ಅಗರ್ಕರ್ 'ಆಧುನಿಕ ಆರ್ಯಭಟ' ಎಂದ ಸೆಹ್ವಾಗ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05: ಟೀಂ ಇಂಡಿಯಾದ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ ಅವರು ಟ್ವಿಟ್ಟರ್ ನಲ್ಲಿ ಎಲ್ಲರನ್ನು ಕಿಚಾಯಿಸುತ್ತಾ 'ಟ್ರಾಲ್ ಕಿಂಗ್' ಎನಿಸಿಕೊಂಡಿರುವುದು ಗೊತ್ತಿರಬಹುದು. ಅಜಿತ್ ಅಗರ್ಕರ್ ಅವರ ಹುಟ್ಟುಹಬ್ಬದಂದು ಸೆಹ್ವಾಗ್ ಅವರು ವಿಶೇಷವಾಗಿ ಶುಭಹಾರೈಸಿದ್ದಾರೆ.

'ನಜಾಫ್ ಘಡದ ನವಾಬ್' ಅವರು ತಮ್ಮದೇ ಆದ ರೀತಿಯಲ್ಲಿ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ವೇಗಿ ಅಜಿತ್ ಅಗರ್ಕರ್ ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನ ಸಾಧನೆಗಳ ಬಗ್ಗೆ ಹೇಳುತ್ತಾ ಸೆಹ್ವಾಗ್ ಸಕತ್ತಾಗಿ ಟ್ರಾಲ್ ಮಾಡಿದ್ದಾರೆ. ಅಜಿತ್ ಅವರನ್ನು 'ಆಧುನಿಕ ಆರ್ಯಭಟ' ಎಂದು ಕರೆದಿದ್ದಾರೆ.

Virender Sehwag trolls birthday boy Ajit Agarkar, calls him 'Modern Day Aryabhatt'

ಅಗರ್ಕರ್ ಅವರು 2013ರಲ್ಲೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದು, ಲಾರ್ಡ್ಸ್ ನಲ್ಲಿ ಶತಕ ಬಾರಿಸಿದ್ದು ಅವರ ಸಾಧನೆಯಾಗಿದೆ. 26 ಟೆಸ್ಟ್ ಪಂದ್ಯಗಳಿಂದ 58 ವಿಕೆಟ್ ಗಳಿಸಿರುವ ಅಗರ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್ ಪಂದ್ಯ(2003)ದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದು ಮರೆಯುವಂತಿಲ್ಲ.

ಅಗರ್ಕರ್ ಅವರು ಏಕದಿನ ಕ್ರಿಕೆಟ್ ನಲ್ಲಿ 95 ರನ್ ಗರಿಷ್ಠಮೊತ್ತವಾಗಿದ್ದು, 80.62 ಸ್ರೈಕ್ ರೇಟ್ ಹೊಂದಿದ್ದಾರೆ. ಆದರೆ, ಸತತ ಶೂನ್ಯಕ್ಕೆ ಔಟಾಗಿದ್ದು ಅವರ ಮತ್ತೊಂದು ವಿಚಿತ್ರ ದಾಖಲೆಯಾಗಿದ್ದು, ಅದನ್ನು ಸೆಹ್ವಾಗ್ ಗುರುತಿಸಿ ಕಿಚಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former India opener Virender Sehwag on Sunday (Dec 4) greeted former India all-rounder Ajit Agarkar on his 39th birthday.
Please Wait while comments are loading...