ವಿಡಿಯೋ: ರೋಹಿತ್ ಶರ್ಮ ಹಿಡಿದ ಅದ್ಭುತ ಕ್ಯಾಚ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಅವರು ಏಪ್ರಿಲ್ 14ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 10ರ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿದು ಎಬಿ ಡಿ ವಿಲಿಯರ್ಸ್ ಅವರನ್ನು ಔಟಾಗಲು ಕಾರಣರಾದರು. ರೋಹಿತ್ ಕ್ಯಾಚ್ ಹಿಡಿದ ವಿಡಿಯೋ ನೋಡಿ...

ಆರ್ ಸಿಬಿ ಪರ ಕ್ರಿಸ್ ಗೇಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದು ಉತ್ತಮ ಆರಂಭ ಪಡೆದರು. ಆದರೆ, ಗೇಲ್ 22 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿ ನಡೆದರು.

Watch Rohit Sharma's sensational catch to dismiss AB de Villiers in IPL 2017

360 ಡಿಗ್ರಿ ಆಟಗಾರ ಎಬಿ ಡಿ ವಿಲಿಯರ್ಸ್ 19ರನ್ ಗಳಿಸಿದ್ದಾಗ ಕೃನಾಲ್ ಪಾಂಡ್ಯ ಅವರ ಬೌಲಿಂಗ್ ನಲ್ಲಿ ಕ್ಯಾಚಿತ್ತರು. ಮುಂಬೈ ನಾಯಕ ರೋಹಿತ್ ಶರ್ಮ ಅವರು ಹಿಡಿದ ಅದ್ಭುತ ಕ್ಯಾಚಿನಿಂದ ಔಟಾದರು. ಇದಕ್ಕೂ ಮುನ್ನ 7 ರನ್ ಗಳಿಸಿದ್ದಾಗ ಕೃನಾಲ್ ಪಾಂಡ್ಯ ಬೌಲಿಂಗ್ ನಲ್ಲೇ ಜೋಸ್ ಬಟ್ಲರ್ ಗೆ ಕ್ಯಾಚ್ ನೀಡಿದ್ದರು. ಆದರೆ ಬಟ್ಲರ್ ಕೈಚೆಲ್ಲಿದರು.

ವಿಡಿಯೋ ನೋಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Indians (MI) captain Rohit Sharma pulled off one of the best catches in the Indian Premier League (IPL) 2017 during their match against Royal Challengers Bangalore (RCB) here today (April 14).
Please Wait while comments are loading...