟ್ ಮಾಡಿದ ಗೇಲ್!]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

cricket

ವೆಸ್ಟ್ ಇಂಡೀಸ್ ತಂಡದ "ಚಾಂಪಿಯನ್" ಶೈಲಿಯ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಅಪಘಾನಿಸ್ತಾನದ ವಿಕೆಟ್ ಕೀಪರ್ ಮೊಹಮದ್ ಶಹಜಾದ್ ನೃತ್ಯ ತಂಡದ ಮುಂದಾಳುವಾಗಿದ್ದರು.[ಸುಂದರ ನೃತ್ಯಗಾರ್ತಿಯೊಂದಿಗೆ ಒಬಾಮಾ ಡ್ಯಾನ್ಸ್..ಡ್ಯಾನ್ಸ್]

ಅಪಘಾನಿಸ್ತಾನದ ಆಟಗಾರರೊಂದಿಗೆ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಸಹ ಹೆಜ್ಜೆ ಹಾಕಿದ್ದು ವಿಶೇಷ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋಕ್ಕೆ ಡ್ವೇನ್ ಬ್ರಾವೋ ಅವರ ಹಾಡನ್ನು ಅಳವಡಿಕೆ ಮಾಡಲಾಗಿದೆ. ನೀವು ಒಂದು ಸುತ್ತು ಡ್ಯಾನ್ಸ್ ಮಾಡಿಕೊಂಡು ಬನ್ನಿ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Minnows Afghanistan on Mar 27 scripted history as they defeated 2012 champions West Indies to sign off on a memorable note. As spirited Afghanistan cricket team ended their maiden World T20 journey on a positive note, the team celebrated its first victory against the former World Champions in style too.
Please Wait while comments are loading...