ಸೆಹ್ವಾಗ್ ಬರ್ತ್ ಡೇಗೆ 'ಟ್ವಿಟ್ಟರ್ ಟ್ರಾಲ್ ಕಿಂಗ್' ಹೆಸರು

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 20: ಟೀಂ ಇಂಡಿಯಾ ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರಿಗೆ ಗುರುವಾರ ಹುಟ್ಟುಹಬ್ಬದ ಸಂಭ್ರಮ. ನಿವೃತ್ತಿ ಬಳಿಕ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿರುವ ಸೆಹ್ವಾಗ್ ಗೆ ಟ್ವಿಟ್ಟರ್ ಟ್ರಾಲ್ ಕಿಂಗ್ ಎಂದು ಪ್ರೀತಿಯಿಂದ ಅಭಿಮಾನಿಗಳು ಕರೆದಿದ್ದಾರೆ.

ನಜಾಫ್ ಘಡದ ನವಾಬ ಸೆಹ್ವಾಗ್ ಅವರಿಗೆ ಹಾಲಿ, ಮಾಜಿ ಕ್ರಿಕೆಟರ್ಸ್ ಸೇರಿದಂತೆ ಹಲವಾರು ಮಂದಿ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ. ಬೆಳಗ್ಗೆ #HappyBirthdayViru' ಫುಲ್ ಟ್ರೆಂಡಿಂಗ್ ಇತ್ತು.

Virender Sehwag turns 38: Twitterati greet Nawab of Najafgarh

ಚುಟುಕಾಗಿ ವಿಕಟ ಕವಿಯಂತೆ ಎಲ್ಲರ ಕಾಲೆಳೆಯುವ ಸೆಹ್ವಾಗ್ ಸದ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲರ ಮೆಚ್ಚಿನ ಸೆಲೆಬ್ರಿಟಿಯೇನೋ ಹೌದು. ಕ್ರಿಕೆಟ್ ಕಾಮೆಂಟ್ರಿ ಕೂಡಾ ಶುರು ಮಾಡಿರುವ ಸೆಹ್ವಾಗ್ ಮುಂದೆ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗೊತ್ತಿಲ್ಲ. ಕೆಲ ವರ್ಷಗಳ ಹಿಂದೆ ರಾಜೀನಾಮೆ ಗಾಳಿ ಸುದ್ದಿಗಳು ಹಬ್ಬಿದಾಗ ಹುಟ್ಟುಹಬ್ಬದ ದಿನದಂದೇ ನಿವೃತ್ತಿ ಘೋಷಿಸಿದ್ದರು.

104 ಪಂದ್ಯಗಳಲ್ಲಿ 8586 ಟೆಸ್ಟ್ ರನ್ ಗಳು ಹಾಗೂ 251 ಏಕದಿನ ಪಂದ್ಯಗಳಲ್ಲಿ 8273ರನ್ ಗಳನ್ನು ಚೆಚ್ಚಿದ್ದಾರೆ. ಅಲ್ಲದೆ ಎರಡು ತ್ರಿಶತಕ ಬಾರಿಸಿರುವ ಭಾರತದ ಏಕೈಕ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಸೆಹ್ವಾಗ್ ಹುಟ್ಟುಹಬ್ಬಕ್ಕೆ ಬಂದಿರುವ ಶುಭಹಾರೈಕೆ ಟ್ವೀಟ್ಸ್ ಮುಂದಿವೆ ನೋಡಿ:

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former India cricketer and explosive opener Virender Sehwag turned 38 years old on Thursday (Oct 20). Wishes for the Nawab of Najafgarh are pouring in from former and current cricketers to sportspersons and fans to cricket enthusiasts.
Please Wait while comments are loading...