ಕೊಹ್ಲಿ ದ್ವಿಶತಕ ಸಂಭ್ರಮ ಹೆಚ್ಚಿಸಿದ ರಿಚರ್ಡ್ಸ್ ಪುತ್ರ ನೀಡಿದ ಗಿಫ್ಟ್

Posted By:
Subscribe to Oneindia Kannada

ಬೆಂಗಳೂರು, ಜುಲೈ 26: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 92 ರನ್ ಗಳಿಂದ ಗೆದ್ದ ಸಂಭ್ರಮದಲ್ಲಿರುವ ಕೊಹ್ಲಿಗೆ ವಿಶಿಷ್ಟ ಉಡುಗೊರೆ ಸಿಕ್ಕಿದೆ. ಕೊಹ್ಲಿ ತಂಗಿರುವ ಹೋಟೆಲ್ ಗೆ ವಿಶೇಷ ಅತಿಥಿಗಳು ಬಂದು ಈ ಗಿಫ್ಟ್ ನೀಡಿದ್ದಾರೆ.

ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಹಾಗೂ ಅವರ ಪುತ್ರ 32 ವರ್ಷ ವಯಸ್ಸಿನ ಮಾಲಿ ಅಕ್ಸೆಂಡಾರ್ ರಿಚರ್ಡ್ಸ್ ಅವರು ಮೊದಲ ಟೆಸ್ಟ್ ಪಂದ್ಯ ಮುಕ್ತಾಯದ ನಂತರ ಕೊಹ್ಲಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. [ದ್ವಿಶತಕ ಸಾಧನೆ ಮಾಡಿದ ಟೀಂ ಇಂಡಿಯಾ ಕ್ಯಾಪ್ಟನ್ಸ್]

ವೆಸ್ಟ್ ಇಂಡೀಸ್ ಅಲ್ಲದೆ ವಿದೇಶಿ ನೆಲದಲ್ಲಿ ಭಾರತದ ನಾಯಕನಾಗಿ ಮೊಟ್ಟ ಮೊದಲ ಬಾರಿಗೆ ದ್ವಿಶತಕ ಸಿಡಿಸಿದ ಕೊಹ್ಲಿಯ ಸಾಧನೆಯನ್ನು ಶ್ಲಾಘಿಸಿದರು. [ದ್ವಿಶತಕ ಸಾಧಕನಿಗೆ ಬ್ಯಾಟಿಂಗ್ ದಿಗ್ಗಜನಿಂದ ಶಹಬ್ಬಾಸ್]

ಆಂಟಿಗ್ವಾದಲ್ಲಿರುವ ತಮ್ಮ ಹೆಸರಿನ (ಸರ್ ವಿವಿಯನ್ ರಿಚರ್ಡ್ಸ್) ಮೈದಾನದಲ್ಲೇ ಈ ಕೊಹ್ಲಿ ಸಾಧನೆ ಮಾಡಿರುವುದನ್ನು ಖುದ್ದು ಕಾಮೆಂಟ್ರಿ ಬಾಕ್ಸ್ ನಲ್ಲಿದ್ದು ರಿಚರ್ಡ್ಸ್ ವೀಕ್ಷಿಸಿದ್ದು ವಿಶೇಷ.

ಕೊಹ್ಲಿ ಅವರ ಅಭಿಮಾನಿಯಾಗಿರುವ ರಿಚರ್ಡ್ಸ್ ಅವರ ಪುತ್ರ ಅಲೆಕ್ಸಾಂಡರ್ ಅವರು ಕೊಹ್ಲಿಯನ್ನು ಖುದ್ದು ಭೇಟಿ ಮಾಡಿ, ಅವರಿಗೆ ಕಲಾಕೃತಿಯನ್ನು ಉಡುಗೊರೆಯಾಗಿ ನೀಡುವ ಬಯಕೆ ವ್ಯಕ್ತಪಡಿಸಿದ್ದರು. ಅದರಂತೆ ಆಪ್ಪ, ಮಗ ಹಾಗೂ ಕೊಹ್ಲಿ ಚಿತ್ರ ಬಿಡಿಸಿದ ಕಲಾವಿದ ಎಲ್ಲರೂ ಕೊಹ್ಲಿಯನ್ನು ಭೇಟಿ ಮಾಡಿದ್ದಾರೆ.

