ವಿರಾಟ್ ಕೊಹ್ಲಿ, ಭಜ್ಜಿ ಅಭಿಮಾನಿಗಳಿಗೆ ಕೊಟ್ಟ ಭಾಷೆಯೇನು?

Subscribe to Oneindia Kannada

ನವದೆಹಲಿ, ಮಾರ್ಚ್.09: ವಿಶ್ವ ಟಿ-20ಗೆ ಭಾರತದ ಆಟಗಾರರು ಸಕಲ ಸಜ್ಜಾಗಿದ್ದಾರೆ. ಏಷ್ಯಾ ಕಪ್ ಜಯ ಹೊಸ ಆತ್ಮವಿಶ್ವಾಸವನ್ನು ತುಂಬಿದೆ. ಈ ಮಧ್ಯೆ ಕೊಹ್ಲಿ ಮತ್ತು ಭಜ್ಜಿ ಅಭಿಮಾನಿಗಳಿಗೆ ಭರ್ಜರಿ ಆಶ್ವಾಸನೆಯೊಂದನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಹರ್ಭಜನ್ ಸಿಂಗ್ ಭಾರತದ ಅಭಿಮಾನಿಗಳಿಗೆ ಭಾಷೆ ನೀಡಿದ್ದಾರೆ. ಹಾಗಾದರೆ ಟೀಂ ಇಂಡಿಯಾ ಆಟಗಾರರು ನೀಡಿರುವ ಮಾತು ಏನು? ಪಂಜಾಬಿ ಶೈಲಿಯಲ್ಲಿ ಮಾತನಾಡಿರುವ ವಿರಾಟ್ ಮತ್ತು ಭಜ್ಜಿ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ ಎಂದು ಹೇಳಿದ್ದಾರೆ.

| ತಂಡಗಳು | ವೇಳಾಪಟ್ಟಿ

cricket

ಅತ್ಯುತ್ತಮ ಪ್ರದರ್ಶನ ನೀಡಿ ಟಿಪಿಕಲ್ ಪಂಜಾಬಿಯ "ಬಾಂಗ್ರಾ" ಶೈಲಿಯಲ್ಲಿ ನೃತ್ಯ ಮಾಡಲಿದ್ದೇವೆ ಎಂದು ಅಭಿಮಾನಿಗಳಿಗೆ ಮಾತು ನೀಡಿದ್ದಾರೆ. ಬಿಸಿಸಿಐ ಅಪ್ ಲೋಡ್ ಮಾಡಿರುವ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.[ಪಂದ್ಯ ಸ್ಥಳಾಂತರಕ್ಕೆ ಪಾಕಿಸ್ತಾನ ಮನವಿ]

ಪಂಜಾಬಿ ಶೈಲಿಯಲ್ಲಿ ಮಾತನಾಡಿದ್ದು ಪಂಜಾಬಿ ಅಭಿಮಾನಿಗಳು ಫುಲ್ ಕುಶ್ ಆಗಿದ್ದಾರೆ. ಮಾರ್ಚ್ 19ಕ್ಕೆ ಧರ್ಮಶಾಲಾದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣೆಸಲಿದ್ದು ಎಲ್ಲ ಅಭಿಮಾನಿಗಳ ಚಿತ್ತ ಆ ಪಂದ್ಯದ ಮೇಲೆ ನೆಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
As Team India prepares for the coveted ICC World Twenty20, the Punjabi lads Virat Kohli and Harbhajan Singh, in a video conversation, exuded confidence over a positive show in the tournament.Both Virat and Harbhajan shared a good bond with each other in the video and addressed their fans in typical Punjabi and assured them of a good performance in the ongoing World T20.
Please Wait while comments are loading...