ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಐಸಿಸಿ ಎಚ್ಚರಿಕೆ

By: ರಮೇಶ್ ಬಿ
Subscribe to Oneindia Kannada

ಕರಾಚಿ. ಫೆ.15. ಭಾರತದಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಬೇಕು ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಗೆ ಎಚ್ಚರಿಕೆ ನೀಡಿದೆ.

ಭಾರತದಲ್ಲಿ ಆಟಗಾರರಿಗೆ ಸರಿಯಾದ ಬಿಗಿ ಭದ್ರತೆ ಇಲ್ಲವೆಂದು ಕಾರಣ ಹೇಳಿ ಟಿ-20 ವಿಶ್ವಕಪ್ ನಿಂದ ದೂರ ಉಳಿಯುವ ಮಾತುಗಳನ್ನು ಪಾಕಿಸ್ತಾನ ಸರ್ಕಾರ ಆಡುತ್ತಿದೆ. [ಧರ್ಮಶಾಲದಲ್ಲಿ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್ ಸಮರ]

Waiting for government nod to participate in World T20 in India: PCB

ಭಾರತದಲ್ಲಿ ಎಲ್ಲಾ ರೀತಿಯಾದ ಬೀಗಿ ಬಂದೋಬಸ್ತ್ ನೀಡುತ್ತದೆ ಯಾವುದೇ ತೊಂದರೆಗಳು ಆಗುವುದಿಲ್ಲವೆಂದು ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತಿಳಿಸಿದೆ. ಪಾಕಿಸ್ತಾನ ಸರ್ಕಾರ ಭಾರತದಲ್ಲಿ ಇತ್ತೀಚೆಗೆ ನಡೆದ ಒಲಂಪಿಕ್ಸ್ ಆಟಕ್ಕೆ ಆಟಗಾರರನ್ನು ಕಳುಹಿಸಲು ಅನುಮತಿ ನೀಡಿದೆ.

ಆದರೆ, ವಿಶ್ವ ಕಪ್ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಕಳುಹಿಸಲು ಪಾಕಿಸ್ತಾನ ಸರ್ಕಾರ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬೇಸರ ವ್ಯಕ್ತಪಡಿಸಿದೆ.

ಭಾರತದಲ್ಲಿ ಬೀಗಿ ಭದ್ರತೆ ಬಗ್ಗೆ ಪಾಕಿಸ್ತಾನ ಆಧಾರ ರಹಿತವಾಗಿ ಆರೋಪಿಸುತ್ತದೆ ಆಗೇನಾದರೂ ಭದ್ರತೆ ಇಲ್ಲದೆ ತೊಂದರೆಗಳಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಐಸಿಸಿ ಹೇಳಿದೆ. ಪಾಕಿಸ್ತಾನ ಸರ್ಕಾರ ತಮ್ಮ ಕ್ರಿಕೆಟ್ ತಂಡವನ್ನು ಕಳುಹಿಸುತ್ತದೆಯೋ ಇಲ್ಲ ಎಂಬ ನಿರ್ಧಾರವನ್ನು ತಿಳಿಸಬೇಕು ನಿರ್ಧಾರಕ್ಕಾಗಿ ಐಸಿಸಿ ಕಾಯುತ್ತಿದೆ ಎಂದು ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Amid mounting speculation on Pakistan's participation in next month's World Twenty20 in India, the country's Cricket Board today said it is not under any pressure from the ICC to send its team and a final decision remains solely dependent on government clearance.
Please Wait while comments are loading...