ಹಸ್ಸಿಗೆ ಟೀಂ ಇಂಡಿಯಾ ಕೋಚ್ ಆಗಲು ಆಫರ್ ಸಿಕ್ಕಿತಂತೆ!

Posted By:
Subscribe to Oneindia Kannada

ಮೆಲ್ಬೋರ್ನ್, ಮಾ. 03: ಟೀಂ ಇಂಡಿಯಾದ ಮುಖ್ಯ ಕೋಚ್ ಆಗುವಂತೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಹಸ್ಸಿ ಅವರಿಗೆ ಆಫರ್ ಬಂದಿತ್ತಂತೆ. ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರು ಹಸ್ಸಿ ಅವರ ಬಳಿ ಈ ಬಗ್ಗೆ ಪ್ರಸ್ತಾಪಿಸಿದ್ದರು ಎಂಬ ಸುದ್ದಿ ಹೊರ ಬಂದಿದೆ. ಈ ವಿಷಯವನ್ನು ಹಸ್ಸಿ ಅವರೇ ತಮ್ಮ ಹೊಸ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಬಿಸಿಸಿಐನ ಸಲಹಾ ಸಮಿತಿ ಸದ್ಯಸ್ಯರಾಗುವುದಕ್ಕೂ ಮುನ್ನ ಐಪಿಎಲ್ ಪಂದ್ಯವೊಂದು ಮುಗಿದ ಬಳಿಕ ಲಕ್ಷ್ಮಣ್ ಅವರು ತಮ್ಮಲ್ಲಿ ಈ ಪ್ರಸ್ತಾಪವಿಟ್ಟಿದ್ದರು ಎಂದು ತಮ್ಮ 3ನೇ ಪುಸ್ತಕ ‘ವಿನ್ನಿಂಗ್ ಎಡ್ಜ್'ನಲ್ಲಿ ಹಸ್ಸಿ ವಿವರಿಸಿದ್ದಾರೆ.

VVS Laxman asked Michael Hussey to coach Team India

‘ಮಹೇಲ ಜಯವರ್ಧನೆ ಶ್ರೀಲಂಕಾ ತಂಡಕ್ಕೆ ಸಹಾಯಕ ಕೋಚ್ ಆಗುವಂತೆ ಮೊದಲಿಗೆ ಆಹ್ವಾನಿಸಿದ್ದರು. ಆ ಬಳಿಕ ಭವಿಷ್ಯದಲ್ಲಿ ಮುಖ್ಯ ಕೋಚ್ ಹುದ್ದೆಯ ನಿರೀಕ್ಷೆ ಮೂಡಿಸಿದ್ದರು. ನಂತರ ವಿವಿಎಸ್ ಲಕ್ಷ್ಮಣ್ ಅವರು ಭಾರತ ತಂಡದ ಮುಖ್ಯ ಕೋಚ್ ಹುದ್ದೆಯ ಪ್ರಸ್ತಾಪವಿಟ್ಟಿದ್ದರು. ಆದರೆ, ಎರಡೂ ತಂಡಕ್ಕೆ ನಾನು ಸಾಧ್ಯವಿಲ್ಲ ಎಂದು ಉತ್ತರಿಸಿದ್ದೆ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಪ್ರಮುಖ ತಂಡಗಳ ಕೋಚ್ ಆಗುವುದೆಂದರೆ ಕುಟುಂಬದಿಂದ ಬಹುಕಾಲ ದೂರ ಉಳಿಯಬೇಕು ಕನಿಷ್ಠ 10 ತಿಂಗಳು ಆ ತಂಡದ ಜೊತೆಗೆ ಪ್ರವಾಸ ಕೈಗೊಳ್ಳಬೇಕು ಇದು ಸಾಧ್ಯವಿಲ್ಲದ ಮಾತು. ವೃತ್ತಿ ಬದುಕು ಮುಗಿದ ಬಳಿಕ ನನ್ನ ಕುಟುಂಬದ ಸಂತೋಷದಿಂದ ಕಾಲ ಕಳೆಯುವ ನಿರ್ಧಾರ ಮಾಡಿಕೊಂಡಿದ್ದೇನೆ. ಜೊತೆಗೆ ನನಗೆ ಪೂರ್ಣ ಪ್ರಮಾಣದ ಕೋಚ್ ಆಗುವ ಯಾವ ಆಸಕ್ತಿಯೂ ಇಲ್ಲ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Australia batsman Michael Hussey has revealed in his latest book that he was asked by former India batsman VVS Laxman if he was interested in coaching India. That approach was made during the last IPL, barely a month before Laxman was inducted by the BCCI into its three-man advisory panel.
Please Wait while comments are loading...