ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅನುಷ್ಕಾ ಮುಂದೆ ಕೊಹ್ಲಿ ಕಣ್ಣೀರು ಹಾಕಿದ್ದೇಕೆ? ಅವರೇ ಬಿಚ್ಚಿಟ್ಟ ಕಥೆ!

ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾದಾಗ ಆನಂದಭಾಷ್ಪ ಸುರಿಸಿದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ. ಆಗ, ತಮ್ಮ ಬಳಿಯಿದ್ದ ತಮ್ಮ ಪ್ರೇಯಸಿ ಅನುಷ್ಕಾ ಶೆಟ್ಟಿ ಮುಂದೆ ಹೋಗಿ ಕುಳಿತು ಕಣ್ಣೀರಾಗಿದ್ದ ಕೊಹ್ಲಿ.

ಲಂಡನ್, ಜೂನ್ 13: ಸಾಮಾನ್ಯವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ತಮ್ಮ ನಡುವಿನ ಪ್ರೇಮದ ವಿಚಾರಗಳನ್ನು ಬಹಿರಂಗವಾಗಿ ಎಲ್ಲೂ ಹಂಚಿಕೊಂಡಿದ್ದಿಲ್ಲ.

ಆದರೆ, ಇದೊಂದು ವಿಚಾರವನ್ನು ಕೊಹ್ಲಿ, ಅದೇಕೋ ಹಂಚಿಕೊಳ್ಳಬೇಕೆಂದೆನಿಸಿ ಹೇಳಿಕೊಂಡಿದ್ದಾರೆ. ಅದೊಂದು ದಿನ ತಾವು ಅನುಷ್ಕಾ ಶರ್ಮಾ ಮುಂದೆ ಕುಳಿತು ಕಣ್ಣೀರು ಹಾಕಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

ಕೊಹ್ಲಿ ಹಾಗೂ ಎಬಿಡಿ 'ಡಕ್ ಔಟ್' ರಹಸ್ಯ ಟ್ವಿಟ್ಟರಲ್ಲಿ ಬಹಿರಂಗಕೊಹ್ಲಿ ಹಾಗೂ ಎಬಿಡಿ 'ಡಕ್ ಔಟ್' ರಹಸ್ಯ ಟ್ವಿಟ್ಟರಲ್ಲಿ ಬಹಿರಂಗ

Was In Tears When I Shared Captaincy News With Anushka: Virat Kohli

ಅಂದಹಾಗೆ, ಅದು ದುಃಖದ ಕಣ್ಣೀರಲ್ಲ, ಆನಂದಬಾಷ್ಪ. 2015ರಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸದಲ್ಲಿದ್ದಾಗ ನಡೆದ ಘಟನೆಯಿದು. ಆಗ, ನಡೆಯುತ್ತಿದ್ದ ಟೆಸ್ಟ್ ಸರಣಿಯ ಮಧ್ಯದಲ್ಲೇ ಅಂದಿನ ಟೆಸ್ಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ತಮ್ಮ ನಾಯಕತ್ವವನ್ನು ತೊರೆದರು. ಆಗ, ವಿರಾಟ್ ಕೊಹ್ಲಿಯವರನ್ನು ನಾಯಕರನ್ನಾಗಿ ಬಿಸಿಸಿಐ ನೇಮಿಸಿತು.

ವೆಸ್ಟ್ ಇಂಡೀಸ್ ಪ್ರವಾಸ ಮುಗಿಯುವ ತನಕ ಕುಂಬ್ಳೆ ಕೋಚ್!ವೆಸ್ಟ್ ಇಂಡೀಸ್ ಪ್ರವಾಸ ಮುಗಿಯುವ ತನಕ ಕುಂಬ್ಳೆ ಕೋಚ್!

ಆಗ ಅವರು, ಮೆಲ್ಬೋರ್ನ್ ನಲ್ಲಿದ್ದರಂತೆ. ಆಗ, ಅವರ ಪ್ರೇಯಸಿ ಅನುಷ್ಕಾ ಕೂಡ ಅಲ್ಲಿಗೇ ಹೋಗಿದ್ದರಂತೆ. ಆಗಲೇ, ಬಿಸಿಸಿಐನಿಂದ ಭಾರತ ಟೆಸ್ಟ್ ತಂಡದ ನಾಯಕರನ್ನಾಗಿ ಆರಿಸಲಾಗಿತ್ತಂತೆ. ಕ್ರಿಕೆಟ್ ಅನ್ನು ತಮ್ಮ ವೃತ್ತಿಜೀವನವನ್ನಾಗಿ ಆರಿಸಿಕೊಂಡಾಗ, ಮುಂದೊಂದು ದಿನ ಟೀಂ ಇಂಡಿಯಾ ನಾಯಕನಾಗುತ್ತೇನೆಂದು ಎಂದೂ ಅಂದುಕೊಳ್ಳದಿದ್ದ ಅವರಿಗೆ ಈ ಹೊಸ ಜವಾಬ್ದಾರಿ ಕಣ್ಣೀರು ತರಿಸಿತ್ತಂತೆ. ತಕ್ಷಣವೇ ಅನುಷ್ಕಾ ಮುಂದೆ ಹೋಗಿ ಗಳಗಳನೇ ಮಗುವಿನಂತೆ ಅತ್ತುಬಿಟ್ಟರಂತೆ. ಆಗ, ಅನುಷ್ಕಾ ಅವರು ಕೊಹ್ಲಿಯನ್ನು ಸಮಾಧಾನಪಡಿಸಿದ್ದರಂತೆ.

ಶ್ರೀಲಂಕಾ ವಿರುದ್ಧ ಗೆದ್ದು, ಸೆಮೀಸ್ ಗೆ ಲಗ್ಗೆ ಇಟ್ಟ ಪಾಕಿಸ್ತಾನಶ್ರೀಲಂಕಾ ವಿರುದ್ಧ ಗೆದ್ದು, ಸೆಮೀಸ್ ಗೆ ಲಗ್ಗೆ ಇಟ್ಟ ಪಾಕಿಸ್ತಾನ

ಈ ಸುಮಧುರ ಘಟನೆಯನ್ನು ನಾನೆಂದಿಗೂ ಮರೆಯಲಾರೆ ಎಂದಿದ್ದಾರೆ ಕೊಹ್ಲಿ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X