ಬ್ರಿಟಿಶ್ ಪತ್ರಕರ್ತ ಮಾರ್ಗನ್ ಗೆ ಸೆಹ್ವಾಗ್ ಟ್ವೀಟ್ ಪಂಚ್!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 25: ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತಕ್ಕೆ ಎರಡು ಪದಕ ಬಂದಿದ್ದಕ್ಕೆ ಸಂಭ್ರಮಿಸುತ್ತಿರುವ ರೀತಿಯನ್ನು ಟೀಕಿಸಿದ್ದ ಬ್ರಿಟಿಷ್ ಪತ್ರಕರ್ತನ ವಿರುದ್ಧ ಕ್ರೀಡಾಭಿಮಾನಿಗಳು ತಿರುಗಿ ಬಿದ್ದಿ ಸುದ್ದಿ ಓದಿರುತ್ತೀರಿ. ಪತ್ರಕರ್ತ ಪಿಯರ್ಸ್ ಮಾರ್ಗನ್ ಟ್ವೀಟ್ ಗೆ ಪ್ರತಿ ಟ್ವೀಟ್ ಗಳ ದಾಳಿ ಮುಂದುವರೆದಿದ್ದು, ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಕೊಟ್ಟ ಪ್ರತಿಕ್ರಿಯೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ.

1.2 ಬಿಲಿಯನ್ ಜನರಿರುವ ದೇಶದಲ್ಲಿ 2 ಪದಕ ಗೆದ್ದ(ಸೋಲುವ ಪದಕ)ಸಂಭ್ರಮಾಚರಣೆ ಮುಜುಗರ ತರಿಸುವುದಿಲ್ಲವೇ? ಎಂದು ಮಂಗಳವಾರ ಟ್ವೀಟ್ ಮಾಡಿದ್ದರು. [ಬ್ರಿಟಿಷ್ ಪತ್ರಕರ್ತನ ವಿರುದ್ಧ ಭಾರತೀಯರು ತಿರುಗಿ ಬಿದ್ದಿದ್ದೇಕೆ?]

Virender Sehwag hits back at Piers Morgan for mocking India's Olympic celebration

ಹಿರಿಯ ಪತ್ರಕರ್ತ ಮಾರ್ಗನ್ ಅವರ ಟ್ವೀಟ್ ಗೆ ಸೆಹ್ವಾಗ್ ಸಕತ್ ಆಗಿ ಪ್ರತಿಕ್ರಿಯಿಸಿ, ಕ್ರಿಕೆಟ್ ಜನಕ ಇಂಗ್ಲೆಂಡ್ ಕೂಡಾ ಇನ್ನೂ ವಿಶ್ವಕಪ್ ಗೆದ್ದಿಲ್ಲ, ಪ್ರತಿ ಬಾರಿ ಟೂರ್ನಿಗೆ ಯಾವ ಮುಖ ಹೊತ್ತುಕೊಂಡು ಆಡಲು ಬರುತ್ತಾರೋ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.[ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು ಈಗ 13 ಕೋಟಿ ರು ಒಡತಿ]


ಹರ್ಯಾಣದ ಸಾಕ್ಷಿ ಮಲಿಕ್ ಅವರು 58 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರೆ, ಪಿವಿ ಸಿಂಧು ಅವರು ಬಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಅದರೆ, ಈ ಸಣ್ಣಪುಟ್ಟ ಸಂಭ್ರಮವೇ ನಮಗೆ ಅಧಿಕ ಎಂದು ಸೆಹ್ವಾಗ್ ಹೇಳಿದ್ದರು.

ಆದರೆ, ಸೆಹ್ವಾಗ್ ಗೆ ಉತ್ತರಿಸಲು ಹೋಗಿ ಮತ್ತೆ ಮಾರ್ಗನ್ ಎಡವಿದರು. ಇಂಗ್ಲೆಂಡ್ ಟಿ20 ವಿಶ್ವಕಪ್ ಗೆದ್ದಿದೆ ಎಂದು ಹೇಳಲು ಯತ್ನಿಸಿದ ಮಾರ್ಗನ್ ಗೆ ಸೆಹ್ವಾಗ್ ಟಾಂಗ್ ನೀಡಿದರು.

ಕೆವಿನ್ ಪೀಟರ್ಸನ್ ಇಲ್ಲದೆ ಇಂಗ್ಲೆಂಡ್ ಏನು ಕಿಸಿಯಲು ಆಗುತ್ತಿರಲಿಲ್ಲ. ಆತ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ, ಇಂಗ್ಲೆಂಡಿನಲ್ಲಿ ಆಶ್ರಯ ಪಡೆದಿದ್ದು, ನಿಮ್ಮ ಲಾಜಿಕ್ ಪ್ರಕಾರ ಇಂಗ್ಲೆಂಡ್ 2007ರ ವಿಶ್ವಕಪ್ ಗೆಲ್ಲಬೇಕಿತ್ತು ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former India batsman Virender Sehwag gave an epic response to eminent British journalist Piers Morgan on Twitter for mocking India's celebration of winning 'two' medals at Rio Olympics 2016.
Please Wait while comments are loading...