ಬ್ರಾವೊ ಡ್ಯಾನ್ಸ್ ಗೆ ಫಿದಾ ಆಗಿದ್ದು ಒಬ್ರ, ಇಬ್ರ!

Posted By:
Subscribe to Oneindia Kannada

ನವದೆಹಲಿ, ಮೇ 01: ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಡ್ವಾಯ್ನೆ ಬ್ರಾವೋ ಅವರ 'ಚಾಂಪಿಯನ್ ಸಾಂಗ್ ಹಾಗೂ ಡ್ಯಾನ್ಸ್' ಗೆ ಫಿದಾ ಆದವರು ಒಬ್ರ, ಇಬ್ರ ಊರ್ ತುಂಬಾ ಇದ್ದಾರೆ. ಬಾಲಿವುಡ್ ಬೆಡಗಿಯರಿಂದ ಹಿಡಿದು ಕಾಲೇಜ್ ಫೆಸ್ಟ್ ಗಳಲ್ಲಿ ನರ್ತಿಸಲು ಕೂಡಾ' ಬ್ರಾವೋ ಡ್ಯಾನ್ಸ್ ಬಳಕೆಯಾಗುತ್ತಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಐಸಿಸಿ ಟ್ವೆಂಟಿ20 ಟೂರ್ನಿಯಲ್ಲಿ ಮೊದಲಿಗೆ ಬ್ರಾವೋ ಈ ಡ್ಯಾನ್ಸ್ ಝಲಕ್ ತೋರಿಸಿದ್ದರು. ಡಿಜೆ ಬ್ರಾವೋ ಅವರ ಡ್ಯಾನ್ಸ್ ಗೆ ಡರೇನ್ ಸಾಮಿ, ಕ್ರಿಸ್ ಗೇಲ್ ಕೂಡಾ ಹೆಜ್ಜೆ ಹಾಕಿದ್ದರು. ನಂತರ ಇಂಡಿಯನ್ ಪ್ರೀಮಿಯರ್ ಲೀಗ್ 9ರಲ್ಲಿ ಅನೇಕ ತಂಡಗಳ ಆಟಗಾರರು ಈ 'ಚಾಂಪಿಯನ್ ಡ್ಯಾನ್ಸ್' ಆಡಿ ಕುಣಿದಾಡಿದ್ದರು.

Watch: Urvashi Rautela-'Champion' Dwayne Bravo sizzle on dance floor

32 ವರ್ಷ ವಯಸ್ಸಿನ ಬ್ರಾವೊ ಕುಣಿತಕ್ಕೆ ಮಾರುಹೋದ ಬಾಲಿವುಡ್ ಬೆಡಗಿಯರ ಪೈಕಿ ಸ್ನೇಹಾ ಉಲ್ಲಾಳ್ ಮೊದಲಿಗರು, ಗೇಲ್ ಹಾಗೂ ಬ್ರಾವೋ ಜತೆ ಸ್ಟೆಪ್ಸ್ ಹಾಕಿದ್ದರು. ನಂತರ ಕನ್ನಡದಲ್ಲಿ ದರ್ಶನ್ ಅವರ ಜತೆ ನಟಿಸಿದ್ದ ಊರ್ವಶಿ ರೌಟೆಲಾ ಸರದಿ.

Champion we are real champion @djbravo47 #dwaynebravo #Champion

A video posted by Urvashi Rautela 🇮🇳 (@urvashirautelaforever) on Apr 27, 2016 at 8:36am PDT


ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚುವ ಬೆಡಗಿ ಊರ್ವಶಿ ಅವರು ಬ್ರಾವೋ ಜತೆಗೆ 'ಚಾಂಪಿಯನ್ ಡ್ಯಾನ್ಸ್' ಸ್ಟೆಪ್ ಹಾಕಿದ್ದಾರೆ.

Champion we are real champion @djbravo47

A video posted by Urvashi Rautela 🇮🇳 (@urvashirautelaforever) on Apr 27, 2016 at 8:48am PDT


ಸಕತ್ ಆಗಿ ಡ್ಯಾನ್ಸ್ ಮಾಡುವ ಊರ್ವಶಿ ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಕುಣಿಯಲು ಭರ್ಜರಿ ತಯಾರಿ ನಡೆಸಿದ್ದು ಹೀಗೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Watch: Urvashi Rautela-'Champion' Dwayne Bravo sizzle on dance floor.The 'Champion song' of West Indies all-rounder Dwayne Bravo is getting famous with each passing day.
Please Wait while comments are loading...