ಕಬಾಲಿ ಡೇ : ಸೆಹ್ವಾಗ್ ಹೇಳಿದ ಮೂರು 'ಲೀ' ಗಳು

Posted By:
Subscribe to Oneindia Kannada

ನವದೆಹಲಿ, ಜುಲೈ 22: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದೇ ನಾಯಕ ವಿರಾಟ್ ಕೊಹ್ಲಿ ಅವರು ಅಮೋಘ ಶತಕ ಸಿಡಿಸಿದ್ದಾರೆ. ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ 302/4 ಸ್ಕೋರ್ ಮಾಡಿದೆ. ಈ ಬಗ್ಗೆ ಮಾಜಿ ಕ್ರಿಕೆಟರ್ ವೀರೆಂದರ್ ಸೆಹ್ವಾಗ್ ಅವರು ವಿಶಿಷ್ಟ ಟ್ವೀಟ್ ಮಾಡಿದ್ದಾರೆ.

ಕೊಹ್ಲಿ ಅವರ ಮೊದಲ ದಿನದ ಅದ್ಭುತ ಆಟದ ಬಗ್ಗೆ ಮಾಜಿ ಅರಂಭಿಕ ಆಟಗಾರ ಸೆಹ್ವಾಗ್ ಅವರು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

Virender Sehwag hails 3 Li's in fashion: Kohli, Kabali and mooli paratha

ನಜಾಫ್ ಗಢದ ನವಾಬ್ ಅವರು ಮೂರು 'Li' ಗಳು ಈ ದಿನ ಟ್ರೆಂಡಿಂಗ್ ನಲ್ಲಿದೆ. Kohli, Mooli (Paratha) and Kabali ಈ ದಿನದ ಫ್ಯಾಷನ್ ಎಂದಿದ್ದಾರೆ. ಮೂಲಿ ಪರಾಠ ತಿನ್ನುತ್ತಾ ಕಬಾಲಿ ಸಿನಿಮಾ ನೋಡುತ್ತಾ ಸಂಜೆಗೆ ಕೊಹ್ಲಿ ಬ್ಯಾಟಿಂಗ್ ನೋಡುವುದೇ ಆನಂದ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಜುಲೈ 22ರಂದು ಸಾಮಾಜಿಕ ಜಾಲ ತಾಣಗಳಾದ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಕಬಾಲಿ ಜ್ವರ ಹಬ್ಬಿದೆ.ಕಬಾಲಿ ಮೇನಿಯಾದಲ್ಲಿ ಎಲ್ಲರೂ ಮುಳುಗಿದ್ದಾರೆ. ವೆಸ್ಟ್ ಇಂಡೀಸ್ ನಲ್ಲಿರುವ ಸುರೇಶ್ ರೈನಾ ಕೂಡಾ ಟ್ವೀಟ್ ಮಾಡಿ ಕಬಾಲಿಗೆ ಶುಭಹಾರೈಸಿದ್ದರು.

ಸೆಹ್ವಾಗ್ ಅವರು ತಮ್ಮ ಒನ್ ಲೈನರ್ ಗಳ ಮೂಲಕ ಟ್ವಿಟ್ಟರ್ ನಲ್ಲಿ ಹೊಸ ಕ್ರೇಜ್ ಹುಟ್ಟಿಹಾಕಿದ್ದಾರೆ. ಈ ಹಿಂದೆ ಏಷ್ಯಾ ಕಪ್ 2016, ವಿಶ್ವ ಟಿ20 ಸಮಯದಲಿ 'ಬುರಾ ನಾ ಮಾನೋ ಕೊಹ್ಲಿ ಹೈ' ಎಂದು ಟ್ವೀಟ್ ಮಾಡಿದ್ದರು. ನಂತರ ಪಾಕಿಸ್ತಾನದ ಉಮರ್ ಅಕ್ಮಲ್ ಗೆ ಟಾಂಗ್ ನೀಡಿದ್ದರು.(ಒನ್ ಇಂಡಿಯಾ ಸುದ್ದಿ)


ವೆಸ್ಟ್ ಇಂಡೀಸ್ ನಲ್ಲಿರುವ ಕ್ರಿಕೆಟರ್ ಸುರೇಶ್ ರೈನಾರಿಂದ ಟ್ವೀಟ್ ಮಾಡಿ ಕಬಾಲಿ ಹಬ್ಬ ಶುರುವಾಗಲಿದೆ ಎಂದಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Leading from the front, skipper Virat Kohli slammed his 12th Test century to guide India to an impressive 302/4 at stumps on the opening day of the first Test against the West Indies at the Sir Viv Richards stadium here on Thursday.
Please Wait while comments are loading...