ವಕಾರ್ ಯೂನಿಸ್ ತಂಡದಲ್ಲಿ ಭಾರತದ ಯಾರಿದ್ದಾರೆ?

Written By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್, 03: ವಿಶ್ವ ಕಂಡ ಶ್ರೇಷ್ಠ ವೇಗದ ಬೌಲರ್, ಪಾಕಿಸ್ತಾನದ ಮಾಜಿ ನಾಯಕ ವಕಾರ್ ಯೂನಿಸ್ "ಆಧುನಿಕ ಏಕದಿನ ತಂಡವನ್ನು" ಆಯ್ಕೆ ಮಾಡಿದ್ದಾರೆ.

ವಕಾರ್ ಯೂನಿಸ್ ತಂಡದಲ್ಲಿ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ವಿಶ್ವದ ಕ್ರಿಕೆಟ್ ದಿಗ್ಗಜರು ತಮ್ಮ ಆಯ್ಕೆಯ ತಂಡವನ್ನು ಆಯ್ಕೆ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿ ಪರಿಣಮಿಸಿದೆ.[ಸಚಿನ್ ಗಿಂತ ಪಾಕಿಸ್ತಾನಿ ಕ್ರಿಕೆಟರ್ ಶ್ರೇಷ್ಠ ಎಂದ ವೇಗಿ ಯಾರು?]

virat

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯೂನಿಸ್ ತಂಡವನ್ನು ಪ್ರಕಟ ಮಾಡಿದ್ದಾರೆ. ಟೆಸ್ಟ್ ನಲ್ಲಿ 373, ಏಕದಿನದಲ್ಲಿ 416 ವಿಕೆಟ್ ಕಿತ್ತ ಸಾಧನೆ ವಕಾರ್ ಬಳಿ ಇದೆ. ಭಾರತ ತಂಡದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ರೋಹಿತ್ ಶರ್ಮಾ ವಕಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯಾದ ಸ್ವೀವ್ ಸ್ಮಿತ್ ತಂಡದ ನಾಯಕರಾಗಿದ್ದರೆ ಎ ಬಿ ಡಿವಿಲಿಯರ್ಸ್ ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಕಾರ್ ತಂಡದಲ್ಲಿ ಮೂವರು ಎಡಗೈ ವೇಗಿಗಳಿರುವುದು ವಿಶೇಷ. ಯಾವುದೇ ಸ್ಪೆಶಲಿಸ್ಟ್ ಸ್ಪಿನ್ನರ್ ಗಳು ಸ್ಥಾನ ಪಡೆದಿಲ್ಲ. ಪಾಕಿಸ್ತಾನದ ಮೊಹಮದ್ ಅಮೀರ್, ಆಸ್ಟ್ರೇಲಿಯಾದ ಮಿಚಲ್ ಸ್ಟಾರ್ಕ್ ಮತ್ತು ಬಾಂಗ್ಲಾದೇಶದ ಮುಸ್ತುಜಫಿರ್ ವೇಗದ ಬೌಲಿಂಗ್ ಹೊಣೆ ಹೊತ್ತಿದ್ದಾರೆ.[ವಿರಾಟ್ ಕೊಹ್ಲಿ ಮೇಲೆ ಪಾಕಿಸ್ತಾನಿಯರಿಂದ ಇದೆಂಥ ವಿಕೃತಿ!?]

ವಕಾರ್ ಯೂನಿಸ್ ತಂಡ
* ಡೇವಿಡ್ ವಾರ್ನರ್(ಆಸ್ಟ್ರೇಲಿಯಾ)
* ರೋಹಿತ್ ಶರ್ಮಾ(ಭಾರತ)
* ವಿರಾಟ್ ಕೊಹ್ಲಿ(ಭಾರತ)
* ಎ ಬಿ ಡಿವಿಲಿಯರ್ಸ್(ದಕ್ಷಿಣ ಆಫ್ರಿಕಾ)
* ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)(ನಾಯಕ)
* ಜೋಸ್ ಬಟ್ಲರ್(ಇಂಗ್ಲೆಂಡ್)
* ಬೆನ್ ಸ್ಟೋಕ್ಸ್(ಇಂಗ್ಲೆಂಡ್)
* ಮಿಚಲ್ ಸ್ಟಾರ್ಕ್(ಆಸ್ಟ್ರೇಲಿಯಾ)
* ಮೊಹಮದ್ ಅಮೀರ್(ಪಾಕಿಸ್ತಾನ)
* ಮುಸ್ತುಜಫಿರ್(ಬಾಂಗ್ಲಾದೇಶ)
* ಮಾರ್ಟಿನ್ ಗುಪ್ತಿಲ್(ನ್ಯೂಜಿಲೆಂಡ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Pakistan captain Waqar Younis has picked his "Modern Day ODI World 12" which features 2 Indians.In recent times, former cricketers have either picked their "All Time XIs" or current best teams in both Tests and ODIs.
Please Wait while comments are loading...