ಕ್ರಿಕೆಟ್ ದಿಗ್ಗಜ ಸಚಿನ್ ಆತ್ಮಕಥೆ ಚಿತ್ರದ ಟೀಸರ್

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 14: ಕ್ರಿಕೆಟ್ ದಿಗ್ಗಜ ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆಯ ಚಿತ್ರ "ಸಚಿನ್ ಎ ಬಿಲಿಯನ್ ಡ್ರೀಮ್ಸ್" ಟೀಸರ್ ಗುರುವಾರ ಏಪ್ರಿಲ್ 14 ರಂದು ಮಧ್ಯಾಹ್ನ 1 ಗಂಟೆಗೆ ಬಿಡುಗಡೆಯಾಗಿದೆ.

ಈ ಚಿತ್ರದ ಎರಡು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ಕುತೂಹಲ ಕಾಯ್ದುಕೊಳ್ಳಲಾಗಿತ್ತು. "55 ಡೇಸ್ ದಿ ಟ್ರೈನಿಂಗ್ ಒನ್ ಪೇರ್ ಆಫ್ ಟ್ರಸರ್ಸ್ ದಿ ಸಚಿನ್ ಸ್ಟೋರಿ" ಆಧಾರಿತ ಸಚಿನ್ ಚಿತ್ರದ ಪೋಸ್ಟರ್ ಗಳನ್ನು ಹಲವು ಕ್ರಿಕೆಟ್ ಆಟಗಾರರು, ಸೆಲೆಬ್ರಿಟಿಗಳು, ಸಾರ್ವಜನಿಕರು ಹಂಚಿ ಸಂತಸ ಪಟ್ಟಿದ್ದರು. [ಸಚಿನ್ ಕುರಿತ ಚಿತ್ರದ ಟೀಸರ್ ಗೆ ಕಾದಿದ್ದೇನೆ: ಕೊಹ್ಲಿ]

Watch : Sachin A Billion Dreams Movie Official Teaser

ಸುಮಾರು 30 ತಿಂಗಳು ಕಾಲ 5 ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಚಿತ್ರಕ್ಕೆ ಜೇಮ್ಸ್ ಇರಸ್ಕಿನ್ ಅವರು ಆಕ್ಷನ್ ಕಟ್ ಹೇಳಿದ್ದಾರೆ.

ರವಿ ಭಾಗ್ಚಂದಕ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಪ್ರಚಾರದ ಹೊಣೆಯನ್ನು ಕಾರ್ನಿವಲ್ ಡಿಜಿಟಲ್ ಮೀಡಿಯಾ ಪ್ರೈ ಲಿಮಿಟೆಡ್ ಹೊತ್ತುಕೊಂಡಿದೆ. ಸಚಿನ್ ತೆಂಡೂಲ್ಕರ್ ಅವರ ಕುರಿತ ಚಿತ್ರದ ಟೀಸರ್ ನ ಸ್ಕ್ರೀನ್ ಶಾಟ್ ಗಳ ಗ್ಯಾಲರಿ ಇಲ್ಲಿದೆ...

ಕ್ರಿಕೆಟ್ ದಿಗ್ಗಜ ಸಚಿನ್ ಆತ್ಮಕಥೆ ಚಿತ್ರದ ಟೀಸರ್

ಕ್ರಿಕೆಟ್ ದಿಗ್ಗಜ ಸಚಿನ್ ಆತ್ಮಕಥೆ ಚಿತ್ರದ ಟೀಸರ್

-
-
-
-
-
-
-
-
-
-

ಸಚಿನ್ ಫಿಲಂ ಬಗ್ಗೆ ವಿಷಯ ಹೊರ ಬರುತ್ತಿದ್ದಂತೆ, ಕ್ರಿಕೆಟರ್ಸ್, ಅಭಿಮಾನಿಗಳು, ಸೆಲೆಬ್ರಿಟಿಗಳು ಹರ್ಷ ವ್ಯಕ್ತಪಡಿಸಿ ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಆಸ್ಕರ್ ವಿಜೇತ ಎ.ಆರ್ ರೆಹಮಾನ್ ಅವರ ಸಂಗೀತವಿರುವ ಈ ಚಿತ್ರದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿದೆ. ಸದ್ಯಕ್ಕೆ ಚಿತ್ರದ ಟೀಸರ್ ನೋಡಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Carnival Digital Media Pvt. Ltd presents the teaser of the master blaster Sachin Tendulkar's film: Sachin A Billion Dreams on April 14. Movie is directed by: James ErskineMusic by: A.R.Rahman, Produced By: Ravi Bhagchandka & Carnival Motion Pictures
Please Wait while comments are loading...