ಶೂಟಿಂಗ್ ವೇಳೆ ಅಶ್ವಿನ್ ರನ್ನು ಕಿಚಾಯಿಸಿದ ಧೋನಿ, ಕೊಹ್ಲಿ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲೇ ಜಾಹೀರಾತೊಂದರಲ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರಾದ ಆರ್ ಅಶ್ವಿನ್, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಶೂಟಿಂಗ್ ವೇಳೆ ಅಶ್ವಿನ್ ರನ್ನು ಧೋನಿ ಹಾಗೂ ಕೊಹ್ಲಿ ಕಿಚಾಯಿಸಿದ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

Watch: MS Dhoni, Virat Kolhi make fun of R Ashwin's Hindi, troll him during ad shoot

ಇಷ್ಟಕ್ಕೂ ಈ ಜಾಹೀರಾತು ವಿಡಿಯೋದಲ್ಲಿ ಅಂಥದ್ದೇನಿದೆ? ಎಲ್ಲಾ ಶೂಟಿಂಗ್ ಸಮಯದಲ್ಲಿ ನಡೆಯುವಂಥದ್ದೇ, ಆದರೆ, ಕ್ರಿಕೆಟರ್ಸ್ ಗಳಿಗೆ ಶೂಟಿಂಗ್ ಸ್ವಲ್ಪ ಹೊಸತು. ತಮಿಳುನಾಡು ಮೂಲದ ಆರ್ ಅಶ್ವಿನ್ ಅವರ ಕೈಗೆ ಹಿಂದಿ ಭಾಷೆಯಲ್ಲಿರುವ ಡೈಲಾಗ್ ಶೀಟ್ ನೀಡಲಾಗಿತ್ತು. ಡೈಲಾಗ್ ಹೊಡೆಯಲು ತಿಣುಕಾಡಿ, ಲೈನ್ಸ್ ಮರೆತ ಅಶ್ವಿನ್ ರನ್ನು ಅನುಭವಿ ರೂಪದರ್ಶಿಗಳಾದ ಧೋನಿ ಹಾಗೂ ಕೊಹ್ಲಿ ಗೇಲಿ ಮಾಡಿದ್ದಾರೆ.

ಆರ್ ಅಶ್ವಿನ್ ಹಾಗೂ ಎಂಎಸ್ ಧೋನಿ ಅವರು ಪುಣೆ ರೈಸಿಂಗ್ ಜೈಂಟ್ಸ್ ಜರ್ಸಿ ತೊಟ್ಟಿದ್ದರೆ, ವಿರಾಟ್ ಕೊಹ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿರಿಸಿನಲ್ಲಿದ್ದಾರೆ.

'ಪಿಕ್ಚರ್ ಕ್ವಾಲಿಟಿ ಬಕ್ವಾಸ್ ಹೈ' ಎಂದು ಡೈಲಾಗ್ ಹೇಳಲು ಅಶ್ವಿನ್ ತಿಣುಕಾಡಿದ್ದಾರೆ. ಡೈರೆಕ್ಟರ್ 'ಕಟ್' ಎಂದಿದ್ದಾರೆ. ತಕ್ಷಣವೆ ಕೊಹ್ಲಿ 'ವಾಹ್ ಎಂಥಾ ಹಿಂದಿ' ಎಂದು ನಗಾಡಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ ಮೊಬೈಲ್ ಫೋನಿನ ಪಿಕ್ಚರ್ ಕ್ವಾಲಿಟಿ ಬಗ್ಗೆ ಮಾತನಾಡುವಾಗಲೂ ಅಶ್ವಿನ್ ರನ್ನು ಕಿಚಾಯಿಸಲಾಗಿದೆ. ವಿಡಿಯೋ ತುಣುಕುಗಳನ್ನು ನೋಡಿ ಆನಂದಿಸಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A behind the scene video from an ad shoot is going viral over social media in which Team India's stars MS Dhoni and Virat Kohli could be seen trolling their fellow team mate R Ashwin.
Please Wait while comments are loading...