ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಪ್ರಾಯೋಜಕತ್ವ: ಬಿಸಿಸಿಐಗೆ 2 ಸಾವಿರ ಕೋಟಿ ರು. ಕೊಟ್ಟ ವಿವೊ

ಮುಂದಿನ ಐದು ವರ್ಷಗಳ ಐಪಿಎಲ್ ಗಳ ಶೀರ್ಷಿಕೆ ಪ್ರಾಯೋಜಕತ್ವ ಖರೀದಿಸಿದ ವಿವೊ ಮೊಬೈಲ್ ಕಂಪನಿ. ಪ್ರತಿ ವರ್ಷದ ಆವೃತ್ತಿಗೆ 440 ಕೋಟಿ ರು. ನಂತೆ ಐದು ವರ್ಷಗಳಿಗೆ 2,200 ಕೋಟಿ ರು. ನೀಡಿದ ಕಂಪನಿ.

ಮುಂಬೈ, ಜೂನ್ 27: ಚೀನಾದ ಮೊಬೈಲ್ ಕಂಪನಿಯಾದ ವಿವೊ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಮುಂದಿನ ಐದು ವರ್ಷಗಳಿಗೆ ಅನ್ವಯವಾಗುವಂತೆ ಬಿಸಿಸಿಐಗೆ 2,200 ಕೋಟಿ ರು. ನೀಡಿ ಹಕ್ಕುಗಳನ್ನು ಪಡೆದುಕೊಂಡಿದೆ.

ಐದು ವರ್ಷಗಳ ಐಪಿಎಲ್ ಗಳಿಗೆ ಪ್ರತಿ ವರ್ಷದ ಆವೃತ್ತಿಗೆ ತಲಾ 440 ಕೋಟಿ ರು. ಲೆಕ್ಕಾಚಾರದಲ್ಲಿ ಈ ಹಣ ನೀಡಲಾಗಿದೆ.

VIVO retains IPL title sponsorship for five years with Rs 2,199 crore bid

2016 ಹಾಗೂ 2017ರ ಐಪಿಎಲ್ ಗಳ ಶೀರ್ಷಿಕೆ ಪ್ರಾಯೋಜಕತ್ವವನ್ನು ಇದೇ ವಿವೊ ಕಂಪನಿಯೇ ಪಡೆದುಕೊಂಡಿತ್ತು. ಆ ಎರಡು ಆವೃತ್ತಿಗಳಲ್ಲಿ ತಲಾ 100 ಕೋಟಿ ರು.ಗಳನ್ನು ವಿವೊ ಗಳಿಸಿದೆ ಎಂದು ಹೇಳಲಾಗಿದೆ.

ಇದೀಗ, 2018ರಿಂದ 2022ರವರೆಗೆ ಹಕ್ಕುಗಳನ್ನು ಪಡೆದಿರುವುದು ಕಂಪನಿಯ ವಾರ್ಷಿಕ ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಬಹುದೆಂದು ನಿರೀಕ್ಷಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಟೆಂಡರ್ ಆಹ್ವಾನಿಸಿತ್ತು. ಈ ಟೆಂಡರ್ ನಲ್ಲಿ ಜಯಿಸಿರುವ ವಿವೊಗೆ ಈ ಹಕ್ಕುಗಳು ಲಭ್ಯವಾಗಿವೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X