ವಿಡಿಯೋ : ಬವುಮಾ ಸೂಪರ್ ಫೀಲ್ಡಿಂಗ್, ವಾರ್ನರ್ ರನೌಟ್!

Posted By:
Subscribe to Oneindia Kannada

ಪರ್ತ್, ನವೆಂಬರ್ 07: ದಕ್ಷಿಣ ಅಫ್ರಿಕಾ ಹಾಗೂ ಅಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ ಕುತೂಹಲಕಾರಿಯಾಗಿ ಸಾಗಿದ್ದು, ದಕ್ಷಿಣ ಆಫ್ರಿಕಾ ಜಯದ ನಿರೀಕ್ಷೆಯಲ್ಲಿದೆ. ಈ ನಡುವೆ ಭಾನುವಾರದಂದು ಪರ್ತ್ ಮೈದಾನದಲ್ಲಿ ದಕ್ಷಿಣ ಆಫ್ರಿಕದ ಬವುಮಾ ಫೀಲ್ಡಿಂಗ್ ಎಲ್ಲರನ್ನು ಚಕಿತಗೊಳಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್

ಪರ್ತ್ ಟೆಸ್ಟ್ ಗೆಲ್ಲಲು 539 ರನ್ ಟಾರ್ಗೆಟ್ ಪಡೆದುಕೊಂಡ ಆಸ್ಟ್ರೇಲಿಯಾಕ್ಕೆ ಗೆಲುವಿನ ಭರವಸೆ ಹುಟ್ಟಿಸಬಲ್ಲ ಆಟಗಾರ ಡೇವಿಡ್ ವಾರ್ನರ್ ರನ್ನು ಟೆಂಬಾ ಬವುಮಾ ತಮ್ಮ ಚಿನಕುರಳಿ ಓಟ, ನೆಗೆತ ಹಾಗೂ ಎಸೆತದ ಮೂಲಕ ರನೌಟ್ ಮಾಡಿ ಗಮನ ಸೆಳೆದರು. ಮೊದಲ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ಅವರು ಇಲ್ಲದ ರನ್ ಕದಿಯಲು ಯತ್ನಿಸಿ 35ರನ್ ಗಳಿಗೆ ಔಟಾದರು.

Watch: Temba Bavuma's sensational run out stuns David Warner

ಬೃಹತ್ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾಕ್ಕೆ ವೇಗಿ ಕಂಗಿಸೋ ರಬಡಾ ತಡೆಯೊಡ್ಡಿದರು. ಮೂರು ವಿಕೆಟ್ ಕಿತ್ತು, ವೇಗಿ ಡೇಲ್ ಸ್ಟ್ರೈನ್ ಅನುಪಸ್ಥಿತಿ ಕಾಡದಂತೆ ನೋಡಿಕೊಂಡರು. ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಜೆಪಿ ಡುಮಿನಿ ಹಾಗೂ ಎಲ್ಗಾರ್ ಶತಕ ಹಾಗೂ ವೇಗಿ ಫಿಲ್ಯಾಂಡರ್ ಅರ್ಧಶತಕದ ನೆರವಿನಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 63.4 ಓವರ್ ಗಳಲ್ಲಿ 242 ಹಾಗೂ 160.1 ಓವರ್ ಗಳಲ್ಲಿ 540/8
ಆಸ್ಟ್ರೇಲಿಯಾ 70.2 ಓವರ್ ಗಳಲ್ಲಿ 244 ಹಾಗೂ 109 ಓವರ್ ಗಳಲ್ಲಿ 326/8
ಇಂದು ಪಂದ್ಯದ ಕೊನೆ ದಿನದ ಆಟ

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An extraordinary piece of fielding by the diminutive South African fielder Temba Bavuma was the talk of the town on the fourth day of the opening Test in Perth on Sunday (Nov 6).
Please Wait while comments are loading...