ದ್ವಿಶತಕ ಸಾಧಕನಿಗೆ ಬ್ಯಾಟಿಂಗ್ ದಿಗ್ಗಜನಿಂದ ಶಹಬ್ಬಾಸ್

Written By:
Subscribe to Oneindia Kannada

ಅಂಟಿಗುವಾ,ಜುಲೈ, 23: ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ದಿಗ್ಗಜ ಸರ್ ವಿವಿಯನ್ ರಿಚರ್ಡ್ಸ್ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. ಮೊದಲ ಟೆಸ್ಟ್ ನಲ್ಲಿ ದ್ವಿಶತಕ ಸಾಧನೆ ಮಾಡಿದ ವಿರಾಟ್ ಟೆಸ್ಟ್ ಪಂದ್ಯವನ್ನು ಭಾರತದ ನಿಯಂತ್ರಣಕ್ಕೆ ತಂದು ಕೊಟ್ಟಿದ್ದಾರೆ.

ಬಿಸಿಸಿಐಗೆ ಹೇಳಿಕೆ ನೀಡಿರುವ ರಿಚರ್ಡ್ಸ್, ಈ ಪಿಚ್ ನಲ್ಲಿ ದ್ವಿಶತಕ ಸಾಧನೆ ಸುಲಭದ ಮಾತಲ್ಲ. ವೆಸ್ಟ್ ಇಂಡೀಸ್ ವಾತಾವರಣದಲ್ಲಿ ಬ್ಯಾಟಿಂಗ್ ಮಾಡುವುದು ನಿಜಕ್ಕೂ ಸವಾಲಿನ ಕೆಲಸ' ಎಂದಿದ್ದಾರೆ.[ಕ್ಯಾಪ್ಟನ್ ಕೊಹ್ಲಿ ದ್ವಿಶತಕ, 84 ವರ್ಷಗಳ ಕಾಯುವಿಕೆ ಅಂತ್ಯ!]

cricket

ಟೆಸ್ಟ್ ಸರಣಿಯನ್ನು ಆಡಲು ವಿಂಡೀಸ್ ಗೆ ತೆರಳಿದ್ದ ವಿರಾಟ್ ಕೊಹ್ಲಿ ನೇತೃತ್ವದ ತಂಡ ಮತ್ತು ರಿಚರ್ಡ್ಸ್ ಜತೆ ಒಟ್ಟಿಗೆ ಕಾಲ ಕಳೆದಿತ್ತು. ನಾಯಕ ವಿರಾಟ್ ಕೊಹ್ಲಿ, ಮುರಳಿ ವಿಜಯ್, ಶಿಖರ್ ಧವನ್, ಅಜಿಂಕ್ಯ ರಹಾನೆ, ಕೆ ಎಲ್ ರಾಹುಲ್, ಸ್ಟುವರ್ಟ್ ಬಿನ್ನಿ ಬ್ಯಾಟಿಂಗ್ ದಿಗ್ಗಜನಿಂದ ಟಿಪ್ಸ್ ಪಡೆದುಕೊಂಡಿದ್ದರು.['ನನ್ನ ಹೃದಯ ಗೆದ್ದ ದಾಂಡಿಗ ವಿರಾಟ್' ಎಂದ ವಿಂಡೀಸ್ ದಿಗ್ಗಜ]

virat

ನಾನು ವಿರಾಟ್ ಆಟವನ್ನು ಯಾವಾಗಲೂ ಇಷ್ಟಪಡುತ್ತೇನೆ. ನನ್ನ ಹೃದಯ ಗೆದ್ದ ಬ್ಯಾಟ್ಸ್ ಮನ್ ಯಾರಾದರೂ ಇದ್ದರೆ ಅದು ವಿರಾಟ್ ಮಾತ್ರ. ಅವರ ಆಕ್ರಮಣಶೀಲತೆ ನನಗೆ ಇಷ್ಟ ಆಗುತ್ತದೆ. ಒಂದು ಕಾಲದ ನನ್ನ ವ್ಯಕ್ತಿತ್ವವನ್ನು ವಿರಾಟ್ ಅವರಲ್ಲಿ ಕಾಣುತ್ತಿದ್ದೇನೆ" ಎಂದು ರಿಚರ್ಡ್ಸ್ ಹೇಳಿದ್ದರು. ಇದೀಗ ವಿರಾಟ್ ಗೆ ಬ್ಯಾಟಿಂಗ್ ದಂತಕತೆ ಮತ್ತೊಂದು ಶಹಬ್ಬಾಸ್ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
West Indian batting legend Sir Vivian Richards has praised Indian captain Virat Kohli after he scored his maiden double century in the 1st Test on Friday (July 22).On the second day at the Sir Vivian Richards Stadium, Kohli struck a magnificent 200 to put India in control of the Test. India declared at 566/8 and the home team was 33/1 at stumps.
Please Wait while comments are loading...