ಆರ್ಟ್ ಗ್ಯಾಲರಿಯನ್ನು ಹೊಂದಿರುವ ರಿಚರ್ಡ್ಸ್ ಪುತ್ರ

ಆರ್ಟ್ ಗ್ಯಾಲರಿಯನ್ನು ಹೊಂದಿರುವ ರಿಚರ್ಡ್ಸ್ ಪುತ್ರ

ಸೃಜನಾತ್ಮಕ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ THOC (The House of Creativity) ಎಂಬ ಗ್ಯಾಲರಿಯನ್ನು ಮಾಲಿ ಸ್ಥಾಪಿಸಿದ್ದಾರೆ.

ಮಾಲಿ ಅವರು ಕೂಡಾ ಕ್ರಿಕೆಟ್ ಆಡಿದ್ದಾರೆ

ಮಾಲಿ ಅವರು ಕೂಡಾ ಕ್ರಿಕೆಟ್ ಆಡಿದ್ದಾರೆ

ರಿಚರ್ಡ್ಸ್ ಪುತ್ರ ಮಾಲಿ ಅವರು 18 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಆದರೆ, ನಂತರ ಕ್ರಿಕೆಟ್ ನಲ್ಲಿ ಅಷ್ಟಾಗಿ ಆಸಕ್ತಿ ಬೆಳೆಸಿಕೊಳ್ಳಲಿಲ್ಲ. ರಿಚರ್ಡ್ಸ್ ಅವರು ನಿವೃತ್ತಿ ಬಳಿಕ ಹವ್ಯಾಸಿ ಕಾಮೆಂಟೆಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಹ್ಲಿ ಆಟವನ್ನು ಇಬ್ಬರು ಬಹುವಾಗಿ ಮೆಚ್ಚುತ್ತಾರೆ.

ಟೆಸ್ಟ್ ಸರಣಿಗೂ ಮುನ್ನ ಕೊಹ್ಲಿ- ರಿಚರ್ಡ್ಸ್ ಭೇಟಿ

ಟೆಸ್ಟ್ ಸರಣಿಗೂ ಮುನ್ನ ಕೊಹ್ಲಿ- ರಿಚರ್ಡ್ಸ್ ಭೇಟಿ


ಟೆಸ್ಟ್ ಸರಣಿಗೂ ಮುನ್ನ ಕೊಹ್ಲಿ ಅವರನ್ನು ವಿವಿಯನ್ ರಿಚರ್ಡ್ಸ್ ಭೇಟಿ ಮಾಡಿದ್ದರು. ಟೀಂ ಇಂಡಿಯಾದ ಇತರೆ ಸದಸ್ಯರ ಜೊತೆ ಚರ್ಚಿಸಿದ್ದರು.ಕ್ರಿಕೆಟ್ ದಿಗ್ಗಜ ರಿಚರ್ಡ್ಸ್ ರ ಜತೆ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿದ್ದರು.

ಎರಡನೇ ಟೆಸ್ಟ್ ಗೆ ಸಿದ್ಧತೆ ಜೋರು

ಎರಡನೇ ಟೆಸ್ಟ್ ಗೆ ಸಿದ್ಧತೆ ಜೋರು

ಜುಲೈ 30ರಿಂದ ಜಮೈಕಾದಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದಕ್ಕಾಗಿ ಕೊಹ್ಲಿ ಹಾಗೂ ಟೀಂ ಇಂಡಿಯಾ ಹೆಚ್ಚಿನ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After completing a record innings and 92-run victory over the West Indies in the 1st Test, India captain Virat Kohli had special guests visiting him at the team hotel.
Please Wait while comments are loading...