'ಸಿಕ್ಸರ್' ಬಾರಿಸಿ ಧೋನಿ ದಾಖಲೆ ಪುಡಿ ಮಾಡಿದ ಸೆಹ್ವಾಗ್

Written By:
Subscribe to Oneindia Kannada

ನವದೆಹಲಿ, ಜೂನ್ 16: ವೀರೇಂದ್ರ ಸೆಹ್ವಾಗ್ ಸಿಕ್ಸರ್ ಬಾರಿಸಿದ್ದಾರೆ ಜತೆಗೆ ಎಂ ಎಸ್ ಧೋನಿ ದಾಖಲೆಯನ್ನು ಹಿಂದಕ್ಕೆ ಅಟ್ಟಿದ್ದಾರೆ. ಅರೇ,,ಸೆಹ್ವಾಗ್ ಕ್ರಿಕೆಟ್ ಅಂಗಣದಿಂದ ದೂರ ಇದ್ದು ತುಂಬಾ ದಿನ ಆಯ್ತಲ್ಲ. ಅದು ಹೇಗೆ ಸಿಕ್ಸರ್ ಬಾರಿಸಿದರು ಎಂದು ಆಶ್ಚರ್ಯ ಪಡಬೇಡಿ.

ವೀರೇಂದ್ರ ಸೆಹ್ವಾಗ್ ಭಾರತದ ನಾಯಕ ಎಂಎಸ್ ಧೋನಿ ದಾಖಲೆಯನ್ನು ಪುಡಿ ಮಾಡಿದ್ದಾರೆ. ಧೋನಿ ಟ್ವಿಟ್ಟರ್ ನಲ್ಲಿ 5.6 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರೆ ಅದನ್ನು ಮೀರಿದ ಸೆಹ್ವಾಗ್ ಆರು ಮಿಲಿಯನ್ ಫಾಲೋವರ್ಸ್ ಪಡೆದುಕೊಂಡಿದ್ದಾರೆ.[ಸೆಹ್ವಾಗ್ ಹೇಳಿದ ಟಿ 20 ಭವಿಷ್ಯ ನಿಜವಾಯಿತು]

cricket

ಸೆಹ್ವಾಗ್ ಸಿಕ್ಸರ್ ಬಾರಿಸಿರುವುದು ಟ್ವಿಟರ್ ನಲ್ಲಿ. ಸೆಹ್ವಾಗ್ ಟ್ವಿಟ್ಟರ್ ಖಾತೆ ಬರೋಬ್ಬರಿ 6 ಮಿಲಿಯನ್ ಫಾಲೋವರ್ಸ್ ಸಂಖ್ಯೆ ತಲುಪಿದೆ. ಸಾಮಾಜಿಕ ತಾಣವನ್ನು ಚೆನ್ನಾಗಿಯೇ ಬಳಸಿಕೊಳ್ಳುವುದನ್ನು ಕಲಿತಿರುವ ಸೆಹ್ವಾಗ್ ಕ್ರಿಕೆಟ್ ಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.[ಹಿರಿಯರ ಪಂದ್ಯದಲ್ಲಿ ಸೆಹ್ವಾಗ್ ಕರಾಮತ್ತು]

ಆರು ಮಿಲಿಯನ್ ಹಿಂಬಾಲಕರನ್ನು ಪಡೆದ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಫೋಟೋವೊಂದನ್ನು ಅಪ್ ಲೋಡ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. " ನಿಮ್ಮ ಪ್ರೀತಿ ವೀರು ಸಿಕ್ಸರ್ ಬಾರಿಸಲು ಸಾಧ್ಯಮಾಡಿತು" ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Virender Sehwag hits a Six!
English summary
Former India opener Virender Sehwag who shattered several records with the bat, has now achieved an unique feat off the field.The former Delhi batsman, who is famous for his witty oneliner tweets on micro-blogging site, has now achieved 6 million followers.
Please Wait while comments are loading